ಕೇಂದ್ರ ಬಜೆಟ್ 2018: ಸಾಮಾನ್ಯ ಜನರ ನಿರೀಕ್ಷೆಗಳೇನು?

ಲೋಕಸಭೆಯಲ್ಲಿ ಮಂಡನೆಯಾದ 2017-18ನೇ ಸಾಲಿನ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಬಳಿಕ ಇದೀಗ ಕೇಂದ್ರ ಬಜೆಟ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದು, ಜನಸಾಮಾನ್ಯರಿಗೆ ಮೋದಿ ಸರ್ಕಾರ ಸಿಹಿ ಸುದ್ದಿ ನೀಡುತ್ತದೆಯೇ ಅಥವಾ ಬರೆ ಎಳೆಯುತ್ತದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಲೋಕಸಭೆಯಲ್ಲಿ ಮಂಡನೆಯಾದ 2017-18ನೇ ಸಾಲಿನ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಬಳಿಕ ಇದೀಗ ಕೇಂದ್ರ ಬಜೆಟ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದು, ಜನಸಾಮಾನ್ಯರಿಗೆ ಮೋದಿ ಸರ್ಕಾರ  ಸಿಹಿ ಸುದ್ದಿ ನೀಡುತ್ತದೆಯೇ ಅಥವಾ ಬರೆ ಎಳೆಯುತ್ತದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಈ ಹಿಂದಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಸಾಂಸ್ಥಿಕ ಮತ್ತು ಆರ್ಥಿಕ ಸುಧಾರಣೆಗಳತ್ತ ಗಮನ ಹರಿಸಿತ್ತು. ಆದರೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಇದಕ್ಕೆ ತಿಲಾಂಜಲಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಸ್ವತಃ  ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಬಜೆಟ್ ಜನಪ್ರಿಯವಾಗಿರುವುದಿಲ್ಲ.. ಬದಲಿಗೆ ಜನಸ್ನೇಹಿಯಾಗಿರುತ್ತದೆ ಎಂದು ಹೇಳುವ ಮೂಲಕ ಮತ್ತಷ್ಟು ಆದಾಯ ಮೂಲ ಹೆಚ್ಚಳದ ಕುರಿತು ಪರೋಕ್ಷ ಮಾಹಿತಿ ನೀಡಿದ್ದಾರೆ.
ತಜ್ಞರು ಅಭಿಪ್ರಾಯಪಟ್ಟಿರುವಂತೆ ಪ್ರಸ್ತುತ ಭಾರತ ದೇಶದಲ್ಲಿ ಔಪಚಾರಿಕ ಉದ್ಯೋಗ ವಲಯಗಳಿಗಿಂತ ಅನೌಪಚಾರಿಕ  ಉದ್ಯೋಗವಲಗಳೇ ಹೆಚ್ಚಾಗಿದ್ದು, ಕಳಪೆ ಉತ್ಪಾದಕತೆ, ತೀರ ಕಡಿಮೆ ಸಂಬಳ, ಅಭದ್ರತೆ ಅನೌಪಚಾರಿಕ  ವಲಯದಲ್ಲಿರುವ ಕಾರ್ಮಿಕರನ್ನು ಕಾಡುತ್ತಿವೆ. ಹೀಗಾಗಿ ಸೂಕ್ತ ಉದ್ಯೋಗ ನೀತಿ ರಚಿಸುವ ಮೂಲಕ ಮೋದಿ ಸರ್ಕಾರ ವೇತನ ಸಹಿತ ಉದ್ಯೋಗಸ್ಥರ ನೆರವಿಗೆ ಧಾವಿಸಬೇಕು. ವೇತನ ಪ್ರಮಾಣ, ಮನೆ ಬಾಡಿಗೆ ಮತ್ತು ವೈದ್ಯಕೀಯ  ವೆಚ್ಚಗಳ ಮೇಲಿನ ಕಡಿತ ಹಳೆಯದ್ದಾಗಿದ್ದು ನೈಜ ಮಾರುಕಟ್ಟೆಗೆ ಅಪ್ರಸ್ತುತವಾಗಿದೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕ್ಲಿಯರ್ ಟ್ಯಾಕ್ಸ್ ಡಾಟ್ ಇನ್ ( ClearTax.in)ಸಂಸ್ಥೆಯ ಸಿಇಒ ಅರ್ಚಿತ್ ಗುಪ್ತಾ ಅವರು, ವೇತನ ಸಹಿತ ಉದ್ಯೋಗಸ್ಥರಿಗೆ ನೀಡಲಾಗುತ್ತಿರುವ ಕೌಟುಂಬಿಕ ನಿರ್ವಹಣಾ ವೆಚ್ಚಗಳು ತೀರಾ  ಕಡಿಮೆಯಾಗಿದೆ. ಈ ವೆಚ್ಚವನ್ನು ಕನಿಷ್ಠ 30 ಸಾವಿರ ರು.ಗಳಿಗೆ ಏರಿಕೆ ಮಾಡಬೇಕಿದ್ದು, ಇದರಿಂದ ಉದ್ಯೋಗಸ್ಥರು ತಮ್ಮ ಔದ್ಯೋಗಿಕ ಕ್ಷೇತ್ರದಲ್ಲಿ ಅಪ್ ಡೇಟ್ ಆಗಲು ನೆರವಾಗುತ್ತದೆ. ಅಂತೆಯೇ ವೇತನ ಡಿಜಿಟಲೀಕರಣ ಕೂಡ  ಸರ್ಕಾರದ ಕನಸಿನ ಯೋಜನೆ ನಗದು ರಹಿತ ಮತ್ತು ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುತ್ತದೆ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಮತ್ತು ಡಿಜಿಟಲ್ ವಹಿವಾಟುಗಳು ಮೇಲಿನ ತೆರಿಗೆ ಮತ್ತು ಶುಲ್ಕ  ಪ್ರಮಾಣದ ಇಳಿಕೆ ಮೂಲಕ ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟನ್ನು ಉತ್ತೇಜಿಸಬೇಕು. ಇದರಿಂದ ಸರ್ಕಾರ ಮತ್ತು ಜನಸಾಮಾನ್ಯರಿಗೆ ಇಬ್ಬರಿಗೂ ಲಾಭವಿದೆ ಎಂದು ಭಾರತದ ಮಾನವಸಂಪನ್ಮೂಲ ತೆರಿಗೆ ಸಂಶೋಧನಾ  ಕೇಂದ್ರದ ಮುಖ್ಯಸ್ಥ ಚೇತನ್ ಚಂದಕ್ ಹೇಳಿದ್ದಾರೆ.
ಇನ್ನು ತಜ್ಞರ ಅಭಿಪ್ರಾಯದಂತೆ ಕೇಂದ್ರ ನಡೆದಿದ್ದೇ ಆದರೆ ಆಗ ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದ್ದು, ಆಗ ಮತ್ತೆ ಕೇಂದ್ರ ಕೇಂದ್ರ ಸರ್ಕಾರ ಹೊಸ ಆದಾಯದ ಮೂಲಗಳ ಶೋಧಕ್ಕೆ ಮುಂದಾಗಬೇಕಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com