ರೋಗ ನಿವಾರಣೆಗೆ ಹೋಮ, ಹವನ

ರೋಗ ನಿವಾರಣೆಗೆ ಹೋಮ, ಹವನ
Updated on: 

ಹೋಮ, ಹವನ ಮಾಡಿ, ತೊಂದರೆ ನಿವಾರಿಸಿಕೊಳ್ಳುವ ಕ್ರಿಯೆ ವೇದ, ಪುರಾಣ, ಇತಿಹಾಸ ಕಾಲದಿಂದಲೂ ಜಾರಿಯಲ್ಲಿದೆ. ಇದರಿಂದ ಮಾನವನನ್ನು ಕಾಡುವ ಅನೇಕಾನೇಕ ಕಷ್ಟಕಾರ್ಪಣ್ಯ, ರೋಗ ರುಜಿನ ಸೇರಿದಂತೆ ಹಲವು ಬಾಧೆ ನಿವಾರಿಸಿಕೊಳ್ಳಬಹುದು ಎಂಬುದು ಹಿಂದೂ ಧರ್ಮದ ನಂಬಿಕೆ.
ಹೋಮ- ಹವನಗಳನ್ನು ಮಾಡುವುರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ, ಶಾಂತಿ ಸಿಕ್ಕಿ ಮಾನವ ಸಂತೋಷದಿಂದ, ಆರೋಗ್ಯದಿಂದ ಇರುತ್ತಾನೆ. ಪರಿಸರವೂ ಶುದ್ಧವಾಗಿರುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ.
ಗಾಯತ್ರಿ ಮಂತ್ರದಲ್ಲಿ ಬಹಳ ಶಕ್ತಿ ಅಡಗಿದೆ. ಗಾಯತ್ರಿ ಮಂತ್ರದೊಂದಿಗೆ ಹವನ ಕೈಗೊಂಡರೆ ಎಷ್ಟೋ ರೋಗ ನಾಶವಾಗುತ್ತದ್ದಂತೆ. ಯಾವುದೇ ಪ್ರಕಾರದ ಜ್ವರ ಶಮನಗೊಳಿಸಬೇಕಾದರೆ ಹಾಲಿನಲ್ಲಿ ಮಾವಿನೆಲೆಯನ್ನು ಹಾಕಿ ಗಾಯತ್ರಿ ಹವನ ಮಾಡಿದರೆ ಜ್ವರ ಇಳಿದು ಹೋಗುತ್ತದೆ. ಅರಳಿ ಸಮಿತ್ತಿನೊಂದಿಗೆ ಗಾಯತ್ರಿ ಮಂತ್ರ ಉಚ್ಚಾರಣೆ ಮಾಡುತ್ತಾ ಹವನ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ.
ಗಾಯತ್ರಿ ಮಂತ್ರದೊಂದಿಗೆ ಎಳ್ಳು ಮತ್ತು ಸಮಿತ್ತಿನೊಂದಿಗೆ ಹವನ ಮಾಡಿದರೆ ವಾಯುರೋಗ, ಹೃದಯದ ಖಾಯಿಲೆ, ಬಿ.ಪಿ., ಸಿಹಿಮೂತ್ರ ಸಂಬಂಧಿ ವಿಕಾರಗಳ ನಿವಾರಣೆಗೆ ಸಹಾಯವಾಗುತ್ತದೆ. ಹಾಲಿನಲ್ಲಿ ಜೇನುತುಪ್ಪ ಸೇರಿಸಿ ಇಲ್ಲವೇ ಹಾಲು, ಮೊಸರು ಅಥವಾ ತುಪ್ಪದೊಂದಿಗೆ ಗಾಯತ್ರಿ ಮಂತ್ರದ ಹವನ ಮಾಡಿದರೆ ಕ್ಷಯ ರೋಗದಿಂದ ಮುಕ್ತಿ ಪಡೆಯಬಹುದು.
ಗಾಯತ್ರಿ ಮಂತ್ರ ಜಪಿಸುತ್ತಾ ಅತ್ತಿ ಸಮಿತ್ತಿನೊಂದಿಗೆ ಹವನ ಮಾಡಿದರೆ ಪ್ರಮೇಹ ಸೇರಿದಂತೆ ಹಲವು ಸ್ತ್ರೀರೋಗಗಳಿಂದಲೂ ಮುಕ್ತಿ ಪಡೆಯಬಹುದು. ವಿದ್ಯಾಪ್ರಾಪ್ತಿಗಾಗಿ ಮುತ್ತುಗದ ಸಮಿತ್ತಿನಿಂದ, ಅನ್ನಪ್ರಾಪ್ತಿಗಾಗಿ ಜೋಳದಿಂದ, ಶತ್ರುನಾಶಕ್ಕಾಗಿ ಗುಗ್ಗುಳದಿಂದ ಹವನ ಮಾಡುವುದರಿಂದ ಪರಿಹಾರ ದೊರಕುತ್ತದೆ.
ದೀರ್ಘಕಾಲದಿಂದ ರೋಗದಿಂದ ಬಳಲುತ್ತಾ ಮರಣಶಯ್ಯೆಯಲ್ಲಿರುವವರಿಗಾಗಿ ಹವನ ಮಾಡುವುದು ಉತ್ತಮ. ಶಾರೀರಿಕ ಸೌಂದರ್ಯ ಮತ್ತು ಧನಪ್ರಾಪ್ತಿಗಾಗಿ ಕೆಂಪು ಕಮಲದ ಹೂವಿನಿಂದ ಗಾಯತ್ರಿ ಹವನ ಮಾಡಬೇಕು. ಇಲ್ಲವೇ ಬಿಲ್ವಪತ್ರೆಯಿಂದ ಹೂವಿನಿಂದ ಅಥವಾ ಫಲದಿಂದ ಹವನ ಮಾಡಿದರೆ ಸೌಂದರ್ಯ ವೃದ್ಧಿಯಾಗುತ್ತದೆ.
ಮಂಗಳ, ಲಾಭ, ವಿಜಯಪ್ರಾಪ್ತಿ, ಲಕ್ಷ್ಯಸಿದ್ಧಿ ಮತ್ತು ಆಂಜನೇಯನನ್ನು ಪ್ರಸನ್ನಗೊಳಿಸುವುದಕ್ಕಾಗಿ ಮಂಗಳವಾರ ಇಲ್ಲವೇ ಶನಿವಾರ ಸುಂದರಕಾಂಡದಿಂದ ಹವನ ಮಾಡುವುದು ಉಪಯೋಗಿಯಾಗಿದೆ. ಈ ಹವನವನ್ನು ಬಿಲ್ವವೃಕ್ಷದ ಕೆಳಗಡೆ, ಆಂಜನೇಯನ ದೇವಸ್ಥಾನ, ನದಿಯ ದಂಡೆಗಳಲ್ಲಿ ಮಾಡುವುದು ಇನ್ನೂ ಉತ್ತಮವಾಗಿದೆ. <

-ಎಂ.ಬಿ. ನಾಯಕ ಮೈಸೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com