ಅಮೆರಿಕಾ ಡೊನಾಲ್ಡ್ ಟ್ರಂಪ್ 
ವಿದೇಶ

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಜಾಗತಿಕವಾಗಿ ಅತ್ಯಂತ ಮಹತ್ವದ ಸಾಗರ ಮಾರ್ಗವಾಗಿರುವ ಹಾರ್ಮುಜ್ ಕುರಿತು ಇರಾನ್ “ತೆರೆಯಲು ಸಿದ್ಧ” ಎಂಬ ಸೂಚನೆ ನೀಡಿದರೂ, ಅದರ ಒಳ ಅರ್ಥವೇ ಸಮಸ್ಯಾತ್ಮಕವಾಗಿದೆ ಎಂದು ರೂಬಿಯೋ ಹೇಳಿದ್ದಾರೆ.

ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಇರಾನ್ ನೀಡಿರುವ ಹಾರ್ಮುಜ್ ಜಲಸಂಧಿ ಕುರಿತ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದು, ಈ ವಿಚಾರದಲ್ಲಿ ಕಠಿಣ ನಿಲುವನ್ನು ಮುಂದುವರೆಸಿದೆ.

ಜಾಗತಿಕವಾಗಿ ಅತ್ಯಂತ ಮಹತ್ವದ ಸಾಗರ ಮಾರ್ಗವಾಗಿರುವ ಹಾರ್ಮುಜ್ ಕುರಿತು ಇರಾನ್ “ತೆರೆಯಲು ಸಿದ್ಧ” ಎಂಬ ಸೂಚನೆ ನೀಡಿದರೂ, ಅದರ ಒಳ ಅರ್ಥವೇ ಸಮಸ್ಯಾತ್ಮಕವಾಗಿದೆ ಎಂದು ರೂಬಿಯೋ ಹೇಳಿದ್ದಾರೆ.

ಇರಾನ್ ಹೇಳಿಕೆಯ ಅರ್ಥ, ಅಂತರರಾಷ್ಟ್ರೀಯ ನೌಕೆಗಳು ತಮ್ಮ ಅನುಮತಿ ಪಡೆದು ಮಾತ್ರ ಸಾಗಬೇಕು ಎಂಬುದಾಗಿದೆ. “ನಮ್ಮ ಅನುಮತಿ ಪಡೆದು, ನಮ್ಮ ನಿಯಮಗಳಿಗೆ ಒಳಪಟ್ಟರೆ ಮಾತ್ರ ಹೋಗಬಹುದು, ಇಲ್ಲವಾದರೆ ಅಪಾಯ ಎದುರಿಸಬೇಕಾಗುತ್ತದೆ” ಎಂಬ ಸಂದೇಶವನ್ನು ಇರಾನ್ ನೀಡುತ್ತಿದೆ.

ಈ ರೀತಿಯ ನಿಯಂತ್ರಣವು ಅಂತರರಾಷ್ಟ್ರೀಯ ಸಮುದ್ರ ಕಾನೂನುಗಳಿಗೆ ವಿರುದ್ಧವಾಗಿದ್ದು, ಜಗತ್ತಿನ ಯಾವುದೇ ರಾಷ್ಟ್ರ ಇದನ್ನು ಒಪ್ಪಲಾರದು. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಸಂಪೂರ್ಣ ನಿಯಂತ್ರಣ ಸಾಧಿಸುವುದನ್ನು ಅಥವಾ ಅಲ್ಲಿ ಸಂಚರಿಸುವ ಹಡಗುಗಳಿಂದ ತೆರಿಗೆ ವಸೂಲಿ ಮಾಡುವುದನ್ನು ಅಮೆರಿಕ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಜಲಸಂಧಿಯು ಅಂತರರಾಷ್ಟ್ರೀಯ ಜಲಮಾರ್ಗವಾಗಿದ್ದು, ಜಾಗತಿಕ ತೈಲ ಮತ್ತು ಇಂಧನ ಪೂರೈಕೆಗೆ ಇದು ಅತ್ಯಂತ ನಿರ್ಣಾಯಕವಾಗಿದೆ. ಇದನ್ನು ಮುಚ್ಚುವ ಇರಾನ್‌ನ ಪ್ರಯತ್ನವು ಜಾಗತಿಕ ಆರ್ಥಿಕತೆಯನ್ನು ಒತ್ತೆ ಇಟ್ಟುಕೊಂಡಂತೆ ಎಂದು ಟೀಕಿಸಿದ್ದಾರೆ.

ಇರಾನ್ ಒಂದು ವೇಳೆ ಜಲಸಂಧಿಯನ್ನು ಮುಚ್ಚಲು ಪ್ರಯತ್ನಿಸಿದರೆ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಒಕ್ಕೂಟವು ಅದನ್ನು ಮುಕ್ತಗೊಳಿಸಲು ಶಕ್ತಿಯನ್ನು ಬಳಸಲಿದೆ ಎಂದೂ ಎಚ್ಚರಿಸಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇರಾನ್ ನೀಡಿದ್ದ ಕೆಲವು ಷರತ್ತುಬದ್ಧ ಪ್ರಸ್ತಾಪಗಳನ್ನು ರುಬಿಯೋ ತಿರಸ್ಕರಿಸಿದ್ದಾರೆ.

ಅಂತರರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿ ಜಲಸಂಧಿಯು ಎಲ್ಲರಿಗೂ ಮುಕ್ತವಾಗಿರಬೇಕು ಎಂಬುದು ಅಮೆರಿಕದ ಒತ್ತಾಯವಾಗಿದೆ.

ಇದರ ನಡುವೆಯೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಪ್ರಸ್ತಾವನೆಯನ್ನು ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಚರ್ಚಿಸಿದ್ದು, ಈ ಬೆಳವಣಿಗೆ ಗಂಭೀರತೆಯನ್ನು ಸ್ಪಷ್ಟಪಡಿಸುತ್ತಿದೆ.

ವೈಟ್ ಹೌಸ್ ವಕ್ತಾರ ಕ್ಯಾರೋಲಿನ್ ಲೀವಿಟ್ ಅವರು ಈ ಪ್ರಸ್ತಾವನೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ದೃಢಪಡಿಸಿದ್ದಾರೆ.

ಇರಾನ್ ಪ್ರಸ್ತಾವನೆಯ ಪ್ರಕಾರ, ಅಮೆರಿಕ ತನ್ನ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಿ, ಪ್ರಸ್ತುತ ಯುದ್ಧ ಪರಿಸ್ಥಿತಿಯನ್ನು ಅಂತ್ಯಗೊಳಿಸಿದರೆ, ಹಾರ್ಮುಜ್ ಜಲಸಂಧಿ ಮೇಲಿನ ತನ್ನ ಹಿಡಿತವನ್ನು ಸಡಿಲಿಸಲು ಸಿದ್ಧವಿದೆ ಎಂದು ತಿಳಿಸಿದೆ.

ಈ ಪ್ರಸ್ತಾವನೆ ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ತಲುಪಿರುವುದಾಗಿ ತಿಳಿದುಬಂದಿದೆ. ಆದಾಗ್ಯೂ, ಈ ಒಪ್ಪಂದದಲ್ಲಿ ಇರಾನ್‌ನ ಅಣು ಯೋಜನೆ ಕುರಿತ ಪ್ರಮುಖ ವಿವಾದಗಳನ್ನು ಮುಂದೂಡುವುದಾಗಿ ಹೇಳಿರುವುದು ಅಮೆರಿಕದ ದೃಷ್ಟಿಯಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಈ ವಿಷಯವೇ ಈಗಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿರುವುದರಿಂದ, ಅದನ್ನು ಬಿಟ್ಟು ಯಾವುದೇ ತಾತ್ಕಾಲಿಕ ಒಪ್ಪಂದಕ್ಕೆ ಹೋಗುವುದು ಸಾಧ್ಯವಿಲ್ಲ.

ಫೆಬ್ರವರಿ 28ರಂದು ಆರಂಭವಾದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಳಿಕ ಹಾರ್ಮುಜ್ ಜಲಸಂಧಿ ವಿಷಯ ಮತ್ತಷ್ಟು ಸೂಕ್ಷ್ಮವಾಗಿದೆ. ಜಗತ್ತಿನ ತೈಲ ಸಾಗಾಟದ ಪ್ರಮುಖ ಭಾಗ ಈ ಮಾರ್ಗದ ಮೂಲಕ ಸಾಗುವುದರಿಂದ, ಇಲ್ಲಿ ಉಂಟಾಗುವ ಯಾವುದೇ ಅಡಚಣೆ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಇದೇ ಕಾರಣದಿಂದ, ಈ ಕಣಿವೆಯನ್ನು ಯಾವುದೇ ಒಂದು ದೇಶದ ನಿಯಂತ್ರಣಕ್ಕೆ ಒಳಪಡಿಸುವ ಪ್ರಯತ್ನವನ್ನು ಅಮೆರಿಕ ಮಾತ್ರವಲ್ಲ, ಇತರ ದೇಶಗಳೂ ವಿರೋಧಿಸುತ್ತಿವೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಇರಾನ್ ನೀಡಿದ ಪ್ರಸ್ತಾವನೆ ತಾತ್ಕಾಲಿಕ ಉದ್ವಿಗ್ನತೆ ಕಡಿಮೆ ಮಾಡುವ ಪ್ರಯತ್ನವಾಗಿದ್ದರೂ, ಅದು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಅಮೆರಿಕ ತನ್ನ ಭದ್ರತಾ ಹಿತಾಸಕ್ತಿಗಳು ಮತ್ತು ಜಾಗತಿಕ ಸಾಗರ ಸ್ವಾತಂತ್ರ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಆದ್ದರಿಂದ, ಈ ಪ್ರಸ್ತಾವನೆ ಒಪ್ಪಂದದ ರೂಪ ಪಡೆಯುವ ಸಾಧ್ಯತೆ ಕಡಿಮೆಯೇ ಇದ್ದು, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಸೈನಿಕ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಂಗಳೂರು ಕುಕ್ಕರ್‌ ಬಾಂಬ್ ಬ್ಲಾಸ್ಟ್ ಪ್ರಕರಣ: ಉಗ್ರ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್; Video

ದೆಹಲಿಯಲ್ಲಿ ಗೆದ್ದು ಎಂ. ಚಿನ್ನಸ್ವಾಮಿ ಸೋಲಿನ ಸೇಡು ತೀರಿಸಿದ RCB!

'ಮೋದಿಗೆ ವಿರೋಧ ಪಕ್ಷವಿಲ್ಲದ ಭಾರತ ಬೇಕು, ಹೆಂಡತಿ ಇಲ್ಲದ ಜೀವನ ಬೇಕು, ಬುದ್ಧಿ ಇಲ್ಲದ ಭಕ್ತರು ಬೇಕು...'!

ಹಳಿ ತಪ್ಪಿದ ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು; ತಪ್ಪಿದ ದೊಡ್ಡ ಅನಾಹುತ

ಭುವಿ, ಹ್ಯಾಜಲ್‌ ವಿನಾಶಕಾರಿ ಬೌಲಿಂಗ್: 8 ರನ್​ಗೆ 6 ವಿಕೆಟ್; ಪವರ್ ಪ್ಲೇನಲ್ಲಿ DC ಕಳಪೆ ದಾಖಲೆ, 75 ರನ್​ಗೆ ಆಲೌಟ್!

SCROLL FOR NEXT