ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ಸ್ಫೋಟಕ್ಕೆ 32 ಸಾವು Online Desk
ವಿದೇಶ

ಪಾಕಿಸ್ತಾನದಲ್ಲಿ ಕಲ್ಲಿದ್ದಲು ಗಣಿ ಸ್ಫೋಟಕ್ಕೆ 32 ಸಾವು; ಅವಶೇಷಗಳಡಿ ಇನ್ನೂ ಹಲವು ಕಾರ್ಮಿಕರು ಸಾವು-ಬದುಕಿನ ನಡುವೆ ಹೋರಾಟ!

ಪಾಕಿಸ್ತಾನದ ಹೊರವಲಯದಲ್ಲಿರುವ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟಕ್ಕೆ ಕನಿಷ್ಠ 32 ಗಣಿಗಾರರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಲೂಚಿಸ್ಥಾನ (ಪಾಕಿಸ್ತಾನ): ಪಾಕಿಸ್ತಾನದ ಬಲೂಚಿಸ್ಥಾನದ ಕ್ವೆಟ್ಟಾದ ಹೊರವಲಯದಲ್ಲಿರುವ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟಕ್ಕೆ ಕನಿಷ್ಠ 32 ಗಣಿಗಾರರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಜುಲೈ 30 ರಂದು ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿನ ಕ್ವೆಟ್ಟಾದ ಹೊರವಲಯದಲ್ಲಿರುವ ಗಣಿಯೊಂದರಲ್ಲಿ ಮೀಥೇನ್ ಅನಿಲ ಸಂಗ್ರಹವಾಗಿರುವುದರಿಂದ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಸ್ಥಳದಲ್ಲಿದ್ದ 32 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಜೊತೆಗೆ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದ್ರೆ, ಆರಂಭಿಕ ವರದಿಗಳು 18 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಣಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಿದ್ದರೂ, ರಕ್ಷಣಾ ತಂಡಗಳು ಅವಶೇಷಗಳಿಂದ ಶವಗಳನ್ನು ಹೊರತೆಗೆಯವುದನ್ನು ಮುಂದುವರಿಸುತ್ತಿದ್ದಂತೆ ಸಾವುನೋವುಗಳ ಅಂಕಿಅಂಶಗಳು ಕೂಡ ವೇಗವಾಗಿ ಏರುತಿದೆ.

ಏತನ್ಮಧ್ಯೆ, ಸುಮಾರು 10 ಕಾರ್ಮಿಕರು ಇನ್ನೂ ಕೂಡ ಗಣಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದ್ದು, ಆ ಕಾರ್ಮಿಕರನ್ನು ಉಳಿಸಲು ಆಮ್ಲಜನಕವನ್ನು ಪಂಪ್ ಮಾಡಲಾಗುತ್ತಿದೆ. ಆದರೆ ವಿಷಕಾರಿ ಅನಿಲ ಮತ್ತು ಕುಸಿದಿರುವ ಕಲ್ಲುಗಳು ರಕ್ಷಣಾ ಕಾರ್ಯಕ್ಕೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತಿವೆ ಎನ್ನಲಾಗಿದೆ.

ಸ್ಫೋಟಕ್ಕೆ ಕಾರಣವೇನು?

ಗಣಿಯೊಳಗೆ ಅಪಾಯಕಾರಿ ಮೀಥೇನ್ ಅನಿಲ ಶೇಖರಣೆಗೊಂಡು ಈ ಭೀಕರ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಅಂದಾಜು ಸುಮಾರು 4,500 ಅಡಿ ಆಳದ ಗಣಿ ಸುರಂಗಗಳು ಕುಸಿದುಬಿದ್ದಿವೆ. ಏತನ್ಮಧ್ಯೆ, ಗಣಿ ಸ್ಪೋಟದಲ್ಲಿ ಸಾವಿಗೀಡಾದ ಕುಟುಂಬಗಳಿಗೆ ಬಲೂಚಿಸ್ಥಾನ ಸರ್ಕಾರವು ತಲಾ 5 ಲಕ್ಷ ಪಾಕಿಸ್ತಾನಿ ರೂಪಾಯಿ (ಸುಮಾರು US$1,800) ಪರಿಹಾರ ಘೋಷಿಸಿದೆ. ಇದೇ ವೇಳೆ ಸ್ಫೋಟದ ಕಾರಣ ಮತ್ತು ಗಣಿಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಾರಾಷ್ಟ್ರ: ಬಿವಂಡಿಯಲ್ಲಿ ಕಟ್ಟಡ ಕುಸಿತ- ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆ; ರಕ್ಷಣಾ ಕಾರ್ಯಾಚರಣೆಯ ವೇಳೆ NDRF ಅಧಿಕಾರಿಗೆ ಗಾಯ

Iranಗೆ ಬೆಂಬಲ ಆರೋಪ: ಭಾರತದ ಕಂಪನಿ ಸೇರಿ 6 ಸಂಸ್ಥೆಗಳ ವಿರುದ್ಧ ಅಮೆರಿಕಾ ಕಠಿಣ ಕ್ರಮ, China-Russia ಸಂಸ್ಥೆಗಳೂ Black listಗೆ..!

ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್: ಸೋಮವಾರ ಸಂಜೆ ಪ್ರಮಾಣವಚನ ಸಾಧ್ಯತೆ, 18 ಸಚಿವರ ಸೇರ್ಪಡೆ ನಿರೀಕ್ಷೆ..!

ಪ್ರಶ್ನೆಪತ್ರಿಗೆ ಲೀಕ್ ದಂಧೆಗೆ ಬಿತ್ತು ಬ್ರೇಕ್: 'ಮಕ್ಕಳ ಭವಿಷ್ಯದ ಜೊತೆ ಆಟವಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ': ಸೆಲ್ಫೀ ವಿಡಿಯೋ ಮೂಲಕ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ..!

ಅಂತ್ಯದತ್ತ ಸಾಗಿದ ಇಸ್ರೇಲ್-ಹಮಾಸ್ ಯುದ್ಧ: 14 ದಿನಗಳಲ್ಲಿ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ಹಮಾಸ್ ಒಪ್ಪಿಗೆ, ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್..!