

ಬೆಂಗಳೂರು: ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ತಯಾರಿಕೆಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜೆ. ಪಿ. ನಗರದಿಂದ ಹೆಬ್ಬಾಳದವರೆಗೂ ಸುಮಾರು 105. 55 ಉದ್ದದ ಮೂರನೇ ಮೆಟ್ರೋ ರೈಲು ಯೋಜನೆ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕೋಗಿಲು ಕ್ರಾಸ್ ನಿಂದ ರಾಜಾನುಕುಂಟೆಯವರೆಗಿನ ಎಲ್ಲಾ ಕಾಮಗಾರಿಯಿಂದ ಮೆಟ್ರೋ ಉದ್ದ 266 ಕಿಲೋ ಮೀಟರ್ ಗೆ ಏರಿಕೆ ಆಗಲಿದೆ ಎಂದರು.
ಜೆ. ಪಿ. ನಗರದಿಂದ ಹೆಬ್ಬಾಳದ ಮೂಲಕ ಕೆ. ಆರ್. ಪುರಂವರೆಗೂ ಮೆಟ್ರೋ ರೈಲು ವಿಸ್ತರಿಸಲಾಗುತ್ತಿದೆ. ಟೋಲ್ ಗೇಟ್ ನಿಂದ ಕಡಬಗೆರೆ, ಗೊಟ್ಟಿಗೆಹಾರದಿಂದ ಬಸವಪುರ, ಆರ್ . ಕೆ. ಹೆಗಡೆ ನಗರಿಂದ ಏರೋ ಸ್ಪೆಸ್ ವರೆಗೂ ,ಕೋಗಿಲು ಕ್ರಾಸ್ ನಿಂದ ರಾಜಾನುಕುಂಟೆ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೂ ಮತ್ತು ಇಬ್ಬಲೂರಿನಿಂದ ಕಾರ್ಮೆಲರಾಮ್ ಮಾರ್ಗ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.