ರುದ್ರ ನೇತ್ರ

ರುದ್ರ ನೇತ್ರ
Updated on: 

ರುದ್ರಾಕ್ಷಿ ಸಸ್ಯದ ಒಂದು ಪ್ರಭೇದವಾದರೂ, ಅದು ಶಿವನ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ರಾಶಿಗಳ ಆಧಾರದಲ್ಲಿ ರುದ್ರಾಕ್ಷಿ ಧಾರಣಫಲ ವಿಶೇಷ ಫಲವನ್ನೇ ಕೊಡುತ್ತದೆ. ನಕ್ಷತ್ರಗಳ ಆಧಾರದಂತೆ ರುದ್ರಾಕ್ಷಿ ಧಾರಣಾ ಫಲವನ್ನು ಆಯಾ ನಕ್ಷಗಳ ದೆಶೆಗಳ ಆಧಾರದಲ್ಲಿ ಕೊಡಲಾಗಿದೆ.

ಒಟ್ಟು ನಕ್ಷತ್ರಗಳು 27. ಆದರೆ ಕೆಲವು ವಿದ್ವಾಂಸರ ಅನಿಸಿಕೆಯಂತೆ ಅಭಿಜಿನ್ ಎಂಬ ಇನ್ನೊಂದು ನಕ್ಷತ್ರವೂ ಉಂಟು  ಎನ್ನುವರು. ಹಾಗಾಗಿ 28 ನಕ್ಷತ್ರಗಳಿವೆ ಎಂದು ಹೇಳುವವರೂ ಇದ್ದಾರೆ.

ಆರಿದ್ರಾ, ಚಿತ್ತಾ ಮತ್ತು ಸ್ವಾತಿ ನಕ್ಷತ್ರಗಳೆಲ್ಲಾ ಏಕೈಕ ನಕ್ಷತ್ರ ಆಗಿದ್ದು, ಉಳಿದ ಎಲ್ಲಾ ನಕ್ಷತ್ರ 2, 3, 5, 6, 20, 100 ನಕ್ಷತ್ರಗಳ ಪುಂಜವಾಗಿದೆ. ಹಾಗಾಗಿ ನಕ್ಷತ್ರಗಳ ಫಲ ಹೇಳುವುದಕ್ಕಿಂತ ನಕ್ಷತ್ರ ಪುಂಜ ಫಲ ಎಂದು ಹೆಸರಿಸುವುದೇ ಸೂಕ್ತ ಆಗಿದೆ.
ಏಕೈಕ ನಕ್ಷತ್ರ ಆಗಿದ್ದರೆ, ಆ ನಕ್ಷತ್ರದಲ್ಲಿ ಜನಿಸಿದವರು ಏಕಮುಖ ರುದ್ರಾಕ್ಷಿ ಧರಿಸುವುದೇ ಒಳ್ಳೆಯದು. ಆ ನಕ್ಷತ್ರಗಳು ಯಾವುವು ? ಎಂದು ತಿಳಿದುಕೊಳ್ಳೋಣ.

ಆರಿದ್ರ ನಕ್ಷತ್ರ
ರುದ್ರನ ಕಣ್ಣಿನಂತೆ ಕೆಂಪು ಬಣ್ಣದಲ್ಲಿ ತೋರುವ ಏಕೈಕ ನಕ್ಷತ್ರವೇ ಆರಿದ್ರ. ರುದ್ರ ದೇವರ ಕಣ್ಣಿನಂತೆ ತೋರುವುದು ಅಲ್ಲದೆ ಈ ನಕ್ಷತ್ರಕ್ಕೆ ದೇವತೆ ಸಹ ರುದ್ರ ದೇವರೇ ಆಗಿದ್ದಾರೆ. ಹಾಗಾಗಿ ಆರಿದ್ರ ಎಂಬ ಹೆಸರು ಬಂತು. ನಕ್ಷತ್ರ ಗೊತ್ತಿಲ್ಲದಿದ್ದರೆ ಯಾರ ಹೆಸರಿನ ಮೊದಲ ಅಕ್ಷರ ಕು, ಘ ಮತ್ತು ಛ ಗಳಿಂದ ಆರಂಭ ಆದರೆ ಆ ನಕ್ಷತ್ರಕ್ಕೆ ಸೇರುವರು. ಇದನ್ನು ಸೋಮವಾರ ದಿನ ಬೆಳಗ್ಗೆ ಧರಿಸಬೇಕು.
ಈ ನಕ್ಷತ್ರದ ಮಕ್ಕಳು ವಿಧ್ಯಾಭ್ಯಾಸದಲ್ಲಿ ಪ್ರಭಾವಿತರಾಗಬೇಕಾದರೆ ಭಕ್ತಾಮರದ 6ನೇ ಶ್ಲೋಕವನ್ನು ಹೇಳಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು.

ಚಿತ್ರಾ ನಕ್ಷತ್ರ
ಮುತ್ತಿನ ಆಕಾರದಲ್ಲಿರುವ ಏಕೈಕ ನಕ್ಷತ್ರ ಇದಾಗಿದೆ. ನಕ್ಷತ್ರ ಗೊತ್ತಿಲ್ಲದಿದ್ದರೆ ಯಾರ ಹೆಸರಿನ ಮೊದಲ ಅಕ್ಷರ ಪೆ, ಪೊ, ರ ಮತ್ತು ರಿ ಗಳಿಂದ ಆರಂಭ ಆದರೆ ಈ ನಕ್ಷತ್ರಕ್ಕೆ ಸೇರುವರು. ಏಕಮುಖ ರುದ್ರಾಕ್ಷಿ ಧಾರಣೆ ಸಮಯದಲ್ಲಿ ಸಹ ಮೊದಲು ಹೇಳಿ ಧರಿಸತಕ್ಕದ್ದು. ಚಿತ್ರಾ ನಕ್ಷತ್ರ ಬುಧವಾರ ಅಥವಾ ಶುಕ್ರವಾರ ಇದ್ದ ದಿನ ಗೋಧೂಳಿ ಮುಹೂರ್ತದಲ್ಲಿ ಕೆಲವು ಮಂತ್ರಗಳನ್ನು ಹೇಳಿ ಏಕಮುಖ ರುದ್ರಾಕ್ಷಿ ಧರಿಸಬೇಕು.

ಸ್ವಾತಿ ನಕ್ಷತ್ರ
ಮಾಣಿಕ್ಯದ ಹರಳಿನಂತೆ ಕಾಣುವ ನಕ್ಷತ್ರ ಇದಾಗಿದೆ. ನಕ್ಷತ್ರ ಗೊತ್ತಿಲ್ಲದಿದ್ದರೆ ಯಾರ ಹೆಸರಿನ ಮೊದಲಿನ ಅಕ್ಷರ ರು, ರೆ, ರೊ, ತ ಗಳಿಂದ ಆರಂಭ ಆದರೆ ಈ ನಕ್ಷತ್ರಕ್ಕೆ ಸೇರುವರು. ಜೈನರಾದರೆ ಭಕ್ತಾಮರದ 15ನೇ ಶ್ಲೋಕವನ್ನು 15 ಸಲ ಹೇಳುವುದರ ಮೂಲಕ ಏಕಮುಖ ರುದ್ರಾಕ್ಷಿ  ಧರಿಸತಕ್ಕದ್ದು.

ಈ ರುದ್ರಾಕ್ಷಿ ಸಿಗುವುದು ಅಪರೂಪ, ಇದರಲ್ಲಿ ಅತ್ಯಂತ ಗಾಢವಾದ ಒಂದೇ ರೇಖೆ ಇರುತ್ತದೆ. ಒಂದು ವರ್ಷದಲ್ಲಿ ಈ ಗಿಡ 4 ಫಲ ಮಾತ್ರ  ಕೊಡುವುದು. ಈ ರುದ್ರಾಕ್ಷಿಯ ಬೆಲೆ ವಜ್ರ ರತ್ನಕ್ಕೆ ಸಮನಾಗಿದೆ. ಮಾಹಿತಿಗೆ 9945350586 ಸಂಪರ್ಕಿಸಿ.

ಸಂಗಾತಿಗೆ ನಿಷ್ಠರಾಗಿರಿ
ರುದ್ರಾಕ್ಷಿ ಧರಿಸುವವರು ಶುದ್ಧ ಸಸ್ಯಹಾರಿಗಳಾಗಿರಬೇಕು. ಮದ್ಯಪಾನ ಮಾಡಬಾರದು. ಆದಷ್ಟು ಬೆಳ್ಳುಳ್ಳಿ, ಈರುಳ್ಳಿಗಳನ್ನು ದೂರ ಮಾಡಿದರೆ ಉತ್ತಮ, ಬ್ರಹ್ಮಚರ್ಯ ಪಾಲನೆ ಮಾಡಬೇಕು. ಎಂದರೆ ವಿವಾಹ ಆಗಬಾರದು ಎಂದರ್ಥ ಅಲ್ಲ. ತನ್ನ ಪತ್ನಿ ಬಿಟ್ಟು ಉಳಿದ ಹಿರಿಯ ಸ್ತ್ರೀಯರಾಗಿದ್ದರೆ ಅಕ್ಕ, ತಾಯಿಯ ಸ್ಥಾನವನ್ನು ಕೊಟ್ಟು ಗೌರವಿಸಬೇಕು. ಕಿರಿಯವರಾಗಿದ್ದರೆ ತಂಗಿ, ಸ್ಥಾನ ನೀಡತಕ್ಕದ್ದು. ಅನ್ಯಥಾ ಯಾವುದೇ ಹಿಂಸಾ ಕಾರ್ಯಗಳಲ್ಲಿ ಭಾಗವಹಿಸಬಾರದು. ಇಷ್ಟೆಲ್ಲಾ ಮಾಡಿದರೆ ಎಲ್ಲಾ ಪ್ರಕಾರದ ಧನ, ಕನಕ, ಐಶ್ವರ್ಯ, ಪ್ರಾಪ್ತಿ ಆಗುವುದಲ್ಲದೆ ಅನಂತ ಸುಖ, ಸಖ್ಯ, ಸೌಭಾಗ್ಯಗಳಿಂದ ಕೂಡಿರುವಿರಿ. ಎಲ್ಲಾ ವರ್ಗದ ಜನರಿಂದ ಗೌರವವನ್ನು ಪಡೆಯುವಿರಿ.

ಏಕಮುಖ ರುದ್ರಾಕ್ಷಿ ಧರಿಸುವಾಗ ಸಂಬಂಧಿಸಿದ ಮಂತ್ರವನ್ನು ಪುರೋಹಿತರಿಂದ ಕಲಿತು ಸೋಮವಾರ ದಿನ 5 ಸಲ ಹೇಳಿ ಏಕಮುಖ ರುದ್ರಾಕ್ಷಿಯನ್ನು ಧರಿಸತಕ್ಕದ್ದು.

- ಎಂ. ರತ್ನರಾಜ ಜೈನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com