ಗ್ರಹಗಳಿಗೂ, ಮಾನವನ ಅಂಗಾಂಗಗಳಿಗೂ ವಿಶೇಷವಾದ ಸಂಬಂಧವಿದೆ. ಹೀಗಾಗಿಯೇ ಪ್ರತಿಯೊಂದು ಗ್ರಹವೂ ಜೀವಿಯ ಒಂದೊಂದು ಅಂಗಾಂಗದ ಅಧಿಪತ್ಯವನ್ನು ಹೊಂದಿವೆ. ರವಿಯು ಪಿತ್ತಕೋಶ, ಹೃದಯ, ಮೆದುಳು, ಶಿರ, ಕರ್ಣ, ಅಸ್ತಿ. ಚಂದ್ರನು ಎದೆ, ಜೊಲ್ಲು, ಗರ್ಭ, ಜಲ, ರಕ್ತ ಮತ್ತು ಕೀವು ಗ್ರಂಥಿ ರಚನೆ. ಕುಜನು ಪಿತ್ತಕೋಶ, ಕಿವಿ, ಮೂಗು, ಹಣೆ, ಮಾಂಸಖಂಡಗಳು, ಬುಧನು ಕಿಬ್ಬೊಟ್ಟೆ, ನಾಲಿಗೆ, ಶ್ವಾಸಕೋಶ, ಮಲದ್ವಾರ, ನರಕೇಂದ್ರ, ಪಿತ್ತಕೋಶ ಮತ್ತು ಮಾಂಸಖಂಡ ಇಂವುಗಳ ಮೇಲೆ ಪ್ರಭಾವ ಬೀರುತ್ತಾನೆ. ಗುರು ಕಫ, ರಕ್ತ, ತೊಡೆ, ಶುಕ್ರನು ಮೂತ್ರಪಿಂಡ, ವೀರ್ಯ, ಯೋನಿ, ಕಣ್ಣು, ಶನಿ ಪಾದದ ಮೇಲೆ ಅಧಿಪತ್ಯ ಹೊಂದಿದ್ದಾರೆ.