ಪಾಕಿಸ್ತಾನ ಸಚಿವ ಮುಸಾದಿಕ್ ಮಲಿಕ್ online desk
ವಿದೇಶ

ಭಾರತಕ್ಕೆ ಭೇಟಿ ನೀಡಲು ಸಜ್ಜಾದ ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ 'ಕೈಗಳನ್ನು ಕತ್ತರಿಸುವ' ಬೆದರಿಕೆ ಹಾಕಿದ್ದ ಪಾಕ್ ಸಚಿವ!

2023ರಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ (SCO) ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ ನಂತರ, ಪಾಕಿಸ್ತಾನದ ಒಕ್ಕೂಟ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ನವದೆಹಲಿ: ಈ ಹಿಂದೆ ನೀರು ಹಂಚಿಕೆಗೆ ಸಂಬಂಧಿಸಿದಂತೆ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ ಇತಿಹಾಸ ಹೊಂದಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್, ಈ ವಾರ ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ಸಭೆಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಕಳೆದ ವರ್ಷ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಮರುದಿನವೇ, ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಿದ ಸಂದರ್ಭದಲ್ಲಿ, ಮಲಿಕ್ ಇಂತಹ ಹೇಳಿಕೆಗಳನ್ನು ನೀಡಿದ್ದರು.

'ನಮ್ಮ ಪಾಲಿನ ನೀರನ್ನು ಯಾರೇ ಮುಟ್ಟಿದರೂ, ಅವರ ಕೈಗಳನ್ನು ಕತ್ತರಿಸಲಾಗುವುದು' ಎಂದು ಜೂನ್ ತಿಂಗಳಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಮಲಿಕ್ ಹೇಳಿದರು.

ದುಶಾನ್ಬೆಯಲ್ಲಿ ನಡೆದ ಜಲ ಸಮ್ಮೇಳನವೊಂದರಲ್ಲಿ, ಮಲಿಕ್ 'ಜಲ ಆಕ್ರಮಣಶೀಲತೆ'ಯ ವಿರುದ್ಧ ಎಚ್ಚರಿಕೆ ನೀಡಿದರು ಮತ್ತು 1960ರ ಒಪ್ಪಂದವನ್ನು ಗೌರವಿಸುವಂತೆ ಭಾರತವನ್ನು ಒತ್ತಾಯಿಸಿದರು.

2023ರಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ (SCO) ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ ನಂತರ, ಪಾಕಿಸ್ತಾನದ ಒಕ್ಕೂಟ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ನೀರು ಹಂಚಿಕೆಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸುತ್ತಾರೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಮಲಿಕ್, 'ಇದು ದ್ವಿಪಕ್ಷೀಯ ಮಾತುಕತೆಯಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.

2025ರ ಮೇ ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ನಡೆಸಿದ 'ಆಪರೇಷನ್ ಸಿಂಧೂರ' ಎಂಬ ಮಿಲಿಟರಿ ಪ್ರತಿಕ್ರಿಯೆಯ ಬಳಿಕ, ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಕೂಡ ಇದೇ ಮೊದಲ ಬಾರಿಯಾಗಿದೆ.

ನವೆಂಬರ್ 20 ರಿಂದ 22ರವರೆಗೆ ನಡೆಯಲಿರುವ SCO 'ನಾಗರಿಕತೆಗಳ ಸಂವಾದ ವೇದಿಕೆ' ಸಭೆಯ ಆಹ್ವಾನವನ್ನು ನವದೆಹಲಿ ಅಕ್ಟೋಬರ್‌ನಲ್ಲಿ ಔಪಚಾರಿಕವಾಗಿ ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿ ಅವರಿಗೆ ನೀಡಿತ್ತು. ನಂತರ ಇಸ್ಲಾಮಾಬಾದ್, ಮುಸಾದಿಕ್ ಮಲಿಕ್ ಅವರನ್ನು ಭಾಗವಹಿಸಲು ನಾಮನಿರ್ದೇಶನ ಮಾಡಿತು. ಪಾಕಿಸ್ತಾನದ ವಿದೇಶಾಂಗ ಕಚೇರಿಯು ಸರ್ಕಾರವು 'ನಾಗರಿಕತೆಗಳ ನಡುವೆ ಸಂವಾದವನ್ನು ಉತ್ತೇಜಿಸಲು ಬದ್ಧವಾಗಿದೆ' ಎಂದು ಹೇಳಿದೆ. 2026-27 ರಲ್ಲಿ SCO ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ (CHS) ಅಧ್ಯಕ್ಷತೆ ವಹಿಸಿರುವ ಪಾಕಿಸ್ತಾನವು ಸಂವಾದದಲ್ಲಿ ಭಾಗವಹಿಸಲಿದೆ ಎಂದು ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ Xನಲ್ಲಿ ಹೇಳಿದರು.

ಶುಕ್ರವಾರ, ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪಾಕಿಸ್ತಾನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಭೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಿದ 15 ದೇಶಗಳಲ್ಲಿ ಚೀನಾ, ಕಜಕಿಸ್ತಾನ್, ಇರಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿವೆ ಎಂದು ಹೇಳಿದರು. ಭಾರತವು ದೆಹಲಿಯ ಐತಿಹಾಸಿಕ ಪುರಾನ ಕಿಲಾದಲ್ಲಿ ಸಭೆಯನ್ನು ಆಯೋಜಿಸುತ್ತಿದೆ.

ಅಕ್ಟೋಬರ್ 20 ರಂದು ತಜಿಕಿಸ್ತಾನ್‌ನ ದುಶಾನ್ಬೆಯಲ್ಲಿ ಸಂಸ್ಥೆಯ ಸರ್ಕಾರಿ ಮುಖ್ಯಸ್ಥರ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೊದಲ SCO ನಾಗರಿಕ ಸಂವಾದ ವೇದಿಕೆಯನ್ನು ಆಯೋಜಿಸುವ ಭಾರತದ ಯೋಜನೆಯನ್ನು ಘೋಷಿಸಿದರು.

ಎಸ್‌ಸಿಒ (SCO) 10 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ: ಚೀನಾ, ರಷ್ಯಾ, ಭಾರತ, ಪಾಕಿಸ್ತಾನ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಇರಾನ್ ಮತ್ತು ಬೆಲಾರಸ್. ಇದಲ್ಲದೆ, ಆಹ್ವಾನಿತರೂ ಇದ್ದಾರೆ.

'ಸಿವಿಲೈಸೇಶನಲ್ ಡೈಲಾಗ್ ಫೋರಮ್' (Civilisational Dialogue Forum) ಎಂಬುದು ಎಸ್‌ಸಿಒಗೆ ಸಂಬಂಧಿಸಿದ ಭಾರತದ ಪ್ರಮುಖ ಉಪಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಪ್ರಸ್ತಾಪಿಸಿದ್ದು, ಈ ವರ್ಷ ಇದರ ಮೊದಲ ಆವೃತ್ತಿ ನಡೆಯುತ್ತಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರ ದೇಶಗಳ ನಡುವೆ ಸಾಂಸ್ಕೃತಿಕ ತಿಳುವಳಿಕೆ, ಹಂಚಿಕೆಯ ಪರಂಪರೆ ಹಾಗೂ ಜನರ ನಡುವಿನ ವಿನಿಮಯವನ್ನು ಉತ್ತೇಜಿಸುವುದು ಈ ವೇದಿಕೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ಮನರೇಗಾ ಯೋಜನೆಯ ₹13.57 ಲಕ್ಷ ಗುಳುಂ; ಕೆಲಸ ಮಾಡದೆ ಸರ್ಕಾರಿ ಹಣ ಲೂಟಿ, ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ!

Gold rate: ಭಾರಿ ಕುಸಿತದ ಬಳಿಕ ಚಿನ್ನದ ದರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

ಮತದಾರರ ಹೆಸರು ಅಳಿಸಲು ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟರಿಗೆ ಹೈಕೋರ್ಟ್ ರಿಲೀಫ್, FIRಗೆ ತಡೆ

Wellington Test: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ 99/5