ಹಾರ್ಮುಜ್ ನಲ್ಲಿ ದಕ್ಷಿಣ ಕೊರಿಯಾದ ಹಡಗು ಧ್ವಂಸ 
ವಿದೇಶ

Hormuzನಲ್ಲಿ ಹೊಸ ತಲೆನೋವು: ಮೊದಲ ಬಾರಿಗೆ South Korea ಹಡಗು ಟಾರ್ಗೆಟ್? ಸ್ಫೋಟ!

ಫೆಬ್ರವರಿ 2026 ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡ ನಂತರ, ಈ ಆಯಕಟ್ಟಿನ ಜಲಮಾರ್ಗದಲ್ಲಿ ದಕ್ಷಿಣ ಕೊರಿಯಾದ ವಾಣಿಜ್ಯ ಹಡಗಿಗೆ ಹಾನಿಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟದ ಕೇಂದ್ರ ಬಿಂದುವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದ ಹಡಗು ಸ್ಫೋಟಗೊಂಡಿದೆ.

ಮಂಗಳವಾರ, ಮೇ 5, 2026 ರಂದು ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವಾಲಯವು 'ಎಚ್‌ಎಮ್‌ಎಮ್ ನಾಮು' (HMM Namu) ಎಂಬ ಸರಕು ಸಾಗಣೆ ಹಡಗು ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟ ಮತ್ತು ಬೆಂಕಿಗೆ ಆಹುತಿಯಾಗಿದೆ ಎಂದು ದೃಢಪಡಿಸಿದೆ. ಫೆಬ್ರವರಿ 2026 ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡ ನಂತರ, ಈ ಆಯಕಟ್ಟಿನ ಜಲಮಾರ್ಗದಲ್ಲಿ ದಕ್ಷಿಣ ಕೊರಿಯಾದ ವಾಣಿಜ್ಯ ಹಡಗಿಗೆ ಹಾನಿಯಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಮೂಲಗಳ ಪ್ರಕಾರ ದಾಳಿಗೊಳಗಾದ ಹಡಗು 35,000 ಟನ್ ತೂಕದಾಗಿದ್ದು, ಪನಾಮ ಧ್ವಜದ ಅಡಿಯಲ್ಲಿ ದಕ್ಷಿಣ ಕೊರಿಯಾದ ದೊಡ್ಡ ಕಂಟೈನರ್ ಕಂಪನಿ 'ಎಚ್‌ಎಮ್‌ಎಮ್' ನಿಂದ ನಿರ್ವಹಿಸಲ್ಪಡುತ್ತಿತ್ತು. ದಾಳಿ ವೇಳೆ ಹಡಗಿನಲ್ಲಿದ್ದ ಎಲ್ಲಾ 24 ಸಿಬ್ಬಂದಿಗಳು (6 ದಕ್ಷಿಣ ಕೊರಿಯಾದವರು ಮತ್ತು 18 ವಿದೇಶಿ ಪ್ರಜೆಗಳು) ಸುರಕ್ಷಿತವಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸಮೀಪದ ಸಮುದ್ರದಲ್ಲಿ ಹಡಗು ಲಂಗರು ಹಾಕಿದ್ದಾಗ ಸೋಮವಾರ ರಾತ್ರಿ ಕೊರಿಯಾ ಸಮಯ 8:40 ರ ಸುಮಾರಿಗೆ ಈ ದಾಳಿ ನಡೆದಿದ್ದು, ಹಡಗು ಸ್ಫೋಟಗೊಂಡಿದೆ.

ಸ್ಫೋಟದ ನಂತರ ಇಂಜಿನ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಆದರೆ ನಾಲ್ಕು ಗಂಟೆಗಳ ನಂತರ ಸಿಬ್ಬಂದಿಗಳು ಅದನ್ನು ನಂದಿಸಿದರು. ಪ್ರಸ್ತುತ ಹಡಗನ್ನು ದುಬೈ ಬಂದರಿಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಇದು ಯಾಂತ್ರಿಕ ದೋಷವೋ ಅಥವಾ ದಾಳಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ ಹಡಗಿನ ಮೇಲೆ ದಾಳಿಯಾಗಿರಬಹುದು ಎಂದು ಶಂಕಿಸಲಾಗುತ್ತಿದ್ದು, ಡ್ರೋನ್ ಅಥವಾ ಕ್ಷಿಪಣಿ ದಾಳಿಯಾಗಿರುವ ಸಾಧ್ಯತೆಯಿದೆ ಎಂದು ಗುಪ್ತಚರ ವರದಿಗಳು ಸೂಚಿಸುತ್ತಿವೆ.

ಆರ್ಥಿಕ ನಷ್ಟ

ದಕ್ಷಿಣ ಕೊರಿಯಾ ತನ್ನ ಶೇ. 70 ರಷ್ಟು ಕಚ್ಚಾ ತೈಲವನ್ನು ಈ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುವುದರಿಂದ, ಈ ಘಟನೆಯು ಆ ದೇಶದ ಇಂಧನ ಭದ್ರತೆಯ ಮೇಲೆ ಆತಂಕ ಮೂಡಿಸಿದೆ. ಪ್ರಸ್ತುತ ದಕ್ಷಿಣ ಕೊರಿಯಾದ ಇನ್ನೂ 26 ಹಡಗುಗಳು ಈ ಭಾಗದಲ್ಲಿ ಸಿಲುಕಿಕೊಂಡಿವೆ ಎನ್ನಲಾಗಿದೆ.

ಅಮೆರಿಕದ ಪ್ರತಿಕ್ರಿಯೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದು ಇರಾನ್ ನಡೆಸಿದ ದಾಳಿ ಎಂದು ಆರೋಪಿಸಿದ್ದಾರೆ. ಅಲ್ಲದೆ, ಜಲಸಂಧಿಯಲ್ಲಿ ಸಿಲುಕಿರುವ ಹಡಗುಗಳನ್ನು ರಕ್ಷಿಸಲು ದಕ್ಷಿಣ ಕೊರಿಯಾ ತನ್ನ 'ಪ್ರಾಜೆಕ್ಟ್ ಫ್ರೀಡಂ' ನೌಕಾ ಉಪಕ್ರಮಕ್ಕೆ ಸೇರಬೇಕು ಎಂದು ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TamilNadu: ರಾಜಕೀಯದ ಮೊದಲ ಪಂದ್ಯದಲ್ಲೇ ನಟ ವಿಜಯ್ ಶತಕ, ಮ್ಯಾಜಿಕ್ ನಂಬರ್ ಗೆ ಬೇಕು 10 ಶಾಸಕರ ಬೆಂಬಲ, TVKಗೆ ಮೊದಲ ಅಗ್ನಿ ಪರೀಕ್ಷೆ!

ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ TVK, ಹೇಗಿರಲಿದೆ ನಟ ವಿಜಯ್ ಸಚಿವ ಸಂಪುಟ, ಯಾವ ನಾಯಕರು ಇರಬಹುದು?

2028ರಲ್ಲೂ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ: ಕೇರಳದಲ್ಲಿ ಕೋಮುವಾದಿ ಶಕ್ತಿ ದೂರವಿಟ್ಟ ಮತದಾರ; ಡಿ.ಕೆ. ಶಿವಕುಮಾರ್

ನೀವು ನಮಗೂ ಡಿಸಿಎಂ: ಬೆದರಿಸುವ ಕೆಲಸ ಮಾಡೋದು ಬೇಡ; ಡಿಕೆಶಿಗೆ ಶಾಸಕ ಜೀವರಾಜ್ ತಿರುಗೇಟು

ಪಂಚರಾಜ್ಯ ಚುನಾವಣೆ ಫಲಿತಾಂಶ: ಎಂಕೆ ಸ್ಟಾಲಿನ್, ಮಮತಾ, ಗೌರವ್ ಗೋಗೋಯ್ ಸೇರಿದಂತೆ ಹೀನಾಯ ಸೋಲು ಕಂಡ ಘಟಾನುಘಟಿಗಳು!

SCROLL FOR NEXT