ಫೆರ್ರಿಯಲ್ಲಿ ಹಠಾತ್ ಬೆಂಕಿ Online Desk
ವಿದೇಶ

ಇಂಡೋನೇಷ್ಯಾದಲ್ಲಿ 271 ಪ್ರಯಾಣಿಕರಿದ್ದ ಫೆರ್ರಿಯಲ್ಲಿ ಹಠಾತ್ ಬೆಂಕಿ; ಕನಿಷ್ಠ 5 ಸಾವು, 41 ಪ್ರಯಾಣಿಕರು ನಾಪತ್ತೆ

ಇಂಡೋನೇಷ್ಯಾದ ಮಧುರಾ ದ್ವೀಪದ ಸಮುದ್ರ ತೀರದ ಬಳಿ ಸಂಭವಿಸಿದ ಭೀಕರ ಫೆರ್ರಿ ಅಗ್ನಿ ಅವಘಡದಲ್ಲಿ ಐವರು ದಾರುಣವಾಗಿ ಮೃತಪಟ್ಟು, 41 ಜನರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮಧುರಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಮಧುರಾ ದ್ವೀಪದ ಕರಾವಳಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಫೆರ್ರಿ (ಹಡಗು) ಅಗ್ನಿ ಅವಘಡದಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಮತ್ತು 41 ಜನರು ನಾಪತ್ತೆಯಾಗಿದ್ದಾರೆ. ಇನ್ನು ಆ ಹಡಗಿನಲ್ಲಿ ಕನಿಷ್ಠ 271 ಜನರಿದ್ದರು ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ, ಸುರಬಯಾದಿಂದ ಮಕಾಸ್ಸರ್‌ಗೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ (ಫೆರ್ರಿ) ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ಹಡಗಿನಲ್ಲಿ ಸಿಬ್ಬಂದಿ ಸೇರಿ ಒಟ್ಟು 271 ಜನರಿದ್ದರು. ಅವರಲ್ಲಿ 225 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನು 5 ಜನರು ಸಾವನ್ನಪಿದ್ದು, 41 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇನ್ನು ಮೃತರಲ್ಲಿ ಒಬ್ಬ ಗರ್ಭಿಣಿ ಮಹಿಳೆಯೂ ಸೇರಿದ್ದಾರೆ ಎನ್ನಲಾಗಿದ್ದು, ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯ ಮುನುವರೆದಿದೆ.

ಮುಂದುವರೆದು, ಹಡಗಿನ ಮೇಲ್ಭಾಗದ ಡೆಕ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಜಿಗಿದಿದ್ದಾರೆ. ಆದರೆ, ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಏತನ್ಮಧ್ಯೆ, ಇಂಡೋನೇಷ್ಯಾದಲ್ಲಿ 17,000 ಕ್ಕೂ ಹೆಚ್ಚು ದ್ವೀಪಗಳಿರುವುದರಿಂದ ಸಂಚಾರಕ್ಕೆ ಹಡಗುಗಳನ್ನೇ ಹೆಚ್ಚಾಗಿ ಅವಲಂಬಿಸಲಾಗಿದೆ. ಆದರೆ ಕಳಪೆ ಸುರಕ್ಷತಾ ನಿಯಮಗಳಿಂದಾಗಿ ಇಲ್ಲಿ ಇಂತಹ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ

ನಿಮ್ಮಿಂದಂತು ಸರಿಯಾಗಿ ಸರ್ವಾಧಿಕಾರಿಯಾಗಲು ಆಗಲಿಲ್ಲ: ಕಾಂಗ್ರೆಸ್ ನೋಡಿ ಕಲಿಯಿರಿ; ಬಿಜೆಪಿ ತೊರೆದ ಶಹಜಾದ್ ಪೂನಾವಾಲಾ!

ತೀವ್ರಗೊಂಡ ಗಾಯದ ನೋವು: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು