ಕುಜ ಕುಜ ಕುಜವೆಂದು...

ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯದು, ಕೆಟ್ಟದ್ದು ಆಗುವುದಕ್ಕೆ ಗ್ರಹಗತಿಯೇ ಕಾರಣ. ಗ್ರಹಗತಿಯಿಂದ ಮನುಷ್ಯನ ಜೀವನದಲ್ಲಾಗುವ ....
Updated on: 

ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯದು, ಕೆಟ್ಟದ್ದು ಆಗುವುದಕ್ಕೆ ಗ್ರಹಗತಿಯೇ ಕಾರಣ. ಗ್ರಹಗತಿಯಿಂದ ಮನುಷ್ಯನ ಜೀವನದಲ್ಲಾಗುವ ತೊಂದರೆಯನ್ನು ಯಾರಿಂದಲೂ ತಡೆಯಲಾಗದು. ಗ್ರಹಗತಿ ಅನುಕೂಲ ಇದ್ದ ಜಾತಕ ಬಹು ಮಹಡಿಯ ಮೇಲಿನಿಂದ ಬಿದ್ದರೂ ಯಾವುದೇ ಗಾಯವಿಲ್ಲದೇ ಬದುಕಿರುವುದನ್ನು ಕಂಡಿದ್ದೇವೆ. ಗ್ರಹಗತಿ ಅನುಕೂಲ ಇದ್ದವನು ಶ್ರೀಮಂತನಾಗುತ್ತಾನೆ. ಹೀಗೆ ಮಾನವನ ಮೇಲೆ ವಿಶೇಷ ಪ್ರಭಾವ ಬೀರುವ ಗ್ರಹಗಳಲ್ಲಿ ಕುಜನೂ ಒಬ್ಬ.
ಕುಜ ಗ್ರಹ ಬೆಂಕಿಗೆ ಸಮಾನವಾದ ಗ್ರಹ. ಕುಜ ಉಷ್ಣಕ್ಕೆ ಕಾರಣವಾದ ಗ್ರಹ. ಉಷ್ಣದಿಂದ ಉಂಟಾಗುವ ಫಲಗಳು ಮತ್ತು ಮನೋಭಾವಗಳಿಗೆ ಕಾರಕನಾಗಿರುತ್ತಾನೆ. ಹಸಿವಿಗೆ ಕುಜನೇ ಕಾರಣ. ಕುಜನೇ ದೇಹದಲ್ಲಿ ಆಹಾರವನ್ನು ಕರಗಿಸುವುದು. ಇನ್ನೊಬ್ಬರ ಮೇಲೆ ಜಗಳ ಮಾಡುವುದಕ್ಕೂ ಈ ಕುಜ ಅಥವಾ ಅಂಗಾರಕನೇ ಕಾರಣ.
ಯುದ್ಧದಲ್ಲಿ ಉಪಯೋಗಿಸುವ ಸಾಮಗ್ರಿಗಳಿಗೂ ಅಂಗಾರಕನೇ ಕಾರಣ. ವಾದವಿವಾದಗಳಿಗೆ ಕಾರಣೀಕರ್ತನೂ ಕೂಡಾ ಈ ಮಂಗಳನೇ. ಕುಜನ ದಯೆ ಜಾತಕನಿಗೆ ಇಲ್ಲದಿದ್ದರೆ, ಇವರು ಕೆಟ್ಟ ಫಲ ಅನುಭವಿಸುತ್ತಾರೆ. ದ್ವೇಷ, ಜಯ, ಅಪಜಯ, ಪೀಡೆ, ಇವೆಲ್ಲಕ್ಕೂ ಕುಜನೇ ಕಾರಣ. ಕುಜನು ವೀರ್ಯಕಾರಕ. ದೇಹದ ರಕ್ತ ಮಾಂಸಗಳಿಗೆ ಕುಜನೇ ಕಾರಕ. ದೇಹವನ್ನು ಬೆಳೆಸುವುದೂ ಕುಜನೇ. ದೇಹ ಬೆಳೆಸಿ ಜಟ್ಟಿಯಾಗುತ್ತಾರೆ. ಇವರು ತನ್ನ ಬಲದಿಂದ ಇತರರನ್ನು ಪೀಡಿಸುವುದು. ಇದಕ್ಕೆ ಕಾರಣವಾದ ಗ್ರಹ ಕುಜ. ದುಷ್ಟರು ಸಜ್ಜನರನ್ನು ಪೀಡಿಸುತ್ತಾರೆ. ರಾಜನು ಶಿಕ್ಷೆ ಕೊಡುವುದು, ಇದಕ್ಕೆಲ್ಲಾ ಈತನೇ ಹೊಣೆ.
ಸಪ್ತಮ ಭಾವದಲ್ಲಿ ಶುಕ್ರ, ಕುಜ ಮತ್ತು ಚಂದ್ರರು ಇದ್ದರೆ ಜಾತಕಳು ತನ್ನ ಪತ್ನಿಯ ಆಜ್ಞೆಯಿಂದ ಪರ ಪುರುಷರಲ್ಲಿ ಆಸಕ್ತಿ ಹೊಂದುತ್ತಾಳೆ. ಶನಿ ಚಂದ್ರನೊಂದಿಗೆ ಸಪ್ತಮದಲ್ಲಿ ಇದ್ದರೆ ನವಮದಲ್ಲಿ ಶುಭ ಗ್ರಹ ಅಥವಾ ನವಮಾಧಿಪತಿ ಇದ್ದರೆ ಇವರಿಗೆ ಶುಭ ಫಲ ಪ್ರಾಪ್ತಿಯಾಗುತ್ತದೆ.  
ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಒಂದೇ ರಾಶಿಯಲ್ಲಿದ್ದರೆ ಇವರಿಗೆ ಬೇಗ ವಿವಾಹವಾಗುತ್ತಾರೆ. ಲಗ್ನದಿಂದ ದ್ವಾದಶ, ದ್ವಿತೀಯ ಸ್ಥಾನದಲ್ಲಿ ಹಾಗೂ ಸಪ್ತಮ ಭಾವದ ಪಕ್ಕ ಷಷ್ಟ ಅಥವಾ ಅಷ್ಟಮದಲ್ಲಿ ಶುಭ ಗ್ರಹಗಳು ಇದ್ದರೆ ಇಂಥವರಿಗೆ ಸಣ್ಣ ಪ್ರಾಯದಲ್ಲೇ ಮದುವೆಯಾಗುತ್ತದೆ.

- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com