10.9 ಕೋಟಿ ಗೆದ್ದ ಮಹಿಳೆ 
ವಿದೇಶ

ಕಸಕ್ಕೆ ಎಸೆದಿದ್ದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ! ಕೊನೆಗೂ ಹುಡುಕಾಡಿ ಬರೋಬ್ಬರಿ 10.9 ಕೋಟಿ ರೂ ಗೆದ್ದ ಮಹಿಳೆ!

ಪೌರ ಕಾರ್ಮಿಕರು ಇಡೀ ಟ್ರಕ್ ನ ಕಸವನ್ನು ಸುರಿದು, ಒಂದು ದಿನದ ನಿರಂತರ ಹುಡುಕಾಟದ ನಂತರ ಅಂತಿಮವಾಗಿ ಟಿಕೆಟ್ ಸಿಕ್ಕಿದೆ. ಕೊನೆಗೆ ಈಗಾಗಲೇ ಮಾಡಿಕೊಂಡ ಒಪ್ಪಂದದಂತೆ ಕಸ ತೆಗೆಯುವ ವೆಚ್ಚವನ್ನು ಮಹಿಳೆಯೇ ಪಾವತಿಸಿದ್ದಾರೆ.

ಬಿಟೊಂಟೊ: ಲಾಟರಿ ಟಿಕೆಟ್ ವೊಂದನ್ನು ಖರೀದಿಸಿದ್ದ ಇಟಲಿಯ ಮಹಿಳೆಯೊಬ್ಬರು, ಅದರಲ್ಲಿ ನಂಬಿಕೆ ಕಳೆದುಕೊಂಡು ಕಸಕ್ಕೆ ಎಸೆದಿದ್ದರು. ಬಳಿಕ ತಾವು ಖರೀದಿಸಿದ್ದ ಟಿಕೆಟ್ ಗೆ ಬಂಪರ್ ಬಹುಮಾನ ಬಂದಿದ್ದು, ಬರೋಬ್ಬರಿ 10.9 ಕೋಟಿ ಹಣ ಗೆದ್ದಿದ್ದಾರೆ.

ದಕ್ಷಿಣ ಇಟಲಿಯ ಬಿಟೊಂಟೊ ನಗರದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ, ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದ ಮಹಿಳೆ, ಲಾಟರಿ ಸಿಕ್ಕಿದೆಯೇ ಎಂದು ತಿಳಿದುಕೊಳ್ಳಲು ಯಂತ್ರಕ್ಕೆ ಲಾಟರಿ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಿದ್ದರು. ಆದರೆ, ಆ ಯಂತ್ರ ಪಾವತಿಸಲಾಗುವುದಿಲ್ಲ ಎಂಬ ಸಂದೇಶ ನೀಡಿತ್ತು. ಇದರಿಂದ ಬೇಸರಗೊಂಡ ಮಹಿಳೆ ಲಾಟರಿ ಟಿಕೆಟ್ ನನ್ನು ಕಸಕ್ಕೆ ಎಸೆದಿದ್ದರು.

ಬಳಿಕ ಕುಟುಂಬದ ಸದಸ್ಯರೊಬ್ಬರು ಫೋನ್ ಮಾಡಿ, ಲಾಟರಿಗೆ ಬಂಪರ್ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ. ಮಹಿಳೆ ಯಾವಾಗಲೂ 2, 4, 8, 10, and 51 ಸಂಖ್ಯೆಯ ಟಿಕೆಟ್ ನ್ನು ಖರೀದಿಸುತ್ತಿದ್ದರಂತೆ, ತಕ್ಷಣ ಮಹಿಳೆ ಕಸಕ್ಕೆ ಎಸೆದಿದ್ದ ಲಾಟರಿ ಟಿಕೆಟ್ ಹುಡುಕಲು ಬಂದಿದ್ದಾರೆ. ಆದರೆ, ಆ ಸಮಯಕ್ಕಾಗಲೇ ಕಸದವರು ಕಸ ತೆಗೆದುಕೊಂಡು ಹೋಗಿದ್ದರು.

ಇದರಿಂದ ಹತಾಶೆಗೊಂಡ ಮಹಿಳೆ, ತ್ಯಾಜ್ಯ ನಿರ್ವಹಣಾ ಕಂಪನಿಯ ಆಡಳಿತಾಧಿಕಾರಿ ಸಂಪರ್ಕಿಸಿ ನಡೆದ ವಿಷಯ ವಿವರಿಸಿದ್ದಾರೆ. ಮಹಿಳೆಯ ಒತ್ತಾಯದ ಮೇರೆಗೆ ಆಡಳಿತಾಧಿಕಾರಿ ಹೇಗೋ ಸರಿಯಾದ ಕಸದ ಟ್ರಕ್ ನ್ನು ಪತ್ತೆ ಮಾಡಿದ್ದಾರೆ.

ಬಳಿಕ ಪೌರ ಕಾರ್ಮಿಕರು ಸುಮಾರು 6 ಟನ್ ನಷ್ಟಿದ್ದ ಕಸವನ್ನು ಸುರಿದು, ಒಂದು ದಿನದ ನಿರಂತರ ಹುಡುಕಾಟದ ನಂತರ ಅಂತಿಮವಾಗಿ ಟಿಕೆಟ್ ಸಿಕ್ಕಿದೆ. ಕೊನೆಗೆ ಈಗಾಗಲೇ ಮಾಡಿಕೊಂಡ ಒಪ್ಪಂದದಂತೆ ಕಸ ತೆಗೆಯುವ ವೆಚ್ಚವನ್ನು ಮಹಿಳೆಯೇ ಪಾವತಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)