ವಾಷಿಂಗ್ಟನ್‌ನಲ್ಲಿ ವೈಟ್ ಹೌಸ್ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿದ ಬಳಿಕ, ಇಎಂಎಸ್ ಟ್ರಕ್ ಸಮೀಪ ಪೊಲೀಸ್ ಸಿಬ್ಬಂದಿ ಮತ್ತು ಸೀಕ್ರೆಟ್ ಸರ್ವಿಸ್ ಸದಸ್ಯರು ನಿಂತಿರುವ ದೃಶ್ಯ. 
ವಿದೇಶ

ವೈಟ್ ಹೌಸ್ ಸಮೀಪ ಗುಂಡಿನ ದಾಳಿ: ಯುಎಸ್ ಸೀಕ್ರೆಟ್ ಸರ್ವಿಸ್ ಗುಂಡಿಕ್ಕಿ ವ್ಯಕ್ತಿಯ ಹತ್ಯೆ: ಆರೋಪಿ 2025ರಲ್ಲಿ ಬಂಧನ ವೇಳೆ ತಾನು 'ಯೇಸು' ಎಂದು ಹೇಳಿಕೊಂಡಿದ್ದ!

ನಿನ್ನೆ ಸಂಜೆ 6 ಗಂಟೆಯ ನಂತರ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಇದ್ದ ವ್ಯಕ್ತಿ ತನ್ನ ಬ್ಯಾಗ್‌ನಿಂದ ಶಸ್ತ್ರಾಸ್ತ್ರ ಹೊರತೆಗೆದು ಗುಂಡಿನ ದಾಳಿ ಆರಂಭಿಸಿದ್ದಾನೆ.

ವಾಷಿಂಗ್ಟನ್: ವೈಟ್ ಹೌಸ್ ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು, ಪ್ರತಿಯಾಗಿ ಗುಂಡು ಹಾರಿಸಿ ಅಧಿಕಾರಿಗಳು ಹೊಡೆದುರುಳಿಸಿದ್ದು, ಆತ ಮೃತಪಟ್ಟಿದ್ದಾನೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾಗ ಅವರ ಸುತ್ತಮುತ್ತ ನಡೆದ ಮೂರನೇ ಗುಂಡಿನ ದಾಳಿ ಘಟನೆ ಇದಾಗಿದೆ.

ಕಾನೂನು ಜಾರಿಗೊಳಿಸುವ ಸಂಸ್ಥೆ X ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ನಿನ್ನೆ ಸಂಜೆ 6 ಗಂಟೆಯ ನಂತರ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಇದ್ದ ವ್ಯಕ್ತಿ ತನ್ನ ಬ್ಯಾಗ್‌ನಿಂದ ಶಸ್ತ್ರಾಸ್ತ್ರ ಹೊರತೆಗೆದು ಗುಂಡಿನ ದಾಳಿ ಆರಂಭಿಸಿದ್ದಾನೆ ಎಂದು ತಿಳಿಸಿದೆ. ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಪ್ರತಿಯಾಗಿ ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿದೆ. ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ಸಂಸ್ಥೆ ಹೇಳಿದೆ.

ಶಂಕಿತನನ್ನು 21 ವರ್ಷದ ನಸಿರೆ ಬೆಸ್ಟ್ ಎಂದು ಗುರುತಿಸಿದ್ದಾರೆ. ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ನ್ಯಾಯಾಲಯದ ದಾಖಲೆಗಳ ಪ್ರಕಾರ, 2025ರ ಜುಲೈನಲ್ಲಿ ಬೆಸ್ಟ್ ಮತ್ತೊಂದು ವೈಟ್ ಹೌಸ್ ತಪಾಸಣಾ ಕೇಂದ್ರಕ್ಕೆ ಅನುಮತಿಯಿಲ್ಲದೆ ಪ್ರವೇಶಿಸಲು ಯತ್ನಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ. ಅಧಿಕಾರಿಗಳು ನಿಲ್ಲುವಂತೆ ನೀಡಿದ ಸೂಚನೆಗಳನ್ನು ಅವನು ಪಾಲಿಸಿರಲಿಲ್ಲ. ಅಲ್ಲದೆ, ನಾನು ಯೇಸು ಕ್ರಿಸ್ತ ಎಂದು ಹೇಳಿ, ತಾನೇ ಬಂಧನಕ್ಕೊಳಗಾಗಲು ಬಯಸಿದ್ದೇನೆ ಎಂದಿದ್ದನು.

ಈ ಪ್ರಕರಣದಲ್ಲಿ ಪ್ರಾಥಮಿಕ ವಿಚಾರಣೆ ನಡೆದಿದ್ದು, ಪ್ರೀ-ಟ್ರಯಲ್ ಸ್ಟೇ ಅವೇ ಆರ್ಡರ್ ಹೊರಡಿಸಲಾಗಿತ್ತು. ಸಾಮಾನ್ಯವಾಗಿ ಈ ಆದೇಶದ ಮೂಲಕ ವಿಚಾರಣೆಗೆ ಮುನ್ನ ಆರೋಪಿಗೆ ನಿರ್ದಿಷ್ಟ ವ್ಯಕ್ತಿ ಅಥವಾ ಪ್ರದೇಶದ ಸಮೀಪ ಹೋಗದಂತೆ ಸೂಚಿಸಲಾಗುತ್ತದೆ. ನಂತರ ಬೆಸ್ಟ್ ವಿರುದ್ಧ ಅನುಸರಣೆ ಇಲ್ಲ ಎಂಬ ನೊಟೀಸ್ ಹೊರಡಿಸಿದ ಬಳಿಕ ಆಗಸ್ಟ್‌ನಲ್ಲಿ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಬಳಿಕ ನಡೆದ ವಿಚಾರಣೆಗೆ ಅವನು ಹಾಜರಾಗಿರಲಿಲ್ಲ ಎಂದು ದಾಖಲೆಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಾಚೆಗೆ ಮತ್ತಷ್ಟು ಹೊಸ ಬೆಂಗಳೂರುಗಳ ನಿರ್ಮಾಣ: ಸಿಎಂ ಡಿಕೆ ಶಿವಕುಮಾರ್ ಘೋಷಣೆ

ಪುಣೆಯಲ್ಲಿ ಕಟ್ಟಡದ ಮೇಲೆ ಬಿದ್ದ ಕಸದ ರಾಶಿ, ಬಿಲ್ಡಿಂಗ್ ಕುಸಿತ; ಅವಶೇಷಗಳಡಿ ಸಿಲುಕಿದ 16 ಮಂದಿ; Video

ಭೇಟಿಯಾದ 20 ದಿನಕ್ಕೆ ಪುಟ್ಟ ಅಭಿಮಾನಿನ ಕಳೆದುಕೊಂಡ DCM: ಹೃದಯ ಒಡೆದಂತಾಗಿದೆ Pawan Kalyan ಭಾವುಕ ಪೋಸ್ಟ್!

'' ಬೆದರಿಕೆ ಯುಗ ಮುಗಿಯಿತು'' ಯಾವುದೇ ದುಷ್ಟತನ ಎದುರಿಸಲು ಸಿದ್ಧ, ಡೊನಾಲ್ಡ್ ಟ್ರಂಪ್ ಗೆ ಇರಾನ್ ನಾಯಕರ ತಿರುಗೇಟು!

ಅಮೆರಿಕ-ಇರಾನ್ ಒಪ್ಪಂದ "ಮುಗಿದಿದೆ": ಟ್ರಂಪ್ ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 1,650 ಅಂಕಗಳ ಇಳಿಕೆ