ವಿತ್ತಲೋಕದ ಸುತ್ತಮುತ್ತ

ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆ ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ
Updated on: 

ಬೆಂಗಳೂರು: ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆ ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ (ಎಚ್ಸಿಸಿ) ಲಿಮಿಟೆಡ್ ಇತ್ತೀಚಿಗೆ ನಡೆದ ವರ್ಲ್ಡ್ ಸಿಎಸ್ಆರ್ ಕಾಂಗ್ರೆಸ್ನಲ್ಲಿ ಅತ್ಯುತ್ತಮ ಸಾಮಾಜಿಕ ಹೂಡಿಕೆ ಕಾರ್ಯತಂತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಸಿಎಸ್ಆರ್ ಅಸೋಸಿಯೇಟ್ಸ್, ಎಲ್ಲಾ ಕ್ಷೇತ್ರದಲ್ಲಿರುವ ಸಂಸ್ಥೆಗಳಿಗಾಗಿ ವೈಯಕ್ತಿಕ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು, ವರ್ಲ್ಡ್ ಸಿಎಸ್ಆರ್ ಕಾಂಗ್ರೆಸ್ನ ಗ್ಲೋಬಲ್ ಸಿಎಸ್ಆರ್ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಪೋರೇಟ್ ಅಫೇರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಗೌರವವನ್ನು ಎಚ್ಸಿಸಿ ಸಂಸ್ಥೆಗೆ ನೀರು, ವಿಕೋಪ ಪರಿಹಾರ ಕ್ರಮಗಳು, ಎಚ್ಐವಿ/ಏಡ್ಸ್, ಜಾಗೃತಿ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ದೊರೆತಿದೆ.

ಬಡ್ವೈಸರ್ ಕಪ್ ಇಂಡಿಯಾದಿಂದ ಫುಟ್ಬಾಲ್ ಆಟಗಾರರಿಗೆ ವೇದಿಕೆ
ದೇಶದ ಮಹತ್ವಾಕಾಂಕ್ಷಿ ಫುಟ್ಬಾಲ್ ಆಟಗಾರರಿಗೆ ಬಡ್ವೈಸರ್ ಕಪ್ ಇಂಡಿಯಾ 2013 ಒಂದು ಅನನ್ಯ ವೇದಿಕೆಯನ್ನು ಒದಗಿಸಿದೆ. ಅದ್ಭುತವಾದ ಫುಟ್ಬಾಲ್ ಆಟವನ್ನು ಅವರು ಪ್ರತಿ ತಂಡದಲ್ಲಿ ಆರರ ಸರಣಿಯಲ್ಲಿ ಸ್ಪರ್ಧೆಯ ಮೂಲಕ ಅನುಭವಿಸಲು ಅವಕಾಶ ನೀಡುತ್ತಿದೆ. ಪ್ರತಿ ನಗರದ ವಿಜೇತರು ಮತ್ತು ರನ್ನರ್ಗಳು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಫೈನಲ್ಸ್ನಲ್ಲಿ ಭಾಗವಹಿಸಿ, ಬಡ್ವೈಸರ್ ಕಪ್ ಇಂಡಿಯಾ 2013ದ ವಿಜೇತರನ್ನು ನಿರ್ಣಯಿಸಲಿದೆ. ವಿಜಯಿ ತಂಡವು ಲಂಡನ್ನಲ್ಲಿ ನಡೆಯುವ ಜಾಗತಿಕ ಬಡ್ವೈಸರ್  ಕಪ್ ಅಂತಿಮ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಬಡ್ವೈಸರ್ ಬ್ರ್ಯಾಂಡ್ ವ್ಯವಸ್ಥಾಪಕ ಗೋಕುಲ್ ಲುವಾಂಗ್ ಮಾತನಾಡಿ ಪ್ರಪಂಚದಾದ್ಯಂತ ಎಲ್ಲಾ ಸ್ತರಗಳಲ್ಲೂ ಫುಟ್ಬಾಲ್ ಆಟವನ್ನು ಬೆಂಬಲಿಸುವಂತಹ ದೀರ್ಘ ಇತಿಹಾಸವನ್ನು ಬಡ್ವೈಸರ್ ಹೊಂದಿದೆ ಎಂದರು. ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುವ ಕನಸನ್ನು ನನಸಾಗಿಸುವುದು. ಅವರಂತೆಯೇ ನಮಗೆ ಈ ಆಟದ ಬಗ್ಗೆ ಬಾವೋದ್ರೇಕವಿದೆ ಮತ್ತು ಲಂಡನ್ನಲ್ಲಿ ನಡೆಯುವ ಜಾಗತಿಕ ಬಡ್ವೈಸರ್ ಕಪ್ ಅಂತಿಮ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಯಾರು ಗೆಲ್ಲುತ್ತಾರೆ ಎಂದು ನೋಡುವ ಅತೀವ ಕುತೂಹಲವಿದೆ ಎಂದರು. ಹೆಚ್ಚಿನ ಮಾಹಿತಿಗೆ- www.ab-inbev.com ಗೆ ಭೇಟಿ ನೀಡಿ.

ಕೃಷಿ ಯಂತ್ರ ಡೀಬೋಲ್ಡ್429ಮಾರುಕಟ್ಟೆಗೆ
ಭಾರತದ ಡಿಬೋಲ್ಡ್ ಇನ್ಕಾರ್ಪೋರೇಟೆಡ್ ವಿಶ್ವದ ಪ್ರಥಮ ಆಟೋಮೇಟೆಡ್ ಟೆಲ್ಲರ್ ಮೆಷೀನ್ ಡಿಬೋಲ್ಡ್429 ಬಿಡುಗಡೆ ಮಾಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸದೃಢವಾದ ಸ್ವಸಹಾಯ ವ್ಯವಸ್ಥೆಯ ಯಂತ್ರದ ಅಗತ್ಯವಿದ್ದು, ಇದು ಸ್ವಯಂಚಾಲಿತ ವಿದ್ಯುತ್ ಪ್ರಸರಣ ಹೊಂದಿದ್ದು, ತಾನಾಗಿಯೇ ಮೂರು ವಿದ್ಯುತ್ ಮೂಲಗಳ ನಡುವೆ ಕಡಿಮೆ ವೆಚ್ಚದಲ್ಲಿ ಟರ್ಮಿನಲ್ ಸದಾ ಕಾರ್ಯನಿರತವಾಗಿರುವಂತೆ ನೋಡಿಕೊಳ್ಳುತ್ತದೆ. ಸೌರ ಫಲಕ ಮತ್ತು ಎಸಿ ಗ್ರಿಡ್ಗಳಂತಹ ಪರ್ಯಾಯ ವಿದ್ಯುತ್ ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಡೀಬೋಲ್ಡ್429 ಬಹಳ ದಕ್ಷವಾಗಿದೆ. ಭಾರತದಲ್ಲಿ ಬಳಕೆಯಲ್ಲಿರುವ ಇದಕ್ಕೆ ಮೊದಲ ಪೀಳಿಗೆಯ ನಗದು ಬಟವಾಡೆ ಮಾಡುವ ಯಂತ್ರಗಳಿಗಿಂತ ಶೇ.40ರಷ್ಟು ವಿದ್ಯುತ್ ಕಡಿಮೆ ಬಳಸುತ್ತದೆ. ಇದೂ ಅಲ್ಲದೆ ಸ್ವಸಹಾಯ ಟರ್ಮಿನಲ್ನಲ್ಲಿ ಒಂದು ಸಮಗ್ರೀಕೃತ  ನಾಲ್ಕು ತಾಸುಗಳ ಬ್ಯಾಟರಿ ಬ್ಯಾಕಪ್ ಇದೆ. ಈ  ಬಗ್ಗೆ ಮಾತನಾಡಿದ ಡೀಬೋಲ್ಡ್ ಏಷ್ಯಾ ಫೆಸಿಫಿಕ್ ಉಪಾಧ್ಯಕ್ಷ ವಿಕೊ ವ್ಯಾನ್ ಜೆಂಡರ್ಸನ್, ಸಿಂಗಲ್ ನೋಟ್ ಅಕ್ಸೆಪ್ಟರ್ ಅಳವಡಿಸಿರುವುದರಿಂದ ಸಣ್ಣ- ಪ್ರಮಾಣದ ಕರೆನ್ಸಿ ಜಮಾ ಮತ್ತು ಬಿಲ್ ಪಾವತಿಗಳು ಸಾಧ್ಯವಾಗುತ್ತದೆ. ಬಳಕೆದಾರರಿಗೆ ವೇಗ ಮತ್ತು ಅನುಕೂಲ. ಮಾಸ್ಟರ್ಕಾರ್ಡ್ ಮತ್ತು ವೀಸಾ ಕಾರ್ಡ್ ರೀಡರ್, ಬಯೋವುಟ್ರಿಕ್ ತಂತ್ರಜ್ಞಾನ ಮತ್ತು ದ್ವಿವಿಧ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು. ಹೆಚ್ಚಿನ ಮಾಹಿತಿಗೆ ಕಂಪನಿಯ ಜಾಲತಾಣ www.dieboldindia.com ಗೆ ಭೇಟಿ ನೀಡಿ.

ರಾಜ್ಯದಲ್ಲಿ ಪೇಲೆಸ್ ಕ್ರೆಡಿಟ್ ಕಾರ್ಡ್ ಸೌಲಭ್ಯ
ಕರ್ನಾಟಕದಲ್ಲಿ ಪೇಲೆಸ್ ಕಾರ್ಡ್ ವಿತರಣೆಗಾಗಿ ಕ್ರೆಡಿಟ್ ಸುಧಾರ್ ಮತ್ತು ಡಿಸಿಬಿ ತನ್ನ ಸಹಭಾಗಿತ್ವವನ್ನು ಹೊಂದಿದೆ. ಡಿಸಿಬಿ ಪೇಲೆಸ್ ಕಾರ್ಡ್ ಸುರಕ್ಷತಾ ಕ್ರೆಡಿಟ್ಕಾರ್ಡ್ ಆಗಿದ್ದು, ನಿಶ್ಚಿತ ಠೇವಣಿಯ ಭದ್ರತೆಯನ್ನು ಒಳಗೊಂಡಿದೆ. ಇದು ಕ್ರೆಡಿಟ್ ಕಾರ್ಡ್ ಕೊಳ್ಳಲು ಕಷ್ಟವಾಗುವವರಿಗೆ ಡಿಸಿಬಿ ಪೇಲೆಸ್ ಕಾರ್ಡ್ ಉತ್ತಮ ಆಯ್ಕೆಯಾಗಲಿದೆ. ಇದು ಹಲವು ಸೌಲಭ್ಯಗಳ ಜತೆಗೆ ಸಾಲ ಪಡೆಯುವ ಸುರಕ್ಷಿತ ವಿಧಾನ ಕೂಡ ಆಗಿದೆ.
ಕಂಪನಿಯು ವೈಯಕ್ತಿಕವಾಗಿ ಗ್ರಾಹಕರ ಸಾಲದ ಆರೋಗ್ಯವನ್ನು ಸುಧಾರಿಸುವುದಾಗಿದ್ದು, ತರಬೇತಿ ಪಡೆದ ನುರಿತ ವೃತ್ತಿಪರರು ಮತ್ತು ಪ್ರಾಮಾಣೀಕೃತ ಕೌನ್ಸೆಲರ್ಗಳನ್ನು ಒಳಗೊಂಡಿದೆ. ಡೆಬಿಟ್ ಕಾರ್ಡ್ ಕುರಿತಾಗಿ ಗ್ರಾಹಕರಿಗೆ ಸಮಗ್ರ ಚಿತ್ರಣ, ವಿಶ್ಲೇಷಣೆ ಮತ್ತು ಸೂಕ್ತ ಮಾರ್ಗೋಪಾಯಗಳನ್ನು ನೀಡುವುದು ಕ್ರೆಡಿಟ್ ಸುಧಾರ್ನ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಕ್ರೆಡಿಟ್ ಸುಧಾರ್ಗೆ ಉತ್ತಮ ಮಾರುಕಟ್ಟೆಯಾಗಿದ್ದು, ಕಂಪನಿಯು ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ. ಇದು ಚಿನ್ನ, ಪ್ಲಾಟಿನಂ ಮತ್ತು ಟೈಟಾನಿಯಂ ಸೇವೆಯನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ ಢಿಢಿಢಿ.್ಛ್ಠಜಜ್ಝಡಿಡ್ಡಝಛಛ್ಠ.್ಛ್ಟಟ ಗೆ ಭೇಟಿ ನೀಡಿ.

ಎಲೆಕ್ಟ್ರಿಕ್ ವಾಹನ 'ಮಹೀಂದ್ರಾ ಇ2ಒ' ಬಿಡುಗಡೆ
ಮಹೀಂದ್ರಾ ರೆವಾ, ಭಾರತದ ಮೊದಲ ಎಲೆಕ್ಟ್ರಿಕ್ ವಾಹನವಾಗಿದ್ದು, 15.9 ಬಿಲಿಯನ್ ಮೌಲ್ಯದ ಮಹೀಂದ್ರಾ ಸಮೂಹದ, ಸಂಪೂರ್ಣ ಎಲೆಕ್ಟ್ರಿಕ್ನ, ಶೂನ್ಯ ಹೊರ ಸೂಸುವಿಕೆಯ 'ಮಹೀಂದ್ರಾ ಇ2ಒ' ಅನ್ನು ನವದೆಹಲಿಯ ಇಂಡಿಯಾ ಗೇಟ್ ಬಳಿ ಅನಾವರಣಗೊಳಿಸಿತು. ಮಹೀಂದ್ರಾ ಇ2ಒ ಮಹೀಂದ್ರಾ 'ಫ್ಯೂಚರ್ ಆಫ್ ಮೊಬಿಲಿಟಿ' ಧ್ಯೇಯದ ಭಾಗವಾಗಿದ್ದು, ಐದು ಸಿಗಳ ಸಿದ್ಧಾಂತವನ್ನು ಆಧರಿಸಿದೆ. ಇದು, 21ನೇ ಶತಮಾನದ ಸಂಚಾರ ವ್ಯವಸ್ಥೆಯ ರೂಪುರೇಷೆಯನ್ನು ನಿರ್ಧರಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ 'ಮಹೀಂದ್ರಾ ಇ2ಒ ವಾಹನದ ಬಿಡುಗಡೆ ಮಹೀಂದ್ರಾ ಸಮೂಹದ ಇತಿಹಾಸದಲ್ಲಿ ಒಂದು ಮೈಲಿಗಲ್ಲು, ಈ ಸಮಯದಲ್ಲಿ ಪಂಡಿತ್ ಜವಹರ್ಲಾಲ್ ನೆಹರು ಅವರು ಹೇಳಿದ ಮಾತು ನೆನಪಿಗೆ ಬರುತ್ತಿದೆ. ಅಪರೂಪದ ಕ್ಷಣಗಳು ಆಕಸ್ಮಿಕವಾಗಿ ಬರುತ್ತದೆ. ಅದು, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುವ ಕ್ಷಣ, ಮಹೀಂದ್ರಾ ಇ2ಒ ನಾವು ಭಾರತೀಯ ಆಟೋಮೇಟಿವ್ ಉದ್ಯಮದಲ್ಲಿ ಹಳೆಯದರಿಂದ ಹೊಸದಕ್ಕೆ ಪಾದಾರ್ಪಣೆ ಮಾಡುವ ಕ್ಷಣವಾಗಿದೆ ಎಂದರು.' ಮಹೀಂದ್ರಾ ರೇವಾ ದೇಶದ್ಯಾಂತ ಆಯ್ದ ವಿತರಕರ ಬಳಿ ಮಾರಾಟಕ್ಕೆ ಲಭ್ಯವಿರುತ್ತದೆ. ವಾಹನದ ದರ ರು. 5.96 ಲಕ್ಷ.

ರಮೇಶ್ ಜೋಷಿ 'ಮೈ ಕಾರ್ಪೋರೇಟ್ ಯಾತ್ರ' ಪುಸ್ತಕ ಬಿಡುಗಡೆ
ಪ್ರಮುಖ ಕೈಗಾರಿಕೋದ್ಯಮಿ ಹಾಗೂ ನೈಕ್ರೋಮ್ ಇಂಡಿಯಾ ಲಿ.ನ ಸಂಸ್ಥಾಪಕ ಅಧ್ಯಕ್ಷ ರಮೇಶ್ ಜೋಷಿ ಅವರ ಜೀವನ ಪಯಣವನ್ನು ಚಿತ್ರಿಸುವ 'ಮೈ ಕಾರ್ಪೋರೇಟ್ ಯಾತ್ರ' ಇತ್ತೀಚಿಗೆ ಬಿಡುಗಡೆಗೊಂಡಿತು. ರಸ್ತೆ ಎಲ್ಲಿಯೂ ಹೋಗುವುದಿಲ್ಲ, ಆದರೆ ಅದು ನಿಮ್ಮನ್ನು ಎಲ್ಲಾ ಕಡೆಗೂ ಒಯ್ಯುತ್ತದೆ. ಅದೇ ರೀತಿ ಒಂದು ಪುಸ್ತಕ ನಿಮ್ಮನ್ನು ದೈತ್ಯ ಹೆಜ್ಜೆ ಇಡಲು ಪ್ರೇರೇಪಿಸುತ್ತದೆ ಅಂತಹ ಪುಸ್ತಕಗಳಲ್ಲಿ 'ಮೈ ಕಾರ್ಪೋರೇಟ್ ಯಾತ್ರ' ಕೂಡ ಒಂದು ಎಂದು ಡಾ.ಪಿ. ಸದಾನಂದಮಯ್ಯ ಅಭಿಪ್ರಾಯಪಟ್ಟರು. ಜೋಷಿ ಅವರು ಬರೆದಿರುವ ಹಾಗೂ ಅಮೆಯಾ ಇನ್ಸ್ಪೈರಿಂಗ್ ಬುಕ್ಸ್ ಸಹಯೋಗದೊಂದಿಗೆ ನೈಕ್ರೋಮ್ ಫೌಂಡೇಶನ್ ಪ್ರಕಟಿಸಿರುವ ಈ ಪುಸ್ತಕದ ಬಿಡುಗಡೆ ನಗರದ ಕ್ರಾಸ್ವರ್ಡ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜೋಷಿ ಈ ಪುಸ್ತಕ ಕೇವಲ ನನ್ನ ಜೀವನದ ಪಯಣದ ಕಥೆ ಮಾತ್ರವಲ್ಲ, ಬದಲಿಗೆ ನೈಕ್ರೋಮ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ತಮ್ಮ ನಿರಂತರ ಪ್ರಯತ್ನವನ್ನು ಹಾಕಿದ ಮತ್ತು ನೈಕ್ರೊಮನ್ನು ಜಾಗತಿಕ ಭೂಪಟದಲ್ಲಿ ಮುಂದಕ್ಕೆ ಒಯ್ದ ಎಲ್ಲಾ ಗೋಚರ ಹಾಗೂ ಅಗೋಚರ ವ್ಯಕ್ತಿಗಳ ಒಂದು ಪಕ್ಷಿನೋಟ ಎಂದರು. ಮೈ ಕಾರ್ಪೋರೇಟ್ ಯಾತ್ರ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಹಾಗೂ ಸಂಘಟಿತ ರೀಟೈಲ್ ಅಂಗಡಿಗಳಲ್ಲಿ 395 ಬೆಲೆಗೆ ಲಭ್ಯವಿದೆ.

ಟಾಟಾ ಬ್ಲೂಸ್ಕೋಪ್ ಸ್ಟೀಲ್ನ ಹೊಸ ಚಿಹ್ನೆ ಬಿಡುಗಡೆ
ಟಾಟಾ ಸ್ಟೀಲ್ ಮತ್ತು ಬ್ಲೂಸ್ಕೋಪ್ ಸ್ಟೀಲ್ ನಡುವಿನ ಜಂಟಿ ಸಹಯೋಗವಾದ ಟಾಟಾ ಬ್ಲೂಸ್ಕೋಪ್ ಸ್ಟೀಲ್ ತನ್ನ ಕಾಪೋರೇಟ್ ಬ್ರ್ಯಾಂಡ್ ಮತ್ತು ಲೇಪಿತ ಸ್ಟೀಲ್ ವ್ಯಾಪಾರಗಳಿಗೆ ಹೊಸ ವ್ಯಾಪಾರ ಚಿಹ್ನೆಯನ್ನು ಬಿಡುಗಡೆ ಮಾಡಿದೆ. ಹೊಸ ವ್ಯಾಪಾರ ಚಿಹ್ನೆಯ ಬಗ್ಗೆ ಮಾತನಾಡಿದ ಟಾಟಾ ಬ್ಲೂಸ್ಕೋಪ್ ಸ್ಟೀಲ್ನ ನಿರ್ವಾಹಕ ನಿರ್ದೇಶಕ ಹರೀಶ್ ಪಾಠಕ್ 'ಹೊಸ ವ್ಯಾಪಾರ ಚಿಹ್ನೆಯು ನಮ್ಮ ಲೇಪಿತ ಸ್ಟೀಲ್ ವ್ಯಾಪಾರವನ್ನು ಪ್ರತಿನಿಧಿಸುತ್ತದೆ ಮತ್ತು ಸೌಂದರ್ಯ ಪ್ರಜ್ಞೆ, ವಿಶ್ವಾಸ ಮತ್ತು ನವ್ಯತೆಗಳ ಪ್ರಮುಖ ಬ್ರ್ಯಾಂಡ್ ಲಕ್ಷಣಗಳನ್ನು ಆವರಿಸಿದೆ. ನಾವು ಗ್ರಾಹಕರಿಗೆ ಸುಂದರವಾದ ಉಕ್ಕಿನ ಪರಿಹಾರಗಳನ್ನು ಒದಗಿಸುವ ಮೂಲಕ ಉನ್ನತ ಗ್ರಾಹಕ ಮೌಲ್ಯದೊಂದಿಗೆ  ಬೆಸೆದುಕೊಂಡು ನಮ್ಮ ಗ್ರಾಹಕರು ಹಾಗೂ ಪಾಲುದಾರರೊಂದಿಗೆ ಏಕೀಭವಿಸುತ್ತದೆ. ಈ ಹೊಸ ವ್ಯಾಪಾರ ಚಿಹ್ನೆ, ಲೇಪಿತ ಸ್ಟೀಲ್ ವ್ಯಾಪಾರದಲ್ಲಿ ಮತ್ತು ಅದರ ಬಳಕೆ ಕ್ಷೇತ್ರಗಳಲ್ಲಿ ನಾಯಕತ್ವದ ಸ್ಥಾನ ಸಾಧಿಸಬೇಕೆನ್ನುವ ನಮ್ಮ ಕಂಪನಿಯ ದೂರದೃಷ್ಠಿಯ ಕನಸನ್ನು ಸೆರೆಹಿಡಿಯುತ್ತದೆ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com