ವಿದ್ಯೆಗೆ ಗ್ರಹ ಬಲ

ವಿದ್ಯೆಗೆ ಗ್ರಹ ಬಲ
Updated on: 

ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎಂಬ ಆಸೆ ಎಲ್ಲಾ ಪೋಷಕರಲ್ಲೂ ಇರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಮಯ ಹಾಗೂ ಹಣ ಎರಡನ್ನೂ ವ್ಯಯಿಸುತ್ತಾರೆ ಪೋಷಕರು. ಹೀಗಿರುವಾಗ ನಮ್ಮ ವಿಶಿಷ್ಟ ಪುರಾತನ ಜ್ಯೋತಿಷ ಶಾಸ್ತ್ರದ ಸಹಾಯವನ್ನೂ ಪಡೆದರೆ ಗುರಿ ಮುಟ್ಟುವುದು ಸ್ವಲ್ಪ ಮಟ್ಟಿಗೆ ಸುಲಭ ಸಾಧ್ಯ ಆಗುವುದರಲ್ಲಿ ಸಂಶಯವಿಲ್ಲ.
ಜ್ಯೋತಿಷ ಶಾಸ್ತ್ರದ ಪ್ರಕಾರ, ವಿದ್ಯೆ ಚೆನ್ನಾಗಿ ಸಿಗಬೇಕು ಎಂದರೆ ಆ ಜಾತಕದಲ್ಲಿ ಪ್ರಮುಖವಾಗಿ ಗುರು ಗ್ರಹ ಹಾಗೂ ಬುಧ ಗ್ರಹ. ಈ ಎರಡೂ ಗ್ರಹಗಳು ಚೆನ್ನಾಗಿರಬೇಕು. ವಿದ್ಯಾಕಾರಕ ಬುಧ ಹಾಗೂ ಜ್ಞಾನಕಾರಕ ಗುರು ಈ ಎರಡೂ ಗ್ರಹಗಳು ವಿದ್ಯಾ ಪ್ರಾಪ್ತಿಯಲ್ಲಿ ವಿಶೇಷ ಪಾತ್ರ ವಹಿಸುತ್ತವೆ.

ಗಣಿತ ಶಾಸ್ತ್ರ ಎಂಬುದು ಬಹಳಷ್ಟು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಇದಕ್ಕೆ ಕಾರಣ ಕೆಲವೊಮ್ಮೆ ಅಂಥವರ ಜಾತಕದಲ್ಲಿ ಬುಧನ ಸ್ಥಿತಿ ಮೇಷ, ಕರ್ಕ, ವೃಶ್ಚಿಕ ಹಾಗೂ ಮೀನ ಈ ರಾಶಿಗಳಲ್ಲಿ ಬುಧ ಜಾತಕದಲ್ಲಿ ಇದ್ದಾಗ ರಾಶ್ಯಾಧಿಪತಿಯೊಂದಿಗಿನ ವೈರತ್ವ ಅಥವಾ ನೀಚತ್ವದಿಂದಾಗಿ ತನ್ನ ಬಲ ಕಳೆದುಕೊಳ್ಳುವ ಬುಧ ಜಾತಕನಿಗೆ ಒಳ್ಳೆಯ ವಿದ್ಯೆ ಕೊಡುವಲ್ಲಿ ವಿಫಲನಾಗುತ್ತಾನೆ. ಇನ್ನು ಗುರು ಗ್ರಹವೂ ವ್ಯಯದಲ್ಲಿದ್ದರೆ ಅಥವಾ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಈ ಯಾವುದಾದರೊಂದು ರಾಶಿಯಲ್ಲಿದ್ದರೆ ಗುರು ಗ್ರಹವೂ ಬಲಹೀನನಾಗಿ ವಿದ್ಯಾರ್ಥಿಗಳು ಬಹಳ ಕಷ್ಟಪಡಬೇಕಾಗುತ್ತದೆ.

ಕರ್ಮಾಧಿಪತಿ ಗ್ರಹ
ಪ್ರತಿಯೊಬ್ಬರ ಜಾತಕದಲ್ಲೂ ಕರ್ಮಾಧಿಪತಿ ಗ್ರಹ ಎಂದಿರುತ್ತದೆ. ಅಂಥ ಕರ್ಮಾಧಿಪತಿ ಗ್ರಹ ಯಾವ ಉದ್ಯೋಗವನ್ನು ಸೂಚಿಸುತ್ತದೆಯೋ ಅದನ್ನೇ ಮೊದಲಿನಿಂದಲೂ ಅಭ್ಯಸಿಸಿ, ಅದೇ ವಿಷಯದಲ್ಲಿ ಪದವಿ ಪಡೆದರೆ ಭವಿಷ್ಯದಲ್ಲಿ ಉದ್ಯೋಗ ದೊರಕುವುದು ಸುಲಭವಾಗಿರುತ್ತದೆ.
ಬುಧ ಹಾಗೂ ಗುರು ಗ್ರಹಗಳು ಚೆನ್ನಾಗಿದ್ದರೂ ಕೆಲವರಿಗೆ ವಿದ್ಯೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ಮುಖ್ಯ ಕಾರಣ ಸರ್ಪದೋಷ. ಈ ದೋಷದಿಂದಾಗಿ ಶ್ರದ್ಧೆಯಿಂದ ಓದಿದರೆ ಒಳ್ಳೆಯ ವಿದ್ಯೆ ಪಡೆಯಬಹುದಾದ ವಿದ್ಯಾರ್ಥಿಗಳೂ ಸಿಟ್ಟು ಹಾಗೂ ಬೇಡದ ಹಠ ಮಾಡಿ ವಿದ್ಯೆಯಿಂದ ವಂಚಿತರಾಗುತ್ತಾರೆ.

ಇಂಥ ಸಮಸ್ಯೆಗಳ ಪರಿಹಾರದ ವಿಚಾರಕ್ಕೆ ಬಂದಾಗ ಪೋಷಕರು ಹೆಚ್ಚಿನ ಆಸಕ್ತಿ ತೋರಬೇಕಾಗುತ್ತದೆ. ಮಕ್ಕಳ ಜಾತಕವನ್ನು ಯೋಗ್ಯ ಜ್ಯೋತಿಷಿಗಳ ಬಳಿ ಕೊಟ್ಟು ಪರಿಶೀಲಿಸಬೇಕು. ಬುಧನ ದೋಷ ಪರಿಹಾರಕ್ಕಾಗಿ ಪುರುಷ ಸೂಕ್ತ ಹವನ ಹಾಗೂ ಗುರು ದೋಷ ಪರಿಹಾರಕ್ಕೆ ಗುರು ಮಂತ್ರ ಜಪ, ಹವನ ಮಾಡಿಸಬೇಕು. ಅದರಲ್ಲೂ ಸರಸ್ವತಿ ಮಂತ್ರ ಹವನದಿಂದ ಖಂಡಿತ ವಿಶೇಷ ಫಲ ಸಿಗುತ್ತದೆ. ಇನ್ನು ಹವನ ಮಾಡಿಸಲು ಅಶಕ್ತರು ಯಂತ್ರ ಮುದ್ರಿತ ಅಲ್ಲದೆ ಶಾಸ್ತ್ರೋಕ್ತವಾಗಿ ಕೈಯಲ್ಲೇ ತಾಮ್ರದ ತಗಡಿನಲ್ಲಿ ಸರಸ್ವತಿ ಯಂತ್ರ ಬರೆಸಿ ಅದನ್ನು ತಮ್ಮ ಮಕ್ಕಳ ಕೈನಲ್ಲಿ ಪೂಜೆ ಮಾಡಿಸಬಹುದು. ನಿತ್ಯ ಸರಸ್ವತಿ ಅಷ್ಟೋತ್ತರ ಓದಿಸಬೇಕು. ಮನೆಯ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಕುಳಿತು ಓದಲು ಮಕ್ಕಳಿಗೆ ಹೇಳಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ಮೊ. 9845682380.

- ವಿಠ್ಠಲ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com