ವ್ಯಾಲೆರೋ ರಿಫೈನರಿಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು. 
ವಿದೇಶ

ಅಮೆರಿಕಾದ ವ್ಯಾಲೆರೋ ರಿಫೈನರಿಯಲ್ಲಿ ಭೀಕರ ಸ್ಫೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿಯ ಕೆನ್ನಾಲಿಗೆ, ಹೆಚ್ಚಿದ ಆತಂಕ

ಸ್ಫೋಟ ಬೆನ್ನಲ್ಲೇ ರಿಫೈನರಿಯಿಂದ ಭಾರೀ ಅಗ್ನಿ ಮತ್ತು ಕಪ್ಪು ಹೊಗೆ ಆಗಸದವರೆಗೂ ಚಿಮ್ಮಿದ್ದು, ಇದರ ಬೆನ್ನಲ್ಲೇ ಸುತ್ತಲೂ ವಾಸಿಸುವ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ.

ವಾಷಿಂಗ್ಟನ್: ಟೆಕ್ಸಾಸ್‌ನ ಪೋರ್ಟ್ ಆರ್ಥರ್‌ನಲ್ಲಿವ ವ್ಯಾಲೆರೋ ಎನರ್ಜಿ ರಿಫೈನರಿನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಸ್ಥಳೀಯರ ಪ್ರಕಾರ, ಸ್ಫೋಟದ ಶಬ್ದ ಬಹಳ ದೂರದವರೆಗೂ ಕೇಳಿಬಂದಿದ್ದು, ಕೆಲವು ಮನೆಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ.

ಸ್ಫೋಟ ಬೆನ್ನಲ್ಲೇ ರಿಫೈನರಿಯಿಂದ ಭಾರೀ ಅಗ್ನಿ ಮತ್ತು ಕಪ್ಪು ಹೊಗೆ ಆಗಸದವರೆಗೂ ಚಿಮ್ಮಿದ್ದು, ಇದರ ಬೆನ್ನಲ್ಲೇ ಸುತ್ತಲೂ ವಾಸಿಸುವ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ.

ಸ್ಥಳಕ್ಕೆ ತುರ್ತು ಅಗ್ನಿಶಾಮಕ, ಪೊಲೀಸ್ ಮತ್ತು ರಕ್ಷಣಾ ತಂಡಗಳು ತಲುಪಿದ್ದು, ಬೆಂಕಿ ನಂದಿಸಲು ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪಶ್ಚಿಮ ಪಾರ್ಟ್ ಆಫ್ ಪೋರ್ಟ್ ಆರ್ಥರ್‌ನಲ್ಲಿ ವಾಸಿಸುವವರಿಗೆ ಶೆಲ್ಟರ್-ಇನ್-ಪ್ಲೇಸ್ ಆದೇಶ ನೀಡಲಾಗಿದೆ.

ಅಧಿಕಾರಿಗಳು ಸ್ಥಳದ ಗಾಳಿಯ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಯಾವುದೇ ಹೊಗೆ ಅಥವಾ ವಿಷಕಾರಿ ವಾಯು ಉತ್ಪತ್ತಿಯ ಸಂಭವವನ್ನು ತಡೆಯಲು ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಸ್ಫೋಟಕ್ಕೆ ಇಂಡಸ್ಟ್ರಿಯಲ್ ಹೀಟರ್ ಅಥವಾ ಯಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಇದೂವರೆಗೆ ಯಾವುದೇ ಸಾವು-ನೋವುಗಳ ವರದಿ ಬಂದಿಲ್ಲ, ಆದರೆ, ಅಗ್ನಿಯ ರೌದ್ರ ನರ್ತನ ಪ್ರದೇಶ ಗಂಭೀರ ಪರಿಸ್ಥಿತಿಯನ್ನು ತೋರಿಸುತ್ತಿವೆ.

ವ್ಯಾಲೆರೋ ರಿಫೈನರಿ ಯುಎಸ್‌ನ ಪ್ರಮುಖ ಎಣ್ಣೆ ತಯಾರಿಕಾ ಘಟಕಗಳಲ್ಲಿ ಒಂದಾಗಿದೆ, ದಿನಕ್ಕೆ ಲಕ್ಷಾಂತರ ಬ್ಯಾರೆಲ್ ಎಣ್ಣೆಯನ್ನು ಇಲ್ಲಿ ಉತ್ಪಾದನೆ ಮಾಡಲಾತ್ತದೆ. ಇದೀಗ ಈ ಘಟಕದಲ್ಲಿಯೇ ಅಗ್ನಿ ಅವಘಡ ಸಂಭವಿಸಿರುವುದು ಎಣ್ಣೆ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸಮಸ್ಯೆಗಳನ್ನುಂಟು ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಲಂಬಿಯಾ ಸೇನಾ ವಿಮಾನ ಪತನ: ಕನಿಷ್ಠ 66 ಮಂದಿ ಸಾವು, ನೂರಾರು ಮಂದಿಗೆ ಗಾಯ-Video

ವಾಯುದಾಳಿ: ಇರಾನ್ ಇಂಧನ ಮೂಲಸೌಕರ್ಯಕ್ಕೆ ಭಾರೀ ಹಾನಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

'ಐದು ದಿನ ಇರಾನ್ Power Plant ಗಳ ಮೇಲೆ ದಾಳಿ ಮಾಡಲ್ಲ..': Trump ತಾತ್ಕಾಲಿಕ ಕದನ ವಿರಾಮ ಘೋಷಣೆ! ಮಾತುಕತೆ ನಿರಾಕರಿಸಿದ ಇರಾನ್

West Asia Crisis: ಮುಳುಗಿದ D-Street; 13.5 ಲಕ್ಷ ಕೋಟಿ ನಿರ್ನಾಮ!

ಇರಾನ್ ಮೇಲಿನ ದಾಳಿ ಐದು ದಿನ ತಾತ್ಕಾಲಿಕ ಸ್ಥಗಿತ: ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮಧ್ಯಸ್ಥಿಕೆ!

SCROLL FOR NEXT