ಡೊನಾಲ್ಡ್ ಟ್ರಂಪ್, ನೆತನ್ಯಾಹು  
ವಿದೇಶ

ಡೊನಾಲ್ಡ್ ಟ್ರಂಪ್, ನೆತನ್ಯಾಹು ಹತ್ಯೆಗೆ ಭಾರಿ ಸ್ಕೆಚ್: $58 ಮಿಲಿಯನ್ ಬಹುಮಾನ ನೀಡಲು ಇರಾನ್ ಪ್ಲಾನ್!

ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಭದ್ರತಾ ಪಡೆಗಳಿಂದ ಪ್ರತಿ-ಕ್ರಮ ಶೀರ್ಷಿಕೆಯಡಿ ಮಸೂದೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ ಘೋಷಿಸಿದ್ದಾರೆ.

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆ ಭಾರಿ ಸ್ಕೆಚ್ ರೂಪಿಸಲಾಗಿದೆ. ಇಬ್ಬರು ನಾಯಕರನ್ನು ನರಕಕ್ಕೆ ಕಳುಹಿಸುವವರಿಗೆ $58 ಮಿಲಿಯನ್ ಬಹುಮಾನ ನೀಡುವ ಬಗ್ಗೆ ಇರಾನ್ ಚರ್ಚಿಸುತ್ತಿದೆ ಎಂದು ವರದಿಯಾಗಿದೆ.

ಮಸೂದೆ ರಚನೆ:

ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಭದ್ರತಾ ಪಡೆಗಳಿಂದ ಪ್ರತಿ-ಕ್ರಮ ಶೀರ್ಷಿಕೆಯಡಿ ಮಸೂದೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ ಘೋಷಿಸಿದ್ದಾರೆ.

50 ಮಿಲಿಯನ್ ಯುರೋ ಬಹುಮಾನ: ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲಿ ನಾಯಕರನ್ನು ಹತ್ಯೆ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ 50 ಮಿಲಿಯನ್ ಯುರೋಗಳನ್ನು (ಸರಿಸುಮಾರು $58.23 ಮಿಲಿಯನ್) ಬಹುಮಾನ ನೀಡಲು ಅನುವು ನೀಡುತ್ತದೆ ಎಂದು ಇರಾನ್ ವೈರ್ ಮತ್ತು ದಿ ಟೆಲಿಗ್ರಾಫ್ ಯುಕೆ ವರದಿ ಮಾಡಿದೆ.

ಫೆಬ್ರವರಿ 28 ರಂದು ಆಗಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಕೊಂದಿದ್ದಕ್ಕಾಗಿ ಟ್ರಂಪ್ ಮತ್ತು ನೆತನ್ಯಾಹು ಅವರ ಹತ್ಯೆಗೆ ಬಹುಮಾನ ನೀಡುವ ಮಸೂದೆ ಮೇಲೆ ಇರಾನ್ ಸಂಸತ್ತು ಮತ ಚಲಾಯಿಸಲು ನಿರ್ಧರಿಸಿದೆ.

ಮೂವರ ವಿರುದ್ಧ ಸೇಡು: ಖಮೇನಿ ಹತ್ಯೆಯಲ್ಲಿ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾದ ಟ್ರಂಪ್, ನೆತನ್ಯಾಹು ಮತ್ತು ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಜೀಜಿ ಹೇಳಿರುವುದಾಗಿ ಇರಾನ್ ವೈರ್ ವರದಿ ಮಾಡಿದೆ.

ಟ್ರಂಪ್ ಮತ್ತು ನೆತನ್ಯಾಹು ಅವರನ್ನು ನರಕಕ್ಕೆ ಕಳುಹಿಸುವವರಿಗೆ ಬಹುಮಾನ ನಿಗದಿಪಡಿಸುವ ಕುರಿತು ದೇಶದ ಸಂಸತ್ತು ಶೀಘ್ರದಲ್ಲೇ ಮತ ಚಲಾಯಿಸಲಿದೆ ಎಂದು ರಾಷ್ಟ್ರೀಯ ಭದ್ರತಾ ಆಯೋಗದ ಮತ್ತೊಬ್ಬ ಸದಸ್ಯ ಮಹಮೂದ್ ನಬಾವಿಯನ್ ಘೋಷಿಸಿದ್ದಾರೆ.

ಟ್ರಂಪ್ ಹತ್ಯೆ ಕರೆಯಲ್ಪಡುವ ಅಭಿಯಾನಕ್ಕಾಗಿ ಇಸ್ಲಾಮಿಕ್ ಆಡಳಿತವು $50 ಮಿಲಿಯನ್ ಹಣಕಾಸಿನ ನೆರವು ಪಡೆದುಕೊಂಡಿದೆ ಎಂದು ಆಡಳಿತ ಪರ ಮಾಧ್ಯಮ ಸಂಸ್ಥೆ ಮಸಾಫ್ ಹೇಳಿಕೊಂಡ ಕೆಲವು ದಿನಗಳ ನಂತರ ಈ ಬಹುಮಾನ ಯೋಜನೆಗಳ ಬಗ್ಗೆ ವರದಿಯಾಗಿದೆ.

ಹಂಡಾಲಾದಿಂದಲೂ ಬಹುಮಾನ ಘೋಷಣೆ: ಇದಕ್ಕೂ ಮುನ್ನಾ ಇರಾನ್‌ನ ರಾಜ್ಯ ಪ್ರಾಯೋಜಿತ ಸೈಬರ್‌ವಾರ್‌ಫೇರ್ ಗುಂಪು "ಹಂಡಾಲಾ" ಕೂಡ ಟ್ರಂಪ್ ಮತ್ತು ನೆತನ್ಯಾಹು ಅವರನ್ನು ನಿರ್ಮೂಲನೆ ಮಾಡಲು" 50 ಮಿಲಿಯನ್ ಡಾಲರ್‌ಗಳನ್ನು ನಿಗದಿಪಡಿಸಿರುವುದಾಗಿ ಹೇಳಿಕೆ ನೀಡಿತ್ತು.

ಯುಎಸ್ ನ್ಯಾಯ ಇಲಾಖೆ ತನ್ನ ಸದಸ್ಯರಿಗೆ $10 ಮಿಲಿಯನ್ ಬಹುಮಾನವನ್ನು ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಇಬ್ಬರು ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಹಣವನ್ನು ನೀಡಲಾಗುವುದು ಎಂದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ: ಕಾಂಗ್ರೆಸ್ ನಾಯಕರ ಮೌನಕ್ಕೆ ಮಲ್ಲಿಕಾರ್ಜುನ ಖರ್ಗೆ ಬೇಸರ, ‘ನನಗೆ ನೋವಾಗಿದೆ’ ಎಂದ ಅಧ್ಯಕ್ಷ..!

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಕೊಟ್ಟಿದ್ದ ವ್ಯಕ್ತಿಯ ಬಂಧನ

Gen Z ವೋಟರ್ಸ್ ಮೇಲೆ ಮೋದಿ ಕಣ್ಣು: ಕೇಂದ್ರ ಸಚಿವರಿಗೆ 'Social media Scorecard'; ಯುವ ಜನತೆ ಸೆಳೆಯಲು ನಾಯಕರಿಗೆ ಹೊಸ ಟಾಸ್ಕ್..!

Pakಗೆ ಭಾರತ ಬಿಗ್ ಶಾಕ್: ದೆಹಲಿಯಲ್ಲಿ ಗರ್ಜಿಸಿದ ಬುಲ್ಡೋಜರ್; ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದ ಅನಧಿಕೃತ ನಿರ್ಮಾಣಗಳು ಧ್ವಂಸ..!

ನಾಲ್ಕೇ ತಿಂಗಳಲ್ಲಿ 22 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಧೀಶ; ಆತಂಕದಿಂದ 100 ಕೊಲೆ ಪ್ರಕರಣ ಬೇರೆ ಪೀಠಕ್ಕೆ ಶಿಫ್ಟ್!