ಇರಾನ್ ತೈಲ ಘಟಕಗಳ ಮೇಲೆ ದಾಳಿ: ಮಿತ್ರಪಡೆಗಳಲ್ಲಿ ಬಿರುಕು, ಇಸ್ರೇಲ್ ಗೆ 'WTF'ಸಂದೇಶ ಕಳುಹಿಸಿದ ಶ್ವೇತಭವನ!

ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಭಿನ್ನಮತ ಉಂಟಾಗಿದೆ ಎಂದು ಸುದ್ದಿವಾಹಿನಿ ಆಕ್ಸಿಯೋಸ್ ವರದಿ ಮಾಡಿದೆ
Iran Oil Field Strike
ಇರಾನ್ ತೈಲ ಘಟಕಗಳ ಮೇಲೆ ದಾಳಿ ಚಿತ್ರ
Updated on

ವಾಷಿಂಗ್ಟನ್: ವಾರಾಂತ್ಯದಲ್ಲಿ ಇರಾನಿನ ತೈಲ ಸಂಗ್ರಹಣಾ ಕೇಂದ್ರಗಳ ಮೇಲೆ ಇಸ್ರೇಲಿ ದಾಳಿಯಿಂದ ಧಗಧಗನೆ ಹೊತ್ತಿ ಉರಿದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇದು ಮಿತ್ರ ರಾಷ್ಟ್ರ ಅಮೆರಿಕದೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಫೆಬ್ರವರಿ 28 ರಂದು ಯುದ್ಧ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಭಿನ್ನಮತ ಉಂಟಾಗಿದೆ ಎಂದು ಸುದ್ದಿವಾಹಿನಿ ಆಕ್ಸಿಯೋಸ್ ವರದಿ ಮಾಡಿದೆ. ಟೆಲ್ ಅವಿವ್ ಮೇಲಿನ ದಾಳಿ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ಆಕ್ಸಿಯೋಸ್ ಹೇಳಿದೆ.

ಕ್ಷಿಪಣಿ ದಾಳಿ ಇಂಧನ ನೀಡಲು ಈ ಘಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ. ಆದರೆ ಅಮೆರಿಕ ನಿರೀಕ್ಷಿಸಿದ ಮಟ್ಟಕ್ಕಿಂತ ದೊಡ್ಡದಾಗಿ ದಾಳಿ ನಡೆದಿದೆ. ಬೃಹತ್ ಪ್ರಮಾಣದ ದಾಳಿ ಬಗ್ಗೆ ಅಮೆರಿಕ ಮಿಲಿಟರಿ ಪಡೆ ಕೂಡಾ ಅಚ್ಚರಿಗೊಂಡಿವೆ. ಅಮೆರಿಕದಿಂದ ಕಠಿಣ ಸಂದೇಶ ಬಂದಿರುವುದಾಗಿ ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಶ್ವೇತಭವನವಾಗಲಿ ಅಥವಾ ಇಸ್ರೇಲ್ ರಕ್ಷಣಾ ಪಡೆಗಳಾಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಮೂರು ತೈಲ ಡಿಪೋಗಳು ಮತ್ತು ಸಂಸ್ಕರಣಾಗಾರಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿವೆ. ಪರಿಣಾಮ ಘಟಕಗಳು ಬೆಂಕಿಯುಂಡೆಯಂತೆ ಹೊತ್ತಿ ಉರಿದಿದ್ದು, ವಿಷಕಾರಿ ಹೊಗೆಯೊಂದಿಗೆ

ನಿಯಂತ್ರಣಕ್ಕೆ ಬಾರದ ಬೆಂಕಿ ಸುತ್ತಮುತ್ತಲ ಪ್ರದೇಶಕ್ಕೂ ವ್ಯಾಪಿಸಿದೆ. ತೈಲ ಡಿಪೋ ಒಂದರಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತುಕೊಂಡಿದೆ. ಸ್ಟ್ರೀಟ್ ಗಳಲ್ಲಿ ಬೆಂಕಿ ಹೊಳೆಯೇ ಹರಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ. 'ಆಸಿಡ್ ಮಳೆಯ ವರದಿಗಳ ನಡುವೆ ಜನರು ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಇಸ್ರೇಲ್ ದಾಳಿಯಿಂದಾಗಿ ಭಯಾನಕ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದ್ದು, ದೊಡ್ಡ ಪ್ರಮಾಣದ ಪರಿಸರ ಹಾನಿಯಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

Iran Oil Field Strike
ಇರಾನ್ ಯುದ್ಧ: ಷೇರುಮಾರುಕಟ್ಟೆ ಮಹಾಕುಸಿತ, 30 ಲಕ್ಷ ಕೋಟಿ ರೂ ನಷ್ಟ; ಇಂದು ಒಂದೇ ದಿನ 12 ಲಕ್ಷ ಕೋಟಿ ರೂ ಕಳೆದುಕೊಂಡ ಹೂಡಿಕೆದಾರರು!

ಇಂಧನ ಮೂಲಸೌಕರ್ಯಗಳಂತಹ ಕೇಂದ್ರಗಳ ಮೇಲೆ ಟೆಹ್ರಾನ್ ಅಂತಹ ದಾಳಿಯನ್ನು ಇಲ್ಲಿಯವರೆಗೆ ಪ್ರಾರಂಭಿಸಿಲ್ಲ. ಆದರೆ ಇದು ಪ್ರತಿ ಬ್ಯಾರೆಲ್‌ ತೈಲ ಬೆಲೆಯನ್ನು 200 ಡಾಲರ್ ಗೆ ಹೆಚ್ಚಿಸಬಹುದು ಎಂದು ಇರಾನ್‌ನ ಮಿಲಿಟರಿಯ ವಕ್ತಾರರು ಹೇಳಿದ್ದಾರೆ. ಕಳೆದ ವಾರ ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com