ನೀನಾ ಮಾನೆಸ್ 
ವಿದೇಶ

Flydubai ಘಟನೆಯ ಪುಟ್ಟ 'ಹೀರೋ' ನೀನಾ! 6 ವರ್ಷದ ಬಾಲಕಿ ತಾಯಿಯ ಸಮಯ ಪ್ರಜ್ಞೆಯಿಂದ ಬಯಲಾಯ್ತು ಪೈಲಟ್ ಕಾಳಗ!

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಓಮನ್ ಮೂಲದ ಕೋ-ಪೈಲಟ್ ಜಿಹಾದಿ ಶೈಲಿಯಲ್ಲಿ ನಡೆಸಿದ ಭೀಕರ ಚಾಕು ದಾಳಿ ಹಾಗೂ ವಿಮಾನವನ್ನು ಪತನಗೊಳಿಸುವ ಸಂಚು, 6 ವರ್ಷದ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಗ ಬಯಲಾಗಿದೆ.

ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಆತಂಕಕಾರಿ ಘಟನೆಯ ವಿವರಗಳು ಹೊರಬರುತ್ತಿದ್ದಂತೆ, ಪ್ರಯಾಣಿಕರಿಗೆ ಅಪಾಯದ ಕುರಿತು ಎಚ್ಚರಿಕೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರು ವರ್ಷದ ಬಾಲಕಿ ನೀನಾ ಮೇನೆಸ್ ಮತ್ತು ಆಕೆಯ ತಾಯಿ ಟಾಲಿ ಅವರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಓಮನ್ ಮೂಲದ ಕೋ-ಪೈಲಟ್ ಜಿಹಾದಿ ಶೈಲಿಯಲ್ಲಿ ನಡೆಸಿದ ಭೀಕರ ಚಾಕು ದಾಳಿ ಹಾಗೂ ವಿಮಾನವನ್ನು ಪತನಗೊಳಿಸುವ ಸಂಚು, 6 ವರ್ಷದ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಗ ಬಯಲಾಗಿದೆ.

ನೀನಾ ತನ್ನ ತಾಯಿಗೆ ವಿಮಾನದ ಮುಂಭಾಗದಲ್ಲಿದ್ದ ಶೌಚಾಲಯಕ್ಕೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಳು. ಶೌಚಾಲಯದ ಹೊರಗೆ ನಿಂತಿದ್ದಾಗ, ಕಾಕ್‌ಪಿಟ್‌ನ ಒಳಗಿನಿಂದ ತೀವ್ರ ಗದ್ದಲ ಮತ್ತು ಕಿರುಚಾಟದ ಶಬ್ದ ಕೇಳಿಸಿತು. ಕಾಕ್‌ಪಿಟ್‌ನಾದ್ಯಂತ ರಕ್ತ ಚೆಲ್ಲಾಪಿಲ್ಲಿಯಾಗಿತ್ತು ಮತ್ತು ಅಲ್ಲಿ ತೀವ್ರವಾದ ಹೋರಾಟ ನಡೆಯುತ್ತಿತ್ತು ಎಂದು ಟಾಲಿ ವಿವರಿಸಿದ್ದಾರೆ.

"ನಾನು, 'ಅವನು ಪೈಲಟ್‌ಗೆ ಚಾಕುವಿನಿಂದ ಇರಿಯುತ್ತಿದ್ದಾನೆ, ಅವನು ಪೈಲಟ್‌ಗೆ ಇರಿಯುತ್ತಿದ್ದಾನೆ, ಬನ್ನಿ ಸಹಾಯ ಮಾಡಿ!' ಎಂದು ಕಿರುಚಿದೆ. ಜನರು ನನ್ನತ್ತ ನೋಡಿದರಾದರೂ, ಅವರಿಗೆ ವಿಷಯವೇನು ಎಂದು ಅರ್ಥವಾಗಲಿಲ್ಲ ಎಂದಿದ್ದಾರೆ.

ತನ್ನ ಮಗಳ ಕಿರುಚಾಟವನ್ನು ಕೇಳಿ ಮತ್ತು ಪರಿಸ್ಥಿತಿ ಗಂಭೀರವಾಗಿದೆ ಎಂಬುದನ್ನು ಅರಿತ ನೀನಾ ಅವರ ತಂದೆ ತ್ಜ್ವಿಕಾ ಮೇನೆಸ್ (ಬ್ಯಾಂಕ್ ಲ್ಯೂಮಿಯ ಅಂಡರ್‌ರೈಟಿಂಗ್ ವಿಭಾಗದ ಸಿಇಒ), ಇತರ ಇಬ್ಬರು ಪ್ರಯಾಣಿಕರೊಂದಿಗೆ ಕೂಡಲೇ ಮುಂಭಾಗಕ್ಕೆ ಧಾವಿಸಿ, ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ಹತೋಟಿಗೆ ತಂದರು.

ತೀವ್ರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಕೂಡಲೇ ಕಾರ್ಯಪ್ರವೃತ್ತರಾದ ಪ್ರಯಾಣಿಕರ ಗುಂಪು ಒಳಗೆ ನುಗ್ಗಿ, ಚಾಕು ಹಿಡಿದಿದ್ದ ಸಹ-ಪೈಲಟ್‌ನನ್ನು ಹತೋಟಿಗೆ ತೆಗೆದುಕೊಂಡು ನಿಯಂತ್ರಣಕ್ಕೆ ಪಡೆಯಿತು. ಸಾವಿರಾರು ಅಡಿಗಳಷ್ಟು ಕೆಳಗೆ ಕುಸಿದಿದ್ದ ವಿಮಾನವನ್ನು ಅವರು ಮತ್ತೆ ಸ್ಥಿರಗೊಳಿಸಿದರು.

ಕಾಕ್‌ಪಿಟ್‌ನ ಬಾಗಿಲು ಭಾಗಶಃ ತೆರೆದುಕೊಂಡಿತ್ತು. ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಭಾರತೀಯ ಸಾಹಸಿ ಕಮಾಂಡರ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಓಮನ್ ಮೂಲದ ದಾಳಿಕೋರ ಕೋ-ಪೈಲಟ್‌ನೊಂದಿಗೆ ಕಾದಾಡುತ್ತಾ ಡೋರ್ ಲಾಕ್​ ಕೋಡ್ ಓಪನ್ ಮಾಡಿದ್ದರು. ಕಾಕ್‌ಪಿಟ್ ಪೂರ್ತಿ ರಕ್ತಸಿಕ್ತವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ತಮ್ಮನ್ನು ಹಾಗೂ ವಿಮಾನದಲ್ಲಿದ್ದವರನ್ನು ರಕ್ಷಿಸಿಕೊಳ್ಳಲು ಧೈರ್ಯದಿಂದ ಬಾಗಿಲು ತೆರೆದು ಹೊರಬರಲು ಯತ್ನಿಸಿದ್ದು ಆಶ್ಚರ್ಯಕರವಾಗಿತ್ತು ಎಂದು ತಾಲಿ ವಿವರಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಮಾಂಡರ್ ಸ್ಮಿತ್ ಅವರ ಮೇಲೆ ದಾಳಿಕೋರ ಕೋ-ಪೈಲಟ್ ಕುಳಿತು ಮತ್ತೆ ಚಾಕುವಿನಿಂದ ಇರಿಯಲು ಯತ್ನಿಸುತ್ತಿದ್ದಾಗ, ತಾಲಿ ಅವರ ಗಂಡ ಟ್ಜಿಕಾ ಮಾನೆಸ್, ಅಸಾಫ್ ರಾಜುವಾನ್ ಮತ್ತು ಯಾನಿವ್ ಹಾಯುನ್ ಎಂಬ ಮೂವರು ಪ್ರಯಾಣಿಕರು ತಕ್ಷಣವೇ ಆತನ ಮೇಲೆ ಮುಗಿಬಿದ್ದರು. ವಿಮಾನದಲ್ಲಿದ್ದ ಹೆಡ್‌ಫೋನ್ ಕೇಬಲ್​ಗಳನ್ನೇ ಬಳಸಿ ದಾಳಿಕೋರನ ಕೈ-ಕಾಲುಗಳನ್ನು ಕಟ್ಟಿಹಾಕಿ ಆತನನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!