ಮೊಜ್ತಬಾ ಖಮೇನಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ 
ವಿದೇಶ

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಪೂರ್ಣ'; ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್: ಡೊನಾಲ್ಡ್ ಟ್ರಂಪ್ ಘೋಷಣೆ!

ಈ ಒಪ್ಪಂದದಿಂದ ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು, "ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು" ಎಂದು ಘೋಷಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ-ಇರಾನ್ ನಡುವಣ 107 ದಿನಗಳ ಯುದ್ಧ ಕೊನೆಗೂ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಸಂಬಂಧ ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಔಪಚಾರಿಕ ಸಹಿ ಹಾಕಲು ನಿರ್ಧರಿಸಲಾಗಿದೆ.

ಈ ಒಪ್ಪಂದದಿಂದ ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು, "ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು" ಎಂದು ಘೋಷಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲು ಮತ್ತು ಇರಾನ್ ಬಂದರುಗಳ ಮೇಲಿನ ಅಮೆರಿಕ ನೌಕಾ ದಿಗ್ಬಂಧನ ಕೊನೆಗೊಳಿಸಲು ಈ ಒಪ್ಪಂದ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ ಜಲಮಾರ್ಗವನ್ನು ಮತ್ತೆ ತೆರೆಯಲು ಮತ್ತು ನೌಕಾ ದಿಗ್ಬಂಧನವನ್ನು ತಕ್ಷಣ ತೆಗೆದುಹಾಕಲು ಅಧಿಕಾರ ನೀಡುತ್ತಿರುವುದಾಗಿ ಟ್ರಂಪ್ ಮೊದಲಿಗೆ ಹೇಳಿದ್ದರು.

"ಹಾರ್ಮುಜ್ ಜಲಸಂಧಿಯನ್ನು ಟೋಲ್-ಫ್ರೀ ಆಗಿ ತೆರೆಯಲು ಸಂಪೂರ್ಣವಾಗಿ ಅಧಿಕಾರ ನೀಡುತ್ತೇನೆ. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ನೌಕಾ ದಿಗ್ಬಂಧನವನ್ನು ತಕ್ಷಣ ತೆಗೆದುಹಾಕಲು ಅಧಿಕಾರ ನೀಡುತ್ತೇನೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲು ಬಿಡಿ!" ಎಂದು ಅವರು ಬರೆದುಕೊಂಡಿದ್ದಾರೆ.

ಆದಾಗ್ಯೂ ನಂತರದ ಮತ್ತೊಂದು ಪೋಸ್ಟ್‌ನಲ್ಲಿ, ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ನಂತರ ಶುಕ್ರವಾರ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ಅವರ 80 ನೇ ಹುಟ್ಟುಹಬ್ಬದಂದು ಈ ಘೋಷಣೆ ಮಾಡಿದ್ದು, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಒಂದು ವಾರದ ತೀವ್ರ ರಾಜತಾಂತ್ರಿಕ ಬಳಿಕ ಈ ಬೆಳವಣಿಗೆಯಾಗಿದೆ. ಈ ಒಪ್ಪಂದವನ್ನು ಮಹಾನ್ ಸಾಧನೆ ಎಂದು ಟ್ರಂಪ್ ಹೇಳಿದ್ದು, ಇದರಿಂದ ಮಧ್ಯ ಪ್ರಾಚ್ಯದಲ್ಲಿ ಪರಿಸ್ಥಿತಿ ಶಾಂತಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚಂದನವನದ ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ ಅಭಿನಂದನೆ

ಮಕ್ಕಳೊಂದಿಗೆ ತನ್ನ ಜಾಹೀರಾತು ನೋಡಿದಾಗ ಮುಜುಗರಕ್ಕೊಳಗಾದ ಕರೀನಾ ಕಪೂರ್: ತೈಮೂರ್ ಪ್ರಶ್ನೆಗೆ ಬೆಬೋ ಬೇಸ್ತು!

ಸಚಿನ್ ತೆಂಡುಲ್ಕರ್‌ರ ದೀರ್ಘಕಾಲೀನ ODI ದಾಖಲೆ ಮುರಿದ ಬ್ರೆಂಡನ್ ಟೇಲರ್; ಆದ್ರೆ ಒಂದು ಟ್ವಿಸ್ಟ್ ಇದೆ!

ತೆರಿಗೆ ನೀತಿ ಚರ್ಚೆಗಳು ವಲಯ ಹಿತಾಸಕ್ತಿ ಮೀರಬೇಕು: ಒಟ್ಟಾರೆ ಆರ್ಥಿಕತೆಯ ಅಗತ್ಯತೆಗಳ ಮೇಲೆ ಗಮನ ಹರಿಸಬೇಕು- ನಿರ್ಮಲಾ ಸೀತಾರಾಮನ್

ಉಮರ್ ಖಾಲಿದ್ ನ್ಯಾಷನಲಿಸ್ಟ್ ಹೇಳಿಕೆ: KPCC ಅಧ್ಯಕ್ಷ ಬಿಕೆ ಹರಿಪ್ರಸಾದ್ ವಿರುದ್ಧ ದೂರು