ಕೇಂದ್ರ ಬಜೆಟ್ 2018: ವೈಯಕ್ತಿಕ ತೆರಿಗೆ ಬದಲಾವಣೆ ಇಲ್ಲ, ಕೃಷಿ ಉತ್ಪನ್ನ ಕಂಪನಿಗಳಿಗೆ ಶೇ.100ರಷ್ಚು ತೆರಿಗೆ ವಿನಾಯಿತಿ

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದಿರಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ವೈಯಕ್ತಿಕ ತೆರಿಗೆ ವಿಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದಿರಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ.
ಅದರಂತೆ ಕಳೆದ ವರ್ಷ ಘೋಷಣೆ ಮಾಡಲಾಗಿದ್ದ ತೆರಿಗೆ ಪ್ರಮಾಣವನ್ನೇ ಮುಂದುವರೆಸಲಾಗಿದ್ದು, 2.5ಲಕ್ಷ ವರಿಗಿನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ವಿಧಿಸದಿರಲು ನಿರ್ಧರಿಸಲಾಗಿದೆ. ಕಳೆದ 3 ವರ್ಷಗಳಲ್ಲಿ ವೈಯಕ್ತಿಕ  ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದರಿಂದ ಈ ವರ್ಷ ಯಾವುದೇ ತಿದ್ದುಪಡಿ ಇರುವುದಿಲ್ಲ. ಅಂತೆಯೇ 2.5ರಿಂದ 5 ಲಕ್ಷ ವರಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ, 5 ಲಕ್ಷದಿಂದ 10 ಲಕ್ಷ ವರೆಗೆ ಶೇ.20ರಷ್ಟು ಮತ್ತು 10 ಲಕ್ಷ  ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಮುಂದುವರೆದಿದೆ. ಇದಲ್ಲದೆ 40 ಸಾವಿರ ರೂವರೆಗಿನ ಸ್ಟ್ಯಾಂಡರ್ಡ್ ಡಿಡಕ್ಷನ್ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ ಎಂದು ಜೇಟ್ಲಿ ತಿಳಿಸಿದರು.
ಉಳಿದಂತೆ ಜೇಟ್ಲಿ ಘೋಷಣೆ ಮಾಡಿರುವ ಪ್ರಮುಖಾಂಶಗಳು ಇಲ್ಲಿವೆ.
1. 250 ಕೋಟಿ ರುಪಾಯಿಗೂ ಹೆಚ್ಚು ವಾರ್ಷಿಕ ಆದಾಯವಿರುವ ಕಂಪನಿಗಳಿಗೆ ಶೇ.25ರಷ್ಟು ಕಾರ್ಪೊರೇಟ್ ತೆರಿಗೆ ವಿಧಿಸಲಾಗುವುದು.
2. ಪ್ರಾಮಾಣಿಕ ತೆರಿಗೆದಾರರು ಅಪನಗದೀಕರಣವನ್ನು 'ಪ್ರಾಮಾಣಿಕತೆಯ ಉತ್ಸವ'ವನ್ನಾಗಿ ಮಾಡಿದ್ದಾರೆ.
3. 2014-15ರಲ್ಲಿ 6.47 ಕೋಟಿ ಇದ್ದ ತೆರಿಗೆದಾರರ ಸಂಖ್ಯೆ 2016-17ರಲ್ಲಿ 8.27 ಆಗಿದೆ.
4. 100 ಕೋಟಿಗೂ ಹೆಚ್ಚು ಆದಾಯವಿರುವ ಕೃಷಿ ಉತ್ಪನ್ನ ಉತ್ಪಾದಿಸುವ ಕಂಪನಿಗಳಿಗೆ ಮೊದಲ 5 ವರ್ಷ ಶೇ.100ರಷ್ಟು ಆದಾಯ ತೆರಿಗೆ ವಿನಾಯಿತಿ.
5. ಈ ವರ್ಷ ಜಿಎಸ್ ಟಿ 12 ತಿಂಗಳ ಬದಲಿಗೆ 11 ತಿಂಗಳಿಗೇ ಪಾವತಿ.
6. 90 ಸಾವಿರ ಕೋಟಿ ಆದಾಯ ತೆರಿಗೆ ಸಂಗ್ರಹ. 85 ಲಕ್ಷ ಜನರು ಐಟಿ ಆರ್‌ ಸಲ್ಲಿಕೆ ಮಾಡಿದ್ದು, ನೇರ ತೆರಿಗೆಯಲ್ಲಿ ಶೇ 17 ರಷ್ಟು ಹೆಚ್ಚಳವಾಗಿದೆ. 
6. ವಿತ್ತೀಯ ಕೊರತೆ ಶೇಕಡಾ 3 ಕ್ಕೆ ಇಳಿಕೆಯಾಗಿದ್ದು, ತೆರಿಗೆಯೇತರ ಆದಾಯದಲ್ಲಿ ಏರಿಕೆಯಾಗಿದೆ. 
7. ಸದ್ಯ ದೇಶದ ತೆರಿಗೆದಾರರು 8 ಕೋಟಿದಾಟಿದ್ದು, ಹೊಸದಾಗಿ 5 ಕೋಟಿ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ.
8. ಕೃಷಿ ಉತ್ಪನ್ನ ಉತ್ಪಾದಿಸುವ ಕಂಪನಿಗಳಿಗೆ ಮೊದಲ 5 ವರ್ಷ ಶೇ.100 ತೆರಿಗೆ ವಿನಾಯಿತಿ.
9. ಒಂದು ಲಕ್ಷ ಮೀರಿದ ಡಿವಿಡೆಂಡ್‌ ಗೆ ಶೇ.10 ತೆರಿಗೆ. 1 ಲಕ್ಷಕ್ಕೂ ಹೆಚ್ಚು ನಗದು ವ್ಯವಹಾರಕ್ಕೆ ಅವಕಾಶವಿಲ್ಲ. ನೇರ ತೆರಿಗೆಯಲ್ಲಿ ಶೇ 17 ರಷ್ಟು ಹೆಚ್ಚಳವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com