ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲ್ಯೂಕಾಸ್ ಟ್ರೆಜೊ ಕುಟುಂಬ Photo | X
ವಿದೇಶ

ವೆನೆಜುವೆಲಾದಲ್ಲಿ ಭೀಕರ ಭೂಕಂಪ: ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲ್ಯೂಕಾಸ್ ಟ್ರೆಜೊ ಪತ್ನಿ, ಇಬ್ಬರು ಮಕ್ಕಳು ಸಾವು!

ಟ್ರೆಜೊ ಅವರ ಕುಟುಂಬವು ಅವಳಿ ಭೂಕಂಪಗಳಿಂದ ಹೆಚ್ಚು ಹಾನಿಗೊಳಗಾದ ಕರಾವಳಿ ಪ್ರದೇಶಗಳಲ್ಲಿ ಒಂದಾದ ಪ್ಲಾಯಾ ಗ್ರಾಂಡೆಯಲ್ಲಿದ್ದರು. ಅವರು ವಾಸಿಸುತ್ತಿದ್ದ ವಸತಿ ಕಟ್ಟಡ ಕುಸಿದು ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ.

ಇತ್ತೀಚೆಗೆ ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಅರ್ಜೆಂಟೀನಾದ ಡಿಫೆಂಡರ್ ಲ್ಯೂಕಸ್ ಟ್ರೆಜೊ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ ಎಂದು ವೆನೆಜುವೆಲಾದ ಟಾಪ್-ಫ್ಲೈಟ್ ಕ್ಲಬ್ ಡಿಪೋರ್ಟಿವೊ ಲಾ ಗೈರಾ ದೃಢಪಡಿಸಿದೆ.

ಟ್ರೆಜೊ ಅವರ ಪತ್ನಿ ಯಾನಿನಾ ಮರನೆಲ್ಲಾ ಮತ್ತು ಅವರ ಮಕ್ಕಳಾದ ಆರನ್ ಮತ್ತು ಐನ್ಹೋವಾ ಟ್ರೆಜೊ ದೇಶದ ಯಾರಾಕುಯ್ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಸಾವಿಗೀಡಾಗಿದ್ದಾರೆ. ಭೂಕಂಪನದ ಸಮಯದಲ್ಲಿ ಅವರು ತಂಗಿದ್ದ ಅಪಾರ್ಟ್ಮೆಂಟ್ ಕಟ್ಟಡ ಕುಸಿದ ನಂತರ ಅವರ ಕುಟುಂಬವು ಕಾಣೆಯಾಗಿದೆ ಎಂದು ಮೊದಲಿಗೆ ವರದಿಯಾಗಿತ್ತು. ನಂತರ ರಕ್ಷಣಾ ತಂಡಗಳು ಈ ಹೃದಯವಿದ್ರಾವಕ ಸುದ್ದಿಯನ್ನು ದೃಢಪಡಿಸಿವೆ.

ಟ್ರೆಜೊ ಘಟನಾ ಸ್ಥಳದಲ್ಲಿ ಇರಲಿಲ್ಲ. ಏಕೆಂದರೆ, ಅವರು ಮುಂಬರುವ ಪಂದ್ಯಕ್ಕೆ ತಯಾರಿ ನಡೆಸಲು ತಮ್ಮ ಕ್ಲಬ್ ಮಾರಿಟಿಮೊ ಜೊತೆ ಕ್ಯಾರಕಾಸ್‌ನಲ್ಲಿದ್ದರು.

'DLG ವತಿಯಿಂದ ನಾವು ಆಟಗಾರ ಲ್ಯೂಕಸ್ ಟ್ರೆಜೊ ಅವರ ಪತ್ನಿ ಯಾನಿನಾ ಮರನೆಲ್ಲಾ ಮತ್ತು ಅವರ ಮಕ್ಕಳಾದ ಆರನ್ ಮತ್ತು ಐನ್ಹೋವಾ ಟ್ರೆಜೊ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇವೆ. ದುಃಖದಲ್ಲಿ ಲ್ಯೂಕಸ್ ಟ್ರೆಜೊ ಅವರ ಜೊತೆಗೆ ಇರುತ್ತೇವೆ. ಅವರ ಆತ್ಮಕ್ಕೆ ಶಾಂತಿ ಮತ್ತು ಲ್ಯೂಕಸ್ ಮತ್ತು ಅವರ ಎಲ್ಲ ಪ್ರೀತಿಪಾತ್ರರಿಗೆ ಸಾಂತ್ವನ' ಎಂದು ಕ್ಲಬ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಟ್ರೆಜೊ ಅವರ ಕುಟುಂಬವು ಅವಳಿ ಭೂಕಂಪಗಳಿಂದ ಹೆಚ್ಚು ಹಾನಿಗೊಳಗಾದ ಕರಾವಳಿ ಪ್ರದೇಶಗಳಲ್ಲಿ ಒಂದಾದ ಪ್ಲಾಯಾ ಗ್ರಾಂಡೆಯಲ್ಲಿದ್ದರು. ಅವರು ವಾಸಿಸುತ್ತಿದ್ದ ವಸತಿ ಕಟ್ಟಡ ಕುಸಿದು ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ.

ಕುಟುಂಬ ಸದಸ್ಯರು, ಸ್ಥಳೀಯ ಸ್ವಯಂಸೇವಕರು ಮತ್ತು ವೃತ್ತಿಪರ ರಕ್ಷಣಾ ತಂಡಗಳ ಸಹಾಯದಿಂದ ಈ ಅನುಭವಿ ಅರ್ಜೆಂಟೀನಾದ ಡಿಫೆಂಡರ್ ತನ್ನ ಪತ್ನಿ ಮತ್ತು ಮಕ್ಕಳಿಗಾಗಿ ತೀವ್ರ ಹುಡುಕಾಟವನ್ನು ಪ್ರಾರಂಭಿಸಿದ್ದರು.

ಈ ದುರಂತ ತಿಳಿಯುವುದಕ್ಕೂ ಮುನ್ನ ಟ್ರೆಜೊ, ತನ್ನ ಕುಟುಂಬದ ಇರುವಿಕೆ ಅಥವಾ ಸಂಭಾವ್ಯ ಬದುಕುಳಿಯುವಿಕೆಯ ಬಗ್ಗೆ ಮಾಹಿತಿ ಪಡೆಯಲು ಸಾರ್ವಜನಿಕ ಮನವಿಯನ್ನು ಮಾಡಿದರು.

'ಪ್ಲಾಯಾ ಗ್ರಾಂಡೆಯಲ್ಲಿ ನಮ್ಮ ಕಟ್ಟಡ ಕುಸಿದಿದೆ. ನನ್ನ ಕುಟುಂಬದ ಬಗ್ಗೆ ನನಗೆ ಏನೂ ತಿಳಿದಿಲ್ಲ. ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಮತ್ತು ಯಾರಾದರೂ ಅವರನ್ನು ನೋಡಿದರೆ ಈ ಸಂದೇಶವನ್ನು ಹಂಚಿಕೊಳ್ಳಿ. ಅವರು ಅಲ್ಲಿ ಇರಲಿಲ್ಲ ಎಂದು ನಾನು ನಂಬಲು ಬಯಸುತ್ತೇನೆ. ದಯವಿಟ್ಟು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿ' ಎಂದು ಟ್ರೆಜೊ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ವೆನೆಜುವೆಲಾದಲ್ಲಿ ಅವಳಿ ಭೂಕಂಪಗಳು ಸುಮಾರು ಏಳು ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿರಬಹುದು. ಇದು ಸುಮಾರು 1,000 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಸದ್ಯ ಹತ್ತು ಸಾವಿರ ಜನರು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ ಅಂದಾಜಿಸಿದೆ.

ವಿಶ್ವಸಂಸ್ಥೆಯ ವಲಸೆ ಸಂಸ್ಥೆಯು ಲಭ್ಯವಿರುವ ಜನಸಂಖ್ಯೆ ಮತ್ತು ಹಾನಿಯ ಡೇಟಾವನ್ನು ಪರಿಶೀಲಿಸಿದ್ದು, 'ಜೂನ್ 24 ರಂದು ವೆನೆಜುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಿಂದ 6.76 ಮಿಲಿಯನ್ ಜನರು ತೊಂದರೆಗೆ ಸಿಲುಕಿರಬಹುದು' ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮ ಮಂದಿರ ದೇಣಿಗೆ ವಿವಾದ: 'ಆಕಾಶವೇನು ತಲೆ ಮೇಲೆ ಬೀಳಲ್ಲ'; ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ..!

ಅಮೆರಿಕ-ಇರಾನ್ ಸಂಘರ್ಷಕ್ಕೆ ಬ್ರೇಕ್: ಶಾಂತಿ ಮಾತುಕತೆಗೆ ಉಭಯ ರಾಷ್ಟ್ರಗಳು ಸಮ್ಮತಿ. ಹಾರ್ಮುಜ್‌ನಲ್ಲಿ ಹಡಗು ಸಂಚಾರಕ್ಕೆ ಗ್ರೀನ್ ಸಿಗ್ನಲ್..!

AIADMKಗೆ ಮತ್ತೆ ಮರ್ಮಾಘಾತ: ಮತ್ತೋರ್ವ ಪ್ರಮುಖ ಶಾಸಕ ರಾಜೀನಾಮೆ, ತಮಿಳುನಾಡು ಚುನಾವಣೆ ಬಳಿಕ 6ನೇ ವಿಕೆಟ್ ಪತನ!

Pune Fort Murder: ಎಂಗೇಜ್ ಮೆಂಟ್ ಗೂ ಮುನ್ನ ಕೇತನ್ ನಿಂದ 1 ಕೋಟಿ ರೂ. ಪಡೆದು ಚೇತನ್ ಗೆ ವರ್ಗಾಯಿಸಿದ್ದ ಪಾತಕಿ ಸಿಯಾ ಗೋಯಲ್!

ಇರಾನ್ ಯುದ್ಧದಲ್ಲಿ ಅನಿರೀಕ್ಷಿತ ಗೆಲುವು ಕಂಡ ಕ್ಯಾಲಿಫೋರ್ನಿಯಾದ ಪಿಸ್ತಾಶಿಯೊ ಕಿಂಗ್ಸ್! (ಜಾಗತಿಕ ಜಗಲಿ)