ಬಣ್ಣದಲ್ಲೇ ಎಲ್ಲ ಅಡಗಿದೆ

Updated on: 

ನಮ್ಮ ಭೌತಿಕ ದೇಹ ವಿವಿಧ ಹಂತ ಮತ್ತು ಸಂಯೋಜನೆಗಳಲ್ಲಿ ಪಂಚಭೂತಗಳೆಂಬ ಐದು ಮೂಲಭೂತ ಅಂಶಗಳನ್ನು ಹೊಂದಿರುತ್ತದೆ ಎನ್ನುವುದು ನಮಗೆ ಗೊತ್ತೇ ಇದೆ. ಸನಾತನ ಕ್ರಿಯೆ ಪ್ರಕಾರ ಈ ಪಂಚಭೂತಗಳನ್ನು ವರ್ಣಗಳು ನಿಯಂತ್ರಿಸುತ್ತವೆ. ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಬಣ್ಣವಿದೆ. ಬಣ್ಣ ಇಲ್ಲದಿದ್ದರೆ ಅದು ಕೂಡ ಒಂದು ಬಣ್ಣವೇ. ಪ್ರತಿ ವರ್ಣಕ್ಕೂ ಅದರದ್ದೇ ಆದ ನಿರ್ದಿಷ್ಟ ತರಂಗಾಂತರ ಇರುತ್ತದೆ. ಅದೇ ನಮ್ಮ ದೇಹದ ಸಮತೋಲನಕ್ಕೆ ಕಾರಣವಾಗಿದೆ.
ಈ ಬಣ್ಣಗಳ ತರಂಗಾಂತರದಲ್ಲಿ ಏರಿಳಿತ ಉಂಟಾದರೆ ಅದರ ಪರಿಣಾಮ ದೇಹದ ಮೇಲೆಯೂ ಆಗುತ್ತದೆ. ಈ ವ್ಯತ್ಯಾಸವನ್ನೇ ನಾವು ಅನಾರೋಗ್ಯ ಅಥವಾ ಆಯುರ್ವೇದದಲ್ಲಿ ಅಸಮತೋಲನ ಎನ್ನುತ್ತೇವೆ. ಬಣ್ಣ ವಿಜ್ಞಾನವು ಧ್ವನಿ ವಿಜ್ಞಾನದೊಂದಿಗೆ ನೇರ ಸಂಬಂಧ ಹೊಂದಿದೆ. ಜಗತ್ತಿನಲ್ಲಿ ಮೊದಲು ಸೃಷ್ಟಿಯಾದದ್ದು ಶಬ್ದ, ನಂತರ ಬಣ್ಣ. ಆದ್ದರಿಂದ ವರ್ಣಗಳ ತರಂಗಾಂತರ ವ್ಯತ್ಯಾಸ ದೇಹದ ಮೇಲೆ ಪರಿಣಾಮ ಬೀರುತ್ತದೆ. ಈ ವ್ಯತ್ಯಾಸ ಅಥವಾ ಅಸಮತೋಲನವನ್ನು ಸರಿಪಡಿಸಿಕೊಳ್ಳಲು ಸನಾತನ ಕ್ರಿಯೆಯಲ್ಲಿ ಹಲವು ಪರಿಣಾಮಕಾರಿ ತಂತ್ರಗಳನ್ನು ಹೇಳಲಾಗಿದೆ. ವಿಶೇಷವಾಗಿ ನಿರ್ದಿಷ್ಟ ಧ್ವನಿ ಮತ್ತು ಮಂತ್ರಗಳು ಇಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಸನಾತನ ಕ್ರಿಯೆಯಲ್ಲಿ ಹೇಳುವ ಮಂತ್ರ 'ರಾಮ್.' ಇದನ್ನು ಪಠಿಸುವಾಗ ಗುರು ನಿಮ್ಮ ಎದುರಿಗೇ ಕುಳಿತಿದ್ದಾರೆ ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಬೇಕು.
ಒಂದು ಉದಾಹರಣೆ ನೀಡುತ್ತೇನೆ. ನಿಮಗೆ ಹೊಟ್ಟೆಯಲ್ಲಿ ಏನೋ ತೊಂದರೆ ಕಾಣಿಸಿಕೊಂಡಿದೆ ಎಂದಿಟ್ಟುಕೊಳ್ಳಿ. ಹೊಟ್ಟೆಯನ್ನು ನಿಯಂತ್ರಿಸುವ ಬಣ್ಣಗಳೆಂದರೆ ಹಸಿರು ಮತ್ತು ತಿಳಿ ಕೇಸರಿ. ನಿಗದಿತ ಪ್ರಮಾಣದಲ್ಲಿ ಈ ವರ್ಣಗಳ ನಿರ್ದಿಷ್ಟ ತರಂಗಾಂತರಗಳನ್ನು ಹೊಟ್ಟೆಗೆ ಸೇರಿಸಿದರೆ ಸಮಸ್ಯೆ ಬಗೆಹರಿದಂತೆಯೇ.
ಇದನ್ನು ಮಾಡುವುದೂ ಸುಲಭ. ಆರಾಮ ಅನ್ನಿಸುವ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಎರಡೂ ಹಸ್ತಗಳಿಂದ ನಾಭಿಯನ್ನು ಮೃದುವಾಗಿ ಹಿಡಿದುಕೊಳ್ಳಿ. ಬೆರಳುಗಳು ಹೊಟ್ಟೆಯನ್ನು ಸ್ಪರ್ಶಿಸುತ್ತಿರಲಿ. ಕಣ್ಣುಗಳನ್ನು ಮುಚ್ಚಿಕೊಳ್ಳಿ. ಗುರುವನ್ನು ಧ್ಯಾನಿಸಿ, ಅವರು ನಿಮ್ಮ ಎದುರೇ ಕುಳಿತಿದ್ದಾರೆ ಎಂಬಂತೆ ಕಲ್ಪಿಸಿಕೊಳ್ಳಿ. ನಿಧಾನವಾಗಿ, ಮೆಲುಧ್ವನಿಯಲ್ಲಿ, ಆಳವಾಗಿ 'ರಾಮ್‌' ಮಂತ್ರ ಪಠಿಸಿ. ಕೆಲಸಮಯದಲ್ಲಿ ದೇಹ ಬಿಸಿಯಾಗುತ್ತಿರುವ ಅನುಭವ ಪಡೆಯುವಿರಿ. ಮಂತ್ರಪಠಣೆ ಮುಂದುವರಿಸಿ. ಬೇರೆಯವರಿಗೆ ಕೇಳದಂತೆ ಮೆಲುವಾಗಿ ಪಠಿಸಿ. ಎಲ್ಲಿ ತೊಂದರೆ ಆಗಿದೆಯೋ ಆ ಭಾಗದಲ್ಲಿ ಪ್ರಾಣ ಚೇತನಗೊಂಡು ತೊಂದರೆಯಿಂದ ಮುಕ್ತಿ ಪಡೆಯುವಿರಿ.

= ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com