ಮನಿಲಾ: ಫಿಲಿಪೈನ್ಸ್‌ನ ರಾಜಧಾನಿ ಮನಿಲಾದಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಭೇಟಿಯಾಗಿದ್ದಾರೆ.
ಇದೇ ವೇಳೆ ಜಪಾನ್ ಪ್ರಧಾನಿ ಸನೇ ತಕೈಚಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಸಹ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.
ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ಭಾಗವಾಗಿ ನಡೆಯುತ್ತಿರುವ ಈ ಶೃಂಗಸಭೆಯು ಸೆಪ್ಟೆಂಬರ್ 2024 ರ ನಂತರದ ಮೊದಲ ಕ್ವಾಡ್ ನಾಯಕರ ಶೃಂಗಸಭೆಯಾಗಿದೆ ಮತ್ತು ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಯನ್ನು ಪ್ರಾರಂಭಿಸಿದ ನಂತರದ ಮೊದಲ ಸಭೆಯಾಗಿದೆ.
ಈ ವೇಳೆ ನಡೆದ ಕ್ವಾಡ್ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಡಿ ಹೊಗಳಿದ್ದಾರೆ.
ಮೋದಿಯನ್ನು ಗೇಟ್ ಲೀಡರ್, ಅತ್ಯಂತ ಟಫ್ ಮ್ಯಾನ್ ಎಂದು ಕರೆದಿದ್ದಾರೆ. ಅವರು ಅತ್ಯಂತ ಸದೃಢ ವ್ಯಕ್ತಿಯಾಗಿದ್ದಾರೆ. ಅವರಿಗೆ ಇಡೀ ಜಗತ್ತು ಗೌರವ ನೀಡುತ್ತದೆ. ಮೋದಿ ನನಗೆ ಅತ್ಯುತ್ತಮ ಸ್ನೇಹಿತರು ಎಂದು ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಪಾನ್ ಪ್ರಧಾನಿ ಸನೇ ತಕೈಚಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಉಲ್ಲೇಖಿಸಿ ಟ್ರಂಪ್ ಮಾತನಾಡಿದ್ದು, ಸನೇ ತಕೈಚಿ ಇನ್ನೂ ಟಫ್ ಇರಬಹುದು. ಅಲ್ಬನೀಸ್ ಮತ್ತು ನಾನು ಸರಿ ಇದ್ದೇವೆ ಎಂದು ಹೇಳಿದ್ದಾರೆ.