ಜೋಹಾನ್ಸ್‌ಬರ್ಗ್ ಮತ್ತು ಕೇಪ್‌ಟೌನ್‌ನಲ್ಲಿ ರಕ್ತಸಿಕ್ತ ಮುಂಜಾನೆ: 27 ಜನ ಬಲಿ! Online Desk
ವಿದೇಶ

ದಕ್ಷಿಣ ಆಫ್ರಿಕಾದಲ್ಲಿ ನೆತ್ತರ ಮಳೆ: ಕೆಲವೇ ಗಂಟೆಗಳ ಅಂತರದಲ್ಲಿ ಬಾರ್, ಅಂಗಡಿಗಳ ಮೇಲೆ ಗುಂಡಿನ ದಾಳಿ, 27 ಮಂದಿ ದುರ್ಮರಣ!

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಹಾಗೂ ಕೇಪ್‌ಟೌನ್ ನಗರಗಳಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ನಡೆದಿರುವ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಜೋಹಾನ್ಸ್‌ಬರ್ಗ್/ಕೇಪ್‌ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಎರಡು ಪ್ರಮುಖ ನಗರಗಳಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ನಡೆದಿರುವ ಭೀಕರ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ರಾಜಧಾನಿ ಕೇಪ್‌ಟೌನ್ ಹಾಗೂ ಜೋಹಾನ್ಸ್‌ಬರ್ಗ್‌ನ ಜನನಿಬಿಡ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆದ ದುಷ್ಕರ್ಮಿಗಳು ಅಕ್ಷರಶಃ ರಕ್ತದ ಓಕುಳಿಯನ್ನೇ ಹರಿಸಿದ್ದು, ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಜೋಹಾನ್ಸ್‌ಬರ್ಗ್ ಬಾರ್ ದಾಳಿಯಲ್ಲಿ 17 ಸಾವು

ದಕ್ಷಿಣ ಆಫ್ರಿಕಾದ ಅತ್ಯಂತ ದೊಡ್ಡ ನಗರವಾಗಿರುವ ಜೋಹಾನ್ಸ್‌ಬರ್ಗ್‌ನ ನೈಋತ್ಯ ಭಾಗದಲ್ಲಿರುವ ವೆಡೆಲಾ ಟೌನ್‌ಶಿಪ್‌ನ ಬಾರ್‌ ಒಂದರಲ್ಲಿ ಶನಿವಾರ ರಾತ್ರಿ ಸುಮಾರು 9:30 ರ ವೇಳೆಗೆ ಈ ದಾಳಿ ನಡೆದಿದ್ದು,  ಎಕೆ-47 (AK-47) ರೈಫಲ್‌ಗಳು ಮತ್ತು ಪಿಸ್ತೂಲ್‌ಗಳಿಂದ ಸಜ್ಜಿತರಾಗಿದ್ದ ಎಂಟು ಮಂದಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಏಕಾಏಕಿ ಲಗ್ಗೆ ಇಟ್ಟಿದ್ದಾರೆ. ಮೊದಲು ಬಾರ್‌ನ ಹೊರಗಡೆ ಕುಳಿತು ಮದ್ಯಪಾನ ಮಾಡುತ್ತಿದ್ದ ಗ್ರಾಹಕರ ಮೇಲೆ ಗುಂಡು ಹಾರಿಸಿದ ಅವರು, ನಂತರ ಒಳಗೆ ನುಗ್ಗಿ ಅಡ್ಡಾದಿಡ್ಡಿ ಗುಂಡಿನ ಸುರಿಮಳೆಗರೆದಿದ್ದಾರೆ. ಈ ವೇಳೆ, ಘಟನಾ ಸ್ಥಳದಲ್ಲೇ 13 ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದು, ಇನ್ನು 15ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ, ದಾಳಿಕೋರರು ಹೋಗುವ ಮುನ್ನ ಗ್ರಾಹಕರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು, ಹೊರಗಡೆ ನಿಲ್ಲಿಸಲಾಗಿದ್ದ ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಎರಡು ಕಾರುಗಳಲ್ಲಿ ಪರಾರಿಯಾಗಿದ್ದಾರೆ.

ಕೇಪ್‌ಟೌನ್ ಶೂಟಿಂಗ್ 10 ಸಾವು

ಜೋಹಾನ್ಸ್‌ಬರ್ಗ್ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ, ಅಂದರೆ ಭಾನುವಾರ ಮುಂಜಾನೆ 1:46 ರ ಸುಮಾರಿಗೆ ಕೇಪ್‌ಟೌನ್‌ನ ಹೊರವಲಯದ ಲ್ವಾಂಡ್ಲೆ ಟೌನ್‌ಶಿಪ್‌ನಲ್ಲಿರುವ ಮಾಂಸದ ಅಂಗಡಿ ಮತ್ತು ಮನರಂಜನಾ ಸ್ಥಳವೊಂದರ ಮೇಲೆ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ. ಐವರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮುಂದುವರೆದು, ದಕ್ಷಿಣ ಆಫ್ರಿಕಾ ಪೊಲೀಸರು ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ತೀವ್ರ ಶೋಧ ಕಾರ್ಯಾಚರಣೆ ಹಾಗೂ ತನಿಖೆಯನ್ನು ಆರಂಭಿಸಿದ್ದರೂ, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ದಾಳಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಗ್ಯಾಂಗ್ ವಾರ್ ಅಥವಾ ಸಂಘಟಿತ ಅಪರಾಧದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NEET ಪ್ರಶ್ನೆಪತ್ರಿಕೆ ಸೋರಿಕೆ: NTA ಕಚೇರಿಗೆ CISF ಕಾವಲು, ಗೌಪ್ಯ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ

'ಚುನಾವಣಾ ಆಯೋಗವನ್ನು ಅಂಪೈರ್ ಮಾಡಿಕೊಂಡು ಬಿಹಾರದಲ್ಲಿ ಗೆದ್ದಂತೆ ಕರ್ನಾಟಕದಲ್ಲಿ ಗೆಲ್ಲಲು ಸಾಧ್ಯವಿಲ್ಲ': ಬಿಕೆ ಹರಿಪ್ರಸಾದ್

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರದಿದ್ದರೆ ಸರ್ಕಾರಕ್ಕೆ ಯಾವುದೇ ಕಷ್ಟವಿರುತ್ತಿರಲಿಲ್ಲ: ಸಚಿವ ಎಚ್‌ಸಿ ಬಾಲಕೃಷ್ಣ

10 Years Of Surgical Strike: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ನೀತಿ; ಭಾರತದ ದಿಟ್ಟ ನಿಲುವಿಗೆ ಹೊಸ ಉದಾಹರಣೆ: ಪ್ರಧಾನಿ ಮೋದಿ

ಉತ್ತರ ಪ್ರದೇಶದಲ್ಲಿ ವರುಣನ ರೌದ್ರಾವತಾರ; 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ, ಅವಾಂತರಕ್ಕೆ 10 ಮಂದಿ ಬಲಿ, 17 ಜನರಿಗೆ ಗಾಯ..!