ಶುಭ ನುಡಿಯೇ ಶಕುನದ ಹಕ್ಕಿ

ಶುಭ ನುಡಿಯೇ ಶಕುನದ ಹಕ್ಕಿ
Updated on: 

ಮಾನವ ಸಂಘ ಜೀವಿ. ಮಾತ್ರವಲ್ಲ, ಪ್ರಕೃತಿಯ ಆರಾಧಕನೂ ಹೌದು. ಪ್ರಾಣಿ ಪಕ್ಷಿಗಳೂ ಮಾನವನ ಹಿತವನ್ನೇ ಸದಾ ಬಯಸುತ್ತದೆ. ಹೀಗಾಗಿಯೇ ಹಲವು ಪ್ರಾಣಿ, ಪಕ್ಷಿಗಳನ್ನು ಮಾನವ ವಿಶೇಷವಾಗಿ ಆರಾಧಿಸುವುದೂ ಇದೆ.
ಜೋಡಿ ಬಾತುಕೋಳಿಯ ಪ್ರತಿರೂಪವನ್ನು ಮನೆಯಲ್ಲಿಟ್ಟುಕೊಂಡರೆ ಒಳ್ಳೆಯದಾಗುತ್ತದೆ ಎಂಬುದು ಚೀನಾದವರ ನಂಬಿಕೆ. ಆದ್ದರಿಂದಲೇ ತಮ್ಮ ಮನೆಯಲ್ಲಿ ಇದನ್ನು ಇಟ್ಟು ಸಂತೋಷ ಪಡುತ್ತಾರೆ. ಅದರಂತೆ ಲವ್‌ಬರ್ಡ್ಸ್ ಅನ್ನು ಕೂಡಾ ಇವರು ಮನೆಯಲ್ಲಿ, ಕಚೇರಿಯಲ್ಲಿಡುತ್ತಾರೆ.
ಹಕ್ಕಿಗಳ ಜೋಡಿಗಳು ಪ್ರೀತಿಯ ಮತ್ತು ಸ್ನೇಹದ ಪ್ರತೀಕವೆಂದು ನಂಬಿಕೆ ಇದೆ. ಇದನ್ನು ಮನೆಯಲ್ಲಿನ ಕೋಣೆಯ ನೈಋತ್ಯ ಮೂಲೆಯಲ್ಲೇ ಇಡಬೇಕೆಂಬ ಕ್ರಮ ಇದೆ. ಪತಿಪತ್ನಿ ಮಲಗುವ ಕೋಣೆ ನೈಋತ್ಯ ಮೂಲೆಯಲ್ಲಿಟ್ಟರೆ ಸತಿಪತಿ ಅನ್ಯೋನ್ಯವಾಗಿ ಇರುತ್ತಾರೆ ಎಂಬುದು ಅವರ ನಂಬಿಕೆ.

ಸಂಬಂಧ ಕೂಡಿಬರಲಿದೆ...
ಮದುವೆಗೆ ಜೋಡಿ ಹುಡುಕುತ್ತಿರುವ ಸಮಯದಲ್ಲಿ ಹಕ್ಕಿಗಳ ಚಿತ್ರ ನೇತು ಹಾಕಿದರೆ ಸಂಬಂಧ ಆದಷ್ಟು ಬೇಗ ಕೂಡಿ ಬರುವ ನಂಬಿಕೆ ಇದೆ. ಕೆಲವರು ಒಂಟಿ ಬಾತುಕೋಳಿ, ಹಕ್ಕಿಗಳ ಚಿತ್ರವನ್ನು ಇಡುತ್ತಾರೆ. ಇದು ಸರಿಯಲ್ಲ. ಬೆಸಸಂಖ್ಯೆಯ ಹಕ್ಕಿಗಳನ್ನು ಇಡಬಾರದು.
ಒಂದು ಹಕ್ಕಿ ಏಕಾಂಗಿ ಜೀವನದ ಸಂಕೇತ. ಎರಡು ಗಂಡು ಅಥವಾ ಎರಡು ಹೆಣ್ಣು ಬಾತು ಕೋಳಿಗಳ ಚಿತ್ರಗಳನ್ನು ಇಡಲೇಬಾರದು. ಒಂದು ಗಂಡು, ಒಂದು ಹೆಣ್ಣು ಇದ್ದರೆ ಇದು ಒಬ್ಬರನ್ನು ಆಕರ್ಷಿಸುವ ಸಂಕೇತ. ಬಂಧನದಲ್ಲಿರುವ ಜೋಡಿ ಹ್ಕಕಿಗಳ ಚಿತ್ರವನ್ನು ಯಾವಾಗಲೂ ಇಡಬಾರದು. ಏಕೆಂದರೆ ಇದರಿಂದ ಒಳ್ಳೆಯ ಫಲ ಸಿಗುವುದಿಲ್ಲ ಎಂಬ ನಂಬಿಕೆ ಇದೆ.
ಜೋಡಿ ಹಕ್ಕಿ ಅಥವಾ ಒಂದು ಹಕ್ಕಿ ಕುಳಿತುಕೊಂಡಾಗ ಅದರ ಹತ್ತಿರ ಮತ್ತೊಂದು ಹಕ್ಕಿ ಹಾರಿಕೊಂಡು ಬರುವುದು ಬಹಳ ಒಳ್ಳೆಯದು. ಇಂಥ ಚಿತ್ರವನ್ನು ಮಲಗುವ ಕೋಣೆಗೆ ಅಂಟಿಸಿದರೆ ಒಳ್ಳೆಯದೆಂಬ ನಂಬಿಕೆ ಇದೆ. ಇದೆಲ್ಲಾ ಚೀನಾ ದೇಶದ ಜನರ ನಂಬಿಕೆಯಾದರೂ ನಮ್ಮ ಕಣ್ಣಿನ ಮುಂದೆ ಜೋಡಿ ಹಕ್ಕಿಗಳ ಚಿತ್ರವನ್ನು ನೋಡಿದಾಗ ನಮ್ಮ ಮನಸ್ಸಿಗೂ ಖುಷಿ ಕೊಡುತ್ತದೆ. ಮಾಹಿತಿಗೆ ಮೊ. 9448490860.

- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com