ಕೋನಾರ್ಕ್ ಎಂಬ ಶಬ್ಧ ಸಂಸ್ಕೃತದ ಕೋನ(angle) ಹಾಗೂ ಅರ್ಕ(ಸೂರ್ಯ) ಎಂಬುದರಿಂದ ಬಂದಿದ್ದು, ಭಾರತ ಅತಿ ಪ್ರಾಚೀನ ಕಾಲದಲ್ಲೇ ಅತ್ಯುತ್ತಮವಾದ ವಾಸ್ತುಶಿಲ್ಪದ ಮಾದರಿಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿತ್ತು ಎಂಬುದು ಈ ದೇವಾಲಯ ಸಾಬೀತು ಪಡಿಸುತ್ತದೆ. ವಿಶೇಷವೆಂದರೆ ಇಡೀ ಕೋನಾರ್ಕ್ ದೇವಾಲಯದ ವಿನ್ಯಾಸ ಸೂರ್ಯನ ರಥದ ರೂಪದಲ್ಲಿ ರಚನೆಯಾಗಿದೆಯಂತೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಜಗತ್ತಿನ ಅತಿ ದೊಡ್ಡ, ಗಡಿಯಾರವನ್ನು ಹೋಲುವ ನೆರಳಿನ ಗಡಿಯಾರ (ಸನ್ ಡಯಲ್)!. ಹೌದು 12 ಜೊತೆ ಚಕ್ರಗಳನ್ನು ಹೊಂದಿದ್ದು, ನೆರಳಿನ ಗಡಿಯಾರ (ಸನ್ ಡಯಲ್) ಸಮಯವನ್ನು ನಿಖರವಾಗಿ ಹೇಳುತ್ತದೆ!.