ಅಬ್ಬಬ್ಬಾ ಅಬ್ಬಿ

ಅಬ್ಬಬ್ಬಾ ಅಬ್ಬಿ
Updated on: 

ಮಳೆಗಾಲ ಅದ್ಭುತದೊಂದಿಗೆ ಧುಮ್ಮಿಕ್ಕುವ ಜಲಪಾತಗಳಲ್ಲಿ ಮಡಿಕೇರಿ ಸಮೀಪದ ಅಬ್ಬೆ ಅಥವಾ ಅಬ್ಬಿ ಜಲಪಾತವೂ ಒಂದು.
ಚೇಲಾವರಾ, ಮಲ್ಲಳ್ಳಿ ಮತ್ತಿತರ ಜಲಾಧಾರೆಗಳಂತೆ ಪ್ರವಾಸಿಗರನ್ನು ಕ್ಷಣ ಕ್ಷಣವೂ ಸೆಳೆಯುವ ಈ ಜಲಪಾತ ಘಟ್ಟದ ಹಸಿರು ಕಾನನದಿಂದ ಇಳಿಜಾರು ಪ್ರದೇಶದಲ್ಲಿ, ಬಂಡೆಗಳ ಮೇಲೆ ಧುಮ್ಮಿಕ್ಕುವ ಪರಿ ಅತ್ಯದ್ಭುತ. ಸುತ್ತಲೂ ಕಾಫಿ, ಕರಿಮೆಣಸು, ಬೃಹತ್ ಮರಗಳ ಮಧ್ಯೆ ಸಾಗುವ ಹಾದಿಯೂ ಮನೋಹರ. ಜಲಪಾತವನ್ನು ಹತ್ತಿರದಿಂದ ನಿಂತು ವೀಕ್ಷಿಸಲು ಸೂಕ್ತ ವ್ಯವಸ್ಥೆಯೂ ಇದೆ.
ಕೆಲವೊಮ್ಮೆ ಜಲಪಾತದಿಂದೇಳುವ ಮಂಜಿನ ಮುಸುಕು ಸುತ್ತಲೂ ಆವರಿಸಿದಾಗ ಜಲಪಾತದ ಸೌಂದರ್ಯ ಇಮ್ಮಡಿಸಿರುತ್ತದೆ. ಈ ಮಧ್ಯ ಆಗಾಗ ಎಳೆಬಿಸಿಲಿನ ಬೆಳಕಿನಾಟ ಫೋಟೋಗಳನ್ನು ಪದೇ ಪದೇ ಕ್ಲಿಕ್ಕಿಸಬೇಕೆನಿಸುವಂತೆ ಮಾಡುತ್ತದೆ. 

ಹೀಗೆ ಬನ್ನಿ...
ಅಬ್ಬಿ ಫಾಲ್ಸ್ ಮಡಿಕೇರಿಯಿಂದ ಕೇವಲ 8 ಕಿ.ಮೀ. ಮತ್ತು ಬೆಂಗಳೂರಿನಿಂದ 268 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡುವವರು ತಪ್ಪದೇ ಮಾಂದಲಪಟ್ಟಿಯ ಹಸಿರು ಸಿರಿಯನ್ನು ಕಣ್ದುಂಬಿಕೊಳ್ಳಲೇಬೇಕು. ಮಾಂದಲಪಟ್ಟಿಗೆ ತೆರಳಲು ಖಾಸಗಿ ಜೀಪ್ ವ್ಯವಸ್ಥೆಯೇ ಸೂಕ್ತ. ಸ್ವಂತ ವಾಹನವಿದ್ದರೂ ಓಕೆ. ಮಡಿಕೇರಿಗೆ ತಲುಪಲು ಹತ್ತಿರದ ಏರ್‌ಪೋರ್ಟ್ (90 ಕಿ.ಮೀ.) ಮಂಗಳೂರು ವಿಮಾನ ನಿಲ್ದಾಣ.

-ಶಿವಮೊಗ್ಗ ಗಿರಿಧರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com