ಡೊನಾಲ್ಡ್ ಟ್ರಂರಪ್ 
ವಿದೇಶ

ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಅಮೆರಿಕಾ ಅಧ್ಯಕ್ಷ..?: "ಟ್ರಂಪ್‌ಗಾಗಿ ಪ್ರಾರ್ಥಿಸಿ" ಎಂದ ಸಂಸದೆ ನ್ಯಾನ್ಸಿ ಮೇಸ್; ಹೆಚ್ಚಿದ ಗೊಂದಲ!

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸುದ್ದಿ ವೈರಲ್ ಆಘಿದೆ. ಸಂಸದೆ ನ್ಯಾನ್ಸಿ ಮೇಸ್ ಅವರು "ಅಧ್ಯಕ್ಷ ಟ್ರಂಪ್‌ಗಾಗಿ ಪ್ರಾರ್ಥಿಸಿ" (Pray for President Trump) ಎಂದು ಪೋಸ್ಟ್ ಮಾಡಿದ್ದು, ಇದರ ಬೆನ್ನಲ್ಲೇ ಜನರು ಅವರಿಗೆ ಯಾವುದೋ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಭಾವಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆಂದು ಹೇಳಲಾಗುತ್ತಿದ್ದು, ಆವರ ಆರೋಗ್ಯ ಕುರಿತ ಊಹಾಪೋಹಗಳು ಹೆಚ್ಚಾಗುತ್ತಲೇ ಇವೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಸುದ್ದಿ ವೈರಲ್ ಆಘಿದೆ. ಸಂಸದೆ ನ್ಯಾನ್ಸಿ ಮೇಸ್ ಅವರು "ಅಧ್ಯಕ್ಷ ಟ್ರಂಪ್‌ಗಾಗಿ ಪ್ರಾರ್ಥಿಸಿ" (Pray for President Trump) ಎಂದು ಪೋಸ್ಟ್ ಮಾಡಿದ್ದು, ಇದರ ಬೆನ್ನಲ್ಲೇ ಜನರು ಅವರಿಗೆ ಯಾವುದೋ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಭಾವಿಸಿದ್ದಾರೆ.

ಮೇ 2 ರಂದು ಟ್ರಂಪ್ ಅವರು ಫ್ಲೋರಿಡಾದಲ್ಲಿ ದಂತವೈದ್ಯರನ್ನು ಭೇಟಿ ಮಾಡಿದ್ದರು. ಶ್ವೇತಭವನದಲ್ಲಿಯೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿದ್ದರೂ, ಅವರು ಖಾಸಗಿ ವೈದ್ಯರನ್ನು ಭೇಟಿ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿತು.

ಇದನ್ನೇ ಕೆಲವರು "ತುರ್ತು ಶಸ್ತ್ರಚಿಕಿತ್ಸೆ" ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಇದರ ಬೆನ್ನಲ್ಲೇ ಶ್ವೇತಭವನವು "ಪ್ರೆಸ್ ಲಿಡ್" ಘೋಷಿಸಿತ್ತು (ಅಂದರೆ ಅಂದು ಅಧ್ಯಕ್ಷರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಲ್ಲ ಎಂದರ್ಥ). ಇದು ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿತ್ತು.

ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.

ಇದಲ್ಲದೆ, 2024ರಲ್ಲಿ ಟ್ರಂಪ್ ಅವರ ಮೇಲೆ ನಡೆದ ದಾಳಿಯ ಸಂದರ್ಭದ ವಿಡಿಯೋಗಳು ಮತ್ತು ಅವರು ಆಸ್ಪತ್ರೆಯಿಂದ ಹೊರಬರುತ್ತಿರುವ ಹಳೆಯ ದೃಶ್ಯಗಳನ್ನು ಈಗಿನದ್ದು ಎಂಬಂತೆ ಎಡಿಟ್ ಮಾಡಿ ಹರಿಬಿಡಲಾಗಿದ್ದು, ಇದು ಅವರ ಆರೋಗ್ಯ ಕುರಿತ ಊಹಾಪೋಹಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಈ ಎಲ್ಲಾ ವದಂತಿಗಳನ್ನು ಶ್ವೇತಭವನದ ಸಂವಹನ ನಿರ್ದೇಶಕರು ಮತ್ತು ಟ್ರಂಪ್ ಅವರ ಆಪ್ತ ತಂಡವು "ಸಂಪೂರ್ಣ ಸುಳ್ಳು" ಎಂದು ತಳ್ಳಿಹಾಕಿದೆ.

ಅಧ್ಯಕ್ಷರು ಓವಲ್ ಆಫೀಸ್‌ನಲ್ಲಿ ತಮ್ಮ ಕೆಲಸಗಳಲ್ಲಿ ಎಂದಿನಂತೆ ತೊಡಗಿಸಿಕೊಂಡಿದ್ದಾರೆ ಮತ್ತು ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!