ಪ್ರಾಣಾಯಾಮ ಮಾಡುವಾಗ ಹೆಬ್ಬೆರಳಿನಿಂದ ಮೂಗಿನ ಬಲಗಡೆಯ ಹೊಳ್ಳೆಯನ್ನು ಮುಚ್ಚಿ ಎಡಗಡೆಯ ಹೊಳ್ಳೆಯಿಂದ ಸಾಧ್ಯವಾದಷ್ಟು ಉಸಿರನ್ನು ಒಳಗೆ ಎಳೆದುಕೊಳ್ಳಬೇಕು. ಕೂಡಲೇ ಎಡಗಡೆಯ ಹೊಳ್ಳೆಯನ್ನು ಮುಚ್ಚಿ ಬಲಗಡೆಯ ಹೊಳ್ಳೆಯಿಂದ ಸಾಧ್ಯವಾದಷ್ಟು ಉಸಿರನ್ನು ಎಳೆದುಕೊಂಡು, ಎಡಗಡೆಯ ಹೊಳ್ಳೆಯಿಂದ ಬಿಡಬೇಕು. ಈ ಕ್ರಿಯೆಯನ್ನು ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಕಾಲದಲ್ಲಿ ಮಾಡಿದರೆ ನಾಡಿ ಶುದ್ಧಿಯಾಗುತ್ತದೆ.