

ಇದು ಅಂತಿಂಥ ಕಾರಲ್ಲ. ರೇಡಿಯೋ ನಿಯಂತ್ರಿತ ಕಾರು. ಇದನ್ನು ಅಕ್ಕರೆಯಿಂದ ಆರ್‌ಸಿ ಬುಲೆಟ್ ಎಂದು ಕರೆಯಲಾಗುತ್ತದೆ.
60 ಸೆ.ಮೀ.ಉದ್ದವಿರುವ ಈ ಆಟಿಕೆ ಕಾರು ಈಗಾಗಲೇ ಗಿನ್ನಿಸ್ ಪುಟದಲ್ಲಿ ದಾಖಲಾಗಿದೆ.
ಜಗತ್ತಿನ ಅತ್ಯಂತ ವೇಗದ ಬ್ಯಾಟರಿ ಚಾಲಿತ ರಿಮೋಟ್ ನಿಯಂತ್ರಿತ ಈ ಕಾರು ಗಂಟೆಗೆ 325.12 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ನಿಕ್ ಕೇಸ್ ಎಂಬವರು ಇದರ ರುವಾರಿ.
ಗಮನಾರ್ಹವೆಂದರೆ ವಿಶ್ವದ ಅತ್ಯಂತ ವೇಗದ ಕಾರುಗಳನ್ನು ಇದು ಮೀರಿಸಿದೆ. ದಾಖಲೆ ಬರೆಯುವುದನ್ನೇ ಹವ್ಯಾಸ ಮಾಡಿಕೊಂಡಿರುವ ನಿಕ್ ಗಂಟೆಗೆ 325.12 ಕಿ.ಮೀ. ವೇಗ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ವಾಹನ ಜಗತ್ತಿನ ದಾಖಲೆ ಮುರಿಯುವುದೇ ಒಂದು ಹವ್ಯಾಸವಾಗಿಬಿಟ್ಟಿದೆ.