ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ  
ವಿದೇಶ

ನಾನು ತಡೆಯದೇ ಹೋಗಿದ್ದರೆ ಭಾರತ-ಪಾಕ್ ನಡುವೆ ಪರಮಾಣು ಯುದ್ಧವಾಗುತ್ತಿತ್ತು: ಟ್ರಂಪ್ ಬಡಾಯಿ ಮತ್ತೆ ಶುರು

ಭಾರತ–ಪಾಕಿಸ್ತಾನ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿತ್ತು. ಪರಮಾಣು ಯುದ್ಧವಾಗುವ ಸಾಧ್ಯತೆಗಳಿತ್ತು. ಎರಡೂ ರಾಷ್ಟ್ರಗಳು ಯುದ್ಧಕ್ಕಿಳಿದಿದ್ದವು. 10 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು.

ವಾಷಿಂಗ್ಟನ್: ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಲೇ ಬಂದಿದ್ದರೂ, ಭಾರತ-ಪಾಕಿಸ್ತಾನದ ನಡುವಿನ ಯುದ್ಧವನ್ನು ತಡೆದಿದ್ದು ನಾನೇ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಹೇಳಿಕೆಯನ್ನು ಪುನರುಚ್ಛರಿಸುತ್ತಲೇ ಇದ್ದಾರೆ.

ನಾನು ತಡೆಯದೇ ಹೋಗಿದ್ದರೆ, ಭಾರತ-ಪಾಕಿಸ್ತಾನ ನಡವೆ ಭೀಕರ ಪರಮಾಣು ಯುದ್ಧವಾಗುತ್ತಿತ್ತು ಎಂದು ಇದೀಗ ಮತ್ತೆ ಅದೇ ರೀತಿಯಿ ಹೇಳಿಕೆಯನ್ನು ನೀಡಿದ್ದಾರೆ.

ಫಾಕ್ಸ್ ಬಿಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ತಾನು ಎಂಟು ಯುದ್ಧಗಳನ್ನು ತಡೆದಿದ್ದೇನೆ ಎಂದು ಹೇಳಿಕೊಂಡಿದ್ದು, ಅವುಗಳಲ್ಲಿ ಕನಿಷ್ಠ ಆರು ಯುದ್ಧಗಳನ್ನು ಸುಂಕ ಹೇರುವ ಮೂಲ ತಡೆದಿದ್ದೇನೆ ಎಂದು ಹೇಳಿದ್ದಾರೆ.

ಜನರು ಸಾಯುವುದನ್ನು ನೋಡಲು ನಾನು ಬಯಸುವುದಿಲ್ಲ. ನೀವು ಈ ಯುದ್ಧವನ್ನು ನಿಲ್ಲಿಸದಿದ್ದರೆ, ನಾನು ಸುಂಕ ವಿಧಿಸುತ್ತೇನೆಂದು ಹೇಳಿದ್ದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಭಾರತ–ಪಾಕಿಸ್ತಾನ ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿತ್ತು. ಪರಮಾಣು ಯುದ್ಧವಾಗುವ ಸಾಧ್ಯತೆಗಳಿತ್ತು. ಎರಡೂ ರಾಷ್ಟ್ರಗಳು ಯುದ್ಧಕ್ಕಿಳಿದಿದ್ದವು. 10 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಪಾಕಿಸ್ತಾನ ಪ್ರಧಾನಿ ಕೂಡ ಯುದ್ಧ ನಿಲ್ಲಿಸುವ ಮೂಲಕ ಕನಿಷ್ಟ 10 ಮಿಲಿಯನ್ ಜೀವಗಳನ್ನು ಉಳಿಸಿದ್ದೀರಿ ಎಂದು ಹೇಳಿದ್ದಾರೆ. ಸುಂಕ ಹೇರಿಗೆ ಯುದ್ಧ ಪರಿಸ್ಥಿತಿ ಉಲ್ಭಣಗೊಳ್ಳುವುದನ್ನು ತಡೆಯಲು ನಿರ್ಣಾಯಕ ಪಾತ್ರವಹಿಸಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಮೇ 10ರಿಂದೀಚೆಗೆ ಟ್ರಂಪ್ ಅವರು ಭಾರತ–ಪಾಕಿಸ್ತಾನ ಸಂಘರ್ಷವನ್ನು ತಾನೇ ತಡೆದಿದ್ದೇನೆ ಎಂಬ ಹೇಳಿಕೆಯನ್ನು 80ಕ್ಕೂ ಹೆಚ್ಚು ಬಾರಿ ಪುನರಾವರ್ತಿಸಿದ್ದಾರೆ. ಆದರೆ, ಭಾರತ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ನಡೆದಿಲ್ಲ ಎಂದು ನಿರಂತರವಾಗಿ ನಿರಾಕರಿಸಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ 2025 ಮೇ 7ರಂದು ‘ಆಪರೇಷನ್ ಸಿಂಧೂರ್’ ಆರಂಭಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ರಾಜತಾಂತ್ರಿಕ ಜಯ: ಫ್ಯಾಕ್ಟ್‌ಶೀಟ್‌ನಲ್ಲಿ ‘ದ್ವಿದಳ ಧಾನ್ಯಗಳು’ ಉಲ್ಲೇಖ ಕೈಬಿಟ್ಟ ಅಮೆರಿಕಾ..!

ಲೋಕಸಭೆ ಕಲಾಪಕ್ಕೆ ಪ್ರಧಾನಿ ಗೈರು: ಮೋದಿ ಮೇಲೆ ದಾಳಿಗೆ ಸಿದ್ಧರಾಗಿದ್ದ 'ಕೈ' ಮಹಿಳಾ ಸಂಸದರು? ಸಂಸತ್ ಆವರಣದಲ್ಲಿ ನಿಜವಾಗಿ ನಡೆದಿದ್ದೇನು? Video

ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ: ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆ, ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಅರ್ಹ..!

ಕೆನಡಾ: ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿ ಕನಿಷ್ಠ 10 ಸಾವು, 27 ಮಂದಿ ಗಾಯ

ದೆಹಲಿಯಲ್ಲಿ ಡಿಕೆಶಿ ನಂಬರ್ ಗೇಮ್: ಹೈಕಮಾಂಡ್ ತೀರ್ಮಾನವೇ ಫೈನಲ್ ಎಂದ ಸಿಎಂ!

SCROLL FOR NEXT