ಸೌದಿ ಅರೇಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್  
ವಿದೇಶ

ಅರಬ್ ರಾಷ್ಟ್ರಗಳ ಮೇಲೆ ದಾಳಿ: ಇರಾನ್ ಗೆ ಸೌದಿ ಅರೇಬಿಯಾ ಬಿಗ್ ವಾರ್ನಿಂಗ್!

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ತನ್ನ ದಾಳಿಯನ್ನು ನಿಲ್ಲಿಸಿದೆ ಎಂಬ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಹೇಳಿಕೆಯನ್ನು ಸೌದಿ ಅರೇಬಿಯಾ ತಳ್ಳಿಹಾಕಿದೆ.

ರಿಯಾದ್: ಅರಬ್ ರಾಷ್ಟ್ರಗಳ ಮೇಲೆ ದಾಳಿ ಮುಂದುವರೆಸಿದ್ರೆ ದೊಡ್ಡ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸೌದಿ ಅರೇಬಿಯಾ ಸೋಮವಾರ ಇರಾನ್ ಗೆ ಬಿಗ್ ವಾರ್ನಿಂಗ್ ನೀಡಿದೆ.

ಬೃಹತ್ ಶೈಬಾ ತೈಲ ಕೇಂದ್ರದ ಮೇಲೆ ಮತ್ತೆ ಡ್ರೋನ್ ದಾಳಿ ನಡೆದ ನಂತರ ಸೌದಿ ಅರೇಬಿಯಾ ಈ ಹೇಳಿಕೆ ನೀಡಿದೆ. ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ತನ್ನ ದಾಳಿಯನ್ನು ನಿಲ್ಲಿಸಿದೆ ಎಂಬ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಹೇಳಿಕೆಯನ್ನು ಸೌದಿ ಅರೇಬಿಯಾ ತಳ್ಳಿಹಾಕಿದೆ.

ಇರಾನ್ ಅಧ್ಯಕ್ಷರ ಭಾಷಣದ ವೇಳೆ ಅಥವಾ ನಂತರ ಇರಾನ್ ಕಡೆಯವರು ಈ ಹೇಳಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿಲ್ಲ ಎಂಬುದನ್ನು ರಾಜ್ಯವು ದೃಢಪಡಿಸುತ್ತದೆ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯಾವುದೇ ವಾಸ್ತವಿಕ ಆಧಾರಗಳಿಲ್ಲದ ದುರ್ಬಲ ನೆಪಗಳನ್ನು ಆಧರಿಸಿ ಇರಾನ್ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಇರಾನ್ ದಾಳಿಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದೆ. ಸೋಮವಾರ ಇರಾನ್ ರಾಜಧಾನಿಯಲ್ಲಿ ಭಾರಿ ಸ್ಪೋಟ ಆಗಿದೆ.

ಇರಾನ್ ನಲ್ಲಿ ಏನನ್ನು ಗುರಿಯಾಗಿಸಿಕೊಂಡಿದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಆದರೆ ನಗರದ ಹಲವಾರು ಭಾಗಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಇರಾನ್‌ನ ದಾಳಿಯ ದಿನಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಮತ್ತು ತಪ್ಪು ಮಾಹಿತಿಗಾಗಿ ಕತಾರ್ ಅಧಿಕಾರಿಗಳು 300 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ಆಂತರಿಕ ಸಚಿವಾಲಯ ಸೋಮವಾರ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

ವಿದೇಶ ಪ್ರವಾಸಕ್ಕೆ ತೆರಿಗೆ: ಸತ್ಯಾಂಶವೇ ಇಲ್ಲ.. ವರದಿ ತಳ್ಳಿಹಾಕಿದ ಪ್ರಧಾನಿ ಮೋದಿ

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ಬರೆ ಹಾಕಿದ ICC, ಶೇ.40ರಷ್ಟು ದಂಡ, 8 WTC ಅಂಕ ಕಡಿತ

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

SCROLL FOR NEXT