ಪರಮಾಣು ಸಾಮರ್ಥ್ಯದ ಯುದ್ಧವಿಮಾನ ಪತನ 
ವಿದೇಶ

ರಷ್ಯಾಗೆ ಮರ್ಮಾಘಾತ; ಪರಮಾಣು ಸಾಮರ್ಥ್ಯದ ಯುದ್ಧವಿಮಾನ ಪತನ-ಬೆಂಕಿಗಾಹುತಿ, 6 ಮಂದಿ ಸಜೀವ ದಹನ, ಓರ್ವ ಪಾರು! Video

ಮಂಗಳವಾರ ರಷ್ಯಾದ ದೂರ ಪೂರ್ವದ ಅಮುರ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ತರಬೇತಿ ಹಾರಾಟದ ವೇಳೆ ವಿಮಾನವು ಜನವಸತಿ ಇಲ್ಲದ ಪ್ರದೇಶದಲ್ಲಿ ಪತನಗೊಂಡಿದೆ.

ಮಾಸ್ಕೋ: ರಷ್ಯಾದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ತರಬೇತಿ ಹಾರಾಟ ನಡೆಸುತ್ತಿದ್ದ ಪರಮಾಣು ಸಾಮರ್ಥ್ಯದ Tu-95MS ತಂತ್ರಾತ್ಮಕ ಬಾಂಬರ್ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ.

ಮಂಗಳವಾರ ರಷ್ಯಾದ ದೂರ ಪೂರ್ವದ ಅಮುರ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ತರಬೇತಿ ಹಾರಾಟದ ವೇಳೆ ವಿಮಾನವು ಜನವಸತಿ ಇಲ್ಲದ ಪ್ರದೇಶದಲ್ಲಿ ಪತನಗೊಂಡಿದೆ.

ವಿಮಾನದಲ್ಲಿದ್ದ ಏಳು ಸಿಬ್ಬಂದಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

“ಸೆಪ್ಟೆಂಬರ್ 29ರಂದು ತರಬೇತಿ ಹಾರಾಟದ ವೇಳೆ Tu-95 ವಿಮಾನ ಅಮುರ್ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನವು ಜನವಸತಿ ಇಲ್ಲದ ಪ್ರದೇಶದಲ್ಲಿ ನೆಲಕ್ಕಪ್ಪಳಿಸಿದೆ” ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಆರು ಮಂದಿ ಸಜೀವ ದಹನ

ವಿಮಾನದಲ್ಲಿದ್ದ ಏಳು ಸಿಬ್ಬಂದಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಓರ್ವ ಸಿಬ್ಬಂದಿ ಬದುಕುಳಿದಿದ್ದಾರೆ. ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ನಿಯಮಿತ ಸೇನಾ ತರಬೇತಿ ಮತ್ತು ಅಭ್ಯಾಸಗಳಿಗಾಗಿ ಈ ಪರಮಾಣು ಸಾಮರ್ಥ್ಯದ ಬಾಂಬರ್ ವಿಮಾನವನ್ನು ಬಳಸುತ್ತದೆ. ಮಂಗಳವಾರದ ತರಬೇತಿ ಹಾರಾಟದ ವೇಳೆ ವಿಮಾನದಲ್ಲಿ ಯಾವುದೇ ಯುದ್ಧಸಾಮಗ್ರಿ ಅಥವಾ ಮದ್ದುಗುಂಡುಗಳನ್ನು ತುಂಬಿರಲಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಮಧ್ಯೆ ವಿಮಾನ ಪತನದ ದೃಶ್ಯ ಎನ್ನಲಾದ ಪರಿಶೀಲಿಸದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ವಿಮಾನ ಪತನಗೊಂಡ ಸ್ಥಳದಿಂದ ದಟ್ಟ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟದಂತಹ ಶಬ್ದಗಳು ಕೇಳಿಬರುತ್ತವೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ಡಿಕೆಶಿ ತಿರುಗೇಟು

ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ಅಕ್ಟೋಬರ್ 3 ರಿಂದ ಕೇಂದ್ರ ತಂಡದ ಸಮೀಕ್ಷೆ- ಎಚ್.ಡಿ ಕುಮಾರಸ್ವಾಮಿ

ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ, ಕಡಿಮೆ ನೀರು ಬೇಕಾದ ಬೆಳೆಗಳಿಗೆ ಒತ್ತು: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಪಾಕ್‌ಗೆ ನಡುಕ ಹುಟ್ಟಿಸಿದ ಬಲೂಚ್ ನೂತನ ಮಹಿಳಾ ಪಡೆ: 9 ಸೈನಿಕರ ಹತ್ಯೆಗೈದ ಮೊದಲ ಕಾರ್ಯಾಚರಣೆ ವಿಡಿಯೋ ಬಿಡುಗಡೆ!

ಕಥುವಾದಲ್ಲಿ ಘೋರ ಕೃತ್ಯ: ಓರ್ವ ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ CISF ಯೋಧ!