ಶಾಲಾ ಬಾಲಕಿಯರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರಣಿಗೆಯಲ್ಲಿ ಜನಸಾಗರ 
ವಿದೇಶ

ಅಮೆರಿಕ-ಇಸ್ರೇಲ್ ದಾಳಿಗೆ 165 ಇರಾನ್ ಶಾಲಾ ಬಾಲಕಿಯರು ಬಲಿ: ಅಂತಿಮ ಯಾತ್ರೆಯಲ್ಲಿ ಜನಸಾಗರ, ತೀವ್ರ ಆಕ್ರೋಶ! Video

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ Press TV, ಮಿನಾಬ್ ಎಲಿಮೆಂಟರಿ ಶಾಲೆಯ ಮೇಲೆ ಯುಎಸ್ ಮತ್ತು ಇಸ್ರೇಲಿ ಆಡಳಿತದಿಂದ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದರ ಅಂತ್ಯಕ್ರಿಯೆ ಮೆರಣಿಗೆಯಾಗಿದೆ.

ಟೆಹರಾನ್: ಇರಾನ್ ವಿರುದ್ಧದ ಅಮೆರಿಕ- ಇಸ್ರೇಲ್ ದಾಳಿಯಿಂದಾಗಿ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದ್ದು, ನೂರಾರು ಅಮಾಯಕ ಜನರು ಕ್ಷಿಪಣಿ ಹೊಡೆತಕ್ಕೆ ಬಲಿಯಾಗುತ್ತಿದ್ದಾರೆ.

ಶನಿವಾರ ಇರಾನ್ ನ ಮಿನಾಬ್ ನಗರದಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ 165 ಅಮಾಯಕ ಶಾಲಾ ಬಾಲಕಿಯರು ಮೃತಪಟ್ಟಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೆರವಣಿಗೆ ಇಂದು ನಡೆಯಿತು. ಜನಸಾಗರವೇ ಹರಿದುಬಂದಿತ್ತು.

ಮುಗ್ದ ಶಾಲಾ ಬಾಲಕಿಯರ ದಾಳಿಗೆ ಕಾರಣರಾದ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಮೆರವಣಿಗೆಯ ದೃಶ್ಯಗಳನ್ನು ಇರಾನಿನ ಸರ್ಕಾರಿ ಮಾಧ್ಯಮ Press TV ವರದಿ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿರುವ Press TV, ಮಿನಾಬ್ ಎಲಿಮೆಂಟರಿ ಶಾಲೆಯ ಮೇಲೆ ಯುಎಸ್ ಮತ್ತು ಇಸ್ರೇಲಿ ಆಡಳಿತದಿಂದ ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದರ ಅಂತ್ಯಕ್ರಿಯೆ ಮೆರಣಿಗೆಯಾಗಿದೆ.

ಶನಿವಾರ US ಮತ್ತು ಇಸ್ರೇಲ್‌ನಿಂದ ಹತ್ಯೆಯಾದ 165 ಕ್ಕೂ ಹೆಚ್ಚು ಅಮಾಯಕ ಇರಾನಿನ ಶಾಲಾ ಬಾಲಕಿಯರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಜನಸಾಗರವೇ ಹರಿದುಬಂದಿತು ಎಂದು ಹೇಳಿದೆ. ಇರಾನ್‌ನಲ್ಲಿ ಯುಎಸ್-ಇಸ್ರೇಲಿ ದಾಳಿಯ ನಂತರ ದೇಶದ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಮಂದಿ ಗಾಯಗೊಂಡಿರುವುದಾಗಿ ಯುಎನ್ ನ್ಯೂಸ್ ವರದಿ ಮಾಡಿದೆ.

ಅಮೆರಿಕ, ಇಸ್ರೇಲ್ ನ ಈ ಮಿಲಿಟರಿ ದಾಳಿ ಬಗ್ಗೆ UNESCO ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾಗಿದೆ. ಕ್ಷಣ ಸಂಸ್ಥೆಗಳ ವಿರುದ್ಧದ ದಾಳಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಪಾಯವನ್ನುಂಟುಮಾಡುತ್ತವೆ ಮತ್ತು ಶಿಕ್ಷಣದ ಹಕ್ಕನ್ನು ಹಾಳುಮಾಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುನೆಸ್ಕೋ ಹೇಳಿಕೆ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ-ಸಮೃದ್ಧಿಗೆ ‘ವಿಶ್ವಾಸಾರ್ಹ ಪಾಲುದಾರಿಕೆ’ ಅಗತ್ಯ: Quad ಸಭೆಯಲ್ಲಿ ಜೈಶಂಕರ್‌ ಮಹತ್ವದ ಕರೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ತಮಿಳುನಾಡು ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆ: ಸಣ್ಣ ರೈತರ ₹50,000 ವರೆಗಿನೆ ಬೆಳೆ ಸಾಲ ಮನ್ನಾ!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

SCROLL FOR NEXT