

ದೆಹಲಿ:2022ರೊಳಗೆ ದೇಶದೊಳಗಿನ ಪ್ರತಿಯೊಬ್ಬರಿಗೂ ಸೂರು ಒದಗಿಸುವುದು ಕೇಂದ್ರಸರ್ಕಾರದ ಗುರಿಯಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 33 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಸಹಾಯಧನವನ್ನು ಹೆಚ್ಚಿಸಲಾಗಿದೆ 2022ರೊಳಗೆ ನಗರ ಪ್ರದೇಶದೊಳಗಿರುವ 20 ಮಿಲಿಯನ್ ಬಡವರಿಗೆ ಮನೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು
ನಗರ ಪ್ರದೇಶದಲ್ಲಿನ ಬಡವರಿಗೆ ಮನೆ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಜಾರಿ ತರಲಾಗಿದ್ದು, ನಾಲ್ಕು ಹಂತಗಳ ಮೂಲಕ ನಗರ ಪ್ರದೇಶದ ಬಡವರಿಗೆ ಮನೆ ಕಟ್ಟಲು ನೆರವು ನೀಡಲಾಗುತ್ತಿದೆ.