ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ 
ವಿದೇಶ

ಪಾಕಿಸ್ತಾನದೊಂದಿಗೆ ಮಾತುಕತೆಗೆ ಅವಕಾಶವಿದೆ, ಆದರೆ...: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆ

ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದರು.

ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೆ ಆ ದೇಶದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯನ್ನು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ.

ಮೊನ್ನೆ ಬುಧವಾರ ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದರು. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿರುವಾಗಲೇ ಅಮಾಯಕ ಜನರು ಹತ್ಯೆಯಾಗುವುದನ್ನು ಭಾರತ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತ-ಪಾಕಿಸ್ತಾನ ಮಧ್ಯೆ ಮಾತುಕತೆಗೆ ಅವಕಾಶವಿದೆ. ಆದರೆ, ಒಂದು ದೊಡ್ಡ ಸಮಸ್ಯೆಯಿದೆ. ಅದೇನೆಂದರೆ, ಭಾರತದೊಳಗೆ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದು ಮತ್ತು ಅದನ್ನು ಉತ್ತೇಜಿಸುತ್ತಿರುವುದು. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಾಗ ನಮ್ಮ ಅಮಾಯಕ ಜನರು ಹತ್ಯೆಯಾಗುವ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಈ ಚಟುವಟಿಕೆ ನಿಂತ ಕ್ಷಣದಿಂದ ಮಾತುಕತೆ ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಇತ್ತೀಚಿನ ಇರಾನ್ ಯುದ್ಧ ಜನರನ್ನು ಸಂಕಷ್ಟದ ಅಂಚಿಗೆ ತಳ್ಳುವ ಮುನ್ನವೇ ಭಾರತ ಆಳವಾದ ವ್ಯವಸ್ಥಿತ ಸಮಸ್ಯೆಗಳನ್ನು ಎದುರಿಸುತ್ತಿತ್ತು ಎಂದು ಕಾಂಗ್ರೆಸ್ ನಾಯಕ ವಾದಿಸಿದರು.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ದೇಶದ ಮೂರು ಪ್ರಮುಖ ಆಂತರಿಕ ಸವಾಲುಗಳನ್ನು ಉಲ್ಲೇಖಿಸಿದೆ. ಕೆಲವೇ ದೊಡ್ಡ ಉದ್ಯಮ ಸಮೂಹಗಳ ಕೈಯಲ್ಲಿ ಸಂಪತ್ತು ಮತ್ತು ಅಧಿಕಾರದ ಬೃಹತ್ ಕೇಂದ್ರೀಕರಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವ್ಯಾಪಕ ಸಂಕಷ್ಟ ಹಾಗೂ ನಾಶ, ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಇವು ಪ್ರಮುಖ ಸಮಸ್ಯೆಗಳಾಗಿವೆ ಎಂದು ಹೇಳಿದೆ.

ಭಾರತ ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಕೆಲವೇ ಉದ್ಯಮಗಳ ಕೈಯಲ್ಲಿ ಸಂಪತ್ತು ಮತ್ತು ಅಧಿಕಾರದ ಬೃಹತ್ ಕೇಂದ್ರೀಕರಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವ್ಯಾಪಕ ನಾಶ, ನಿರುದ್ಯೋಗ. ಈ ಸಮಸ್ಯೆಗಳನ್ನು ನಾವು ಗಮನಿಸುತ್ತಿದ್ದೆವು, ಕಾಣುತ್ತಿದ್ದೆವು. ಇರಾನ್ ಯುದ್ಧವು ಇದ್ದಕ್ಕಿದ್ದಂತೆ ಈ ಸಮಸ್ಯೆಗಳನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸುವ ಭೂತಗನ್ನಡಿಯಂತೆ ಕಾರ್ಯನಿರ್ವಹಿಸಿತು. ಇದರಿಂದ ಜನರು ಸಂಕಷ್ಟದ ಅಂಚಿಗೆ ತಳ್ಳಲ್ಪಟ್ಟರು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಜಾಗತಿಕ ವಿದ್ಯಮಾನಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದ ರಾಹುಲ್ ಗಾಂಧಿ, ಜಗತ್ತಿನ ಇತರ ಭಾಗಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ನಿರ್ಲಕ್ಷ್ಯ ವಹಿಸುವಂತಿಲ್ಲ. ಜಾಗತಿಕ ಭೌಗೋಳಿಕ ರಾಜಕೀಯದಿಂದ (Geopolitics) ನಿಮಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಿದರೆ, ಮುಂದೆ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಪತಿ ಜೊತೆ ಅಕ್ರಮ ಸಂಬಂಧ ಶಂಕೆ; ಇಂಡಿಗೋ ಸಿಬ್ಬಂದಿ ವರ್ಷಾ ಹತ್ಯೆ; ಪತ್ನಿಯಿಂದಲೇ ಸುಪಾರಿ!

ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ

HDK vs DKS ಸಂಘರ್ಷಕ್ಕೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

'ಮುಸ್ಲಿಂ' ಅನ್ನೋ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಸಿರಾಜ್ ಗೆ ಕೊಕ್! ವಿವಾದಕ್ಕೆ ಕಾರಣವಾಯ್ತು ಕಾಂಗ್ರೆಸ್ MP ಹೇಳಿಕೆ, ಬಿಜೆಪಿ ತಿರುಗೇಟು