ಪಂಚಭೂತ ತತ್ವಗಳು ಸೂರ್ಯನಿಂದ ಸೃಷ್ಟಿಯಾದವು. ಇವು ಮಾನವನ ಶರೀರದ ಮೇಲೆ ಪೂರ್ಣ ಪ್ರಭಾವ ಹೊಂದಿವೆ.
ಅಗ್ನಿ ತತ್ವ
ಇದು ಮನುಷ್ಯನ ದೇಹದಲ್ಲಿ ಶಾಖವನ್ನು ಪ್ರತಿನಿಧಿಸುತ್ತದೆ. ರವಿ, ಕುಜ ಮತ್ತು ಕೇತುಗ್ರಹಗಳು ಅಗ್ನಿತತ್ವದ ಅಧಿಪತ್ಯ ಹೊಂದಿರುತ್ತಾರೆ.
ಪೃಥ್ವಿ ತತ್ವ
ಇದು ಮನುಷ್ಯ ದೇಹದಲ್ಲಿ ಘನ ಪದಾರ್ಥ ಮತ್ತು ಚಲನೆಯನ್ನು ಪ್ರತಿನಿಧಿಸುತ್ತದೆ. ಬುಧ ಗ್ರಹ ಈ ತತ್ವದ ಅಧಿಪತ್ಯ ಹೊಂದಿರುತ್ತದೆ.
ವಾಯು ತತ್ವ
ಇದು ಮನುಷ್ಯನ ದೇಹದ ಉಸಿರಾಟದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ (ಉಚ್ವಾಸ ಮತ್ತು ನಿಶ್ವಾಸ). ಶನಿ ಮತ್ತು ರಾಹು ಗ್ರಹಗಳು ಈ ತತ್ವದ ಅಧಿಪತ್ಯ ಹೊಂದಿರುತ್ತಾರೆ.
ಜಲ ತತ್ವ
ಇದು ಮನುಷ್ಯನ ದೇಹದಲ್ಲಿನ ರಕ್ತ ಸಂಚಾರದ ಪೂರ್ಣ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಚಂದ್ರ ಮತ್ತು ಶುಕ್ರ ಗ್ರಹರು ಈ ತತ್ವದ ಅಧಿಪತ್ಯ ಹೊಂದಿರುತ್ತಾರೆ.
ಆಕಾಶ ತತ್ವ
ಇದು ಶಬ್ದ, ಘರ್ಷಣೆ, ಮಳೆ ಗಾಳಿಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಗುರುಗ್ರಹ ಈ ತತ್ವದ ಅಧಿಪತ್ಯ ಹೊಂದಿದೆ.