ಬ್ರಾಂಡ್ ಲೂಯಿಸ್ ಫಿಲಿಪ್ ಕಲೆಕ್ಷನ್ ಆರಂಭ

Updated on: 

ಭಾರತದ ಫಾರ್ಮಲ್ ಉಡುಪುಗಳ ಬ್ರಾಂಡ್ ಲೂಯಿಸ್ ಫಿಲಿಪ್ ತನ್ನ ಹೊಸ ಮತ್ತು ವಿಶಿಷ್ಟವಾದ ಎಸ್/ಎಸ್ 13 ಕಲೆಕ್ಷನ್ ಆರಂಭಿಸಿದೆ. ಎಲ್ಲ ಶ್ರೇಣಿಯ ಅಗತ್ಯಗಳಿಗೂ ಹೊಂದುವಂತೆ  ಫಾರ್ಮಲ್, ಸೆಮಿ ಫಾರ್ಮಲ್ ಮತ್ತು ಪಾರ್ಟಿ ಉಡುಪುಗಳನ್ನು ಈ ಕಲೆಕ್ಷನ್ ಹೊಂದಿದೆ.
ಇಟಲಿ ಮತ್ತು ಮೊನಾಕ್ಕೋ ಶೈಲಿಯ ಸ್ಫೂರ್ತಿಯಿಂದ  ಈ ಸಂಗ್ರಹವನ್ನು ಮಾಡಲಾಗಿದ್ದು, ಸುಂದರವಾದ ಹಾಗೂ ಎಲ್ಲರಿಗೂ ಹೊಂದುವಂಥ ವರ್ಣ ಸಂಯೋಜನೆಯಿದೆ. ಶುದ್ಧ ಪ್ಯಾಶನ್ ಜಗತ್ತಿನ ಯುವಕರಿಗೆ ಇಷ್ಟವಾಗುವ ವರ್ಣಗಳಿಂದ ಸಾಂಪ್ರದಾಯಿಕ ಉಡುಪು ಇಷ್ಟಪಡುವವರಿಗೂ ಈ ಶ್ರೇಣಿಯ ಸಂಗ್ರಹ ಇಷ್ಟವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಲೂಯಿಸ್ ಫಿಲಿಪ್‌ನಿಂದ ಎಲ್‌ಪಿ ಸ್ಪೋರ್ಟ್ ಸಂಗ್ರಹದಲ್ಲಿ ಸ್ಪೋರ್ಟ್ ಶರ್ಟ್ಸ್, ಪೊಲೋ ಶರ್ಟ್‌ಗಳು, ಸ್ಪೋರ್ಟ್ ಚಿನೋಸ್ ಮತ್ತು ಹಲವು ಬಿಡಿಭಾಗಗಳನ್ನು ಹೊಂದಿದೆ. ಸೇಂಟ್ ಟ್ರೊಪೆಜ್ ಕಲೆಕ್ಷನ್ ತೀರ ಬೇಸಿಗೆಯಲ್ಲಿನ ವಾತವರಣಕ್ಕೆ ಹೇಳಿಮಾಡಿಸಿದಂತಿದೆ. ಖಾಕಿ, ಲಿನೆನ್ ಒಳ ಉಡುಪುಗಳು, ಶಾರ್ಟ್‌ಗಳು, ಸ್ಟೈಪ್ ಇರುವ ಕ್ರ್ಯೂನೆಕ್‌ಗಳು, ಬ್ರೈಟ್ ಸೇಲಿಂಗ್ ಪೊಲೋ, ಡೆನಿಮ್‌ಗಳನ್ನು  ಇವು ಹೊಂದಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
BANGALORE- Ambrish,ambrish@mediamoments.in

ಪಿರಮಲ್‌ನಿಂದ ಸಾರ್ವಜನಿಕ ಆರೋಗ್ಯ ಸೇವೆ ಆರಂಭ
ಪಿರಮಲ್ ಫೌಂಡೇಶನ್‌ನ ಸ್ವಾಸ್ಥ್ಯ ಯೋಜನೆಯಾದ ಹೆಲ್ತ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಸಾರ್ವಜನಿಕ ಆರೋಗ್ಯ ಮಾಹಿತಿ ಸೇವೆಯನ್ನು ಬಿಎಸ್‌ಎನ್‌ಎಲ್ ಸಹಾಯವಾಣಿಯಾದ 104  ಸಂಖ್ಯೆಯ ಮೂಲಕ ನೀಡಲು ಯೋಜನೆ ರೂಪಿಸಿದೆ. ಈ ಸೇವೆಯನ್ನು ಆರೋಗ್ಯವಾಣಿ ಎಂದು ಹೆಸರಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತ ವಿ.ಬಿ.ಪಾಟೀಲ್ ಮತ್ತು ಎಚ್‌ಎಂಆರ್‌ಐನ ಸಿಇಒ ಡಾ.ಬಾಲಾಜಿ ಉಟ್ಲಾ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮದನ್‌ಗೋಪಾಲ್ ಸಮ್ಮುಖದಲ್ಲಿ ಮಾ.6ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಆರೋಗ್ಯವಾಣಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಯನ್ನು ವಿಸ್ತರಿಸಲಿದೆ. ಈ ಗುರಿಯನ್ನು ಸಾಧಿಸಲು ಕರ್ನಾಟಕ ಸರ್ಕಾರ ಎಚ್‌ಎಂಆರ್‌ಐ ನೋಡಲ್ ಏಜೆನ್ಸಿ ಜತೆಗೂಡಿ 100 ಆಸನಗಳ ಐಟಿ ಪಾರ್ಕ್ ಅನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುತ್ತಿದೆ. ಇದನ್ನು ಶೀಘ್ರ 300 ಆಸನಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ. ಒಪ್ಪಂದದ ಪ್ರಕಾರ ಆರೋಗ್ಯವಾಣಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನತೆಗೆ ವೈದ್ಯರಿಲ್ಲದ ಸಂದರ್ಭದಲ್ಲಿ ವೈದ್ಯಕೀಯ ಮಾಹಿತಿ ಪಡೆಯಲು ಸಹಕರಿಸಲಿದೆ. ಆರೋಗ್ಯ ವಾಣಿಯ ಮೂಲಕ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆಯಬಹುದಾಗಿದೆ. ವರ್ಷದುದ್ದಕ್ಕೂ ವೈದ್ಯಕೀಯ ಸೌಲಭ್ಯವನ್ನು ಪಡೆಯಬಹುದು. ಆರೋಗ್ಯವಾಣಿ ಸೇವೆ ತಂತ್ರಜ್ಞಾನ ಆಧಾರಿತವಾಗಿದ್ದು, ಯಾರು ಬೇಕಾದರೂ ವೈದ್ಯರ ಭೇಟಿ ಇಲ್ಲದೆಯೇ ಮೂಲಭೂತ ವೈದ್ಯಕೀಯ ಸೇವೆ ಪಡೆಯಬಹುದು. ಇದಲ್ಲದೇ ವೈದ್ಯರ ಸೇವೆ, ತಜ್ಞರ ಸೇವೆ, ಆರೋಗ್ಯ ಕಾರ್ಯಕರ್ತರು ಸೇವೆ ಗಳಿಸಬಹುದು. ಆಸ್ತ್ರೆ, ಕ್ಲಿನಿಕ್, ರಕ್ತ ಬ್ಯಾಂಕ್ ಇತ್ಯಾದಿ ಸೇವೆಗಳನ್ನೂ ಒದಗಿಸಲಿದೆ ಎಂದು  ಡಾ.ಬಾಲಾಜಿ ಉಟ್ಲಾ ತಿಳಿಸಿದರು.

ಟಾಟಾ ಡೊಕೊಮೊದಿಂದ ಬೂಸ್ಟರ್ ಸೇವೆ
ಟಾಟಾ ಟೆಲಿಸರ್ವೀಸಸ್ ಲಿ.ಕಂಪೆನಿಯ ಹೆಸರಾಂತ ದೂರಸಂಪರ್ಕ ಬ್ರ್ಯಾಂಡ್ ಸಂಸ್ಥೆ ಟಾಟಾ ಡೊಕೊಮೊ ಅಂತರ್ಜಾಲ ಸಂಪರ್ಕ ಸೇವೆಗೆ ಸಂಬಂಧಿಸಿದ ಪೋಟಾನ್ 3ಜಿ ಮತ್ತು ಪೋಟಾನ್ ಮ್ಯಾಕ್ಸ್ ಸ್ಪೀಡ್ ಬೂಸ್ಟರ್ ಪ್ಯಾಕ್ ಆರಂಭಿಸಿದೆ. 125ರಷ್ಟು ಕಡಿಮೆ ಬೆಲೆಗೆ ಅತಿ ವೇಗವಾದ ಇಂಟರ್ನೆಟ್ ಸಂಪರ್ಕ ಒದಗಿಸುವ ಸೌಲಭ್ಯ ಇದಾಗಿದ್ದು, ಪೋಟಾನ್ 3ಜಿ ಮತ್ತು ಪೋಟಾನ್ ಮ್ಯಾಕ್ಸ್ ಸಂಪರ್ಕ ಪಡೆದುಕೊಂಡಿರುವ ಕರ್ನಾಟಕದಲ್ಲಿನ ಎಲ್ಲ ಪೋಸ್ಟ್‌ಪೇಯ್ಡ್ ಗ್ರಾಹಕರು ಮಿತಿಯಿಲ್ಲದಷ್ಟು ಸೌಲಭ್ಯಗಳ ಈ ವೇಗದ ಇಂಟರ್ನೆಟ್ ಸಂಪರ್ಕದ ಲಾಭ ಪಡೆದುಕೊಳ್ಳಬಹುದು. ಪೋಟಾನ್ ಪ್ಲಸ್ ಗ್ರಾಹಕರು ಈಗಾಗಲೇ ಈವೇಗದ ಇಂಟರ್ನೆಟ್ ಸಂಪರ್ಕದ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಈಗ ಪೋಟಾನ್ 3ಜಿ ಮತ್ತು ಪೋಟಾನ್ ಮ್ಯಾಕ್ಸ್ ಗ್ರಾಹಕರ ಅವಶ್ಯಕತೆ ಮತ್ತು ಅವರ ಬಳಕೆಯ ರೀತಿಗೆ ಹೊಂದಿಕೊಳ್ಳುವಂತಹ ಮೂರು ವಿವಿಧ ಶ್ರೇಣಿಯ ದರಪಟ್ಟಿ ಯೋಜನೆಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.125ಕ್ಕೆ  500 ಎಂಬಿ(ಮೆಗಾಬೈಟ್) ಮತ್ತು 200ಕ್ಕೆ 1 ಜಿಬಿ (ಗಿಗಾಬೈಟ್) ಹಾಗೂ 350ಕ್ಕೆ 2 ಜಿಬಿ(ಗಿಗಾಬೈಟ್)ವರೆಗೂ ಇಂಟರ್ನೆಟ್ ಸಂಪರ್ಕದ ಲಾಭವನ್ನು ಪಡೆದುಕೊಳ್ಳಬಹುದು. ಯೋಜನೆಯು ಎಲ್ಲಾ ಗ್ರಾಹಕರಿಗೂ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಬೇಕೆಂಬ ಟಾಟಾ ಡೊಕೊಮೊದ ಸದುದ್ದೇಶದ ಯೋಜನೆಗಳು ಈಗ ಸ್ಪೀಡ್ ಬೂಸ್ಟರ್ ಸೇವೆ ಎಂಬ ಇನ್ನೊಂದು ಗ್ರಾಹಕ ಸ್ನೇಹಿ ಕೊಡುಗೆಯೊಂದಿಗೆ ಮುಂದುವರಿದಿದೆ ಎಂದು ಟಾಟಾ ಡೊಕೊಮೊದ ದಕ್ಷಿಣ ವಲಯದ ಮುಖ್ಯಸ್ಥ ಯತೀಶ್ ಮೆಹ್ರೋತ್ರಾ ತಿಳಿಸಿದ್ದಾರೆ. ಈ ಹೊಸ ಪ್ಯಾಕೇಜ್‌ಗಳ ಸೌಲಭ್ಯವನ್ನು ಪಡೆದುಕೊಳ್ಳಲು ಟಾಟಾ ಡೊಕೊಮೊದ ಪೋಟಾನ್ 3ಜಿ ಮತ್ತು ಪೋಟಾನ್ ಮ್ಯಾಕ್ಸ್ ಗ್ರಾಹಕರು ಶುಲ್ಕರಹಿತ ದೂರವಾಣಿ ಸಂಖ್ಯೆ 1800-266-121ಗೆ ಕರೆ ಮಾಡಬಹುದು. ಇಲ್ಲವಾದರೆ ತಮಗೆ ಸಮೀಪದ ಟಾಟಾ ಡೊಕೊಮೊ ಬ್ರ್ಯಾಂಡ್ ಸ್ಟೋರ್‌ಗೆ ಭೇಟಿ ನೀಡಬಹುದು.

ಟಾಟಾ ಉಪ್ಪು ರಾಯಭಾರಿಯಾಗಿ ರಮ್ಯಾ ಆಯ್ಕೆ
ಟಾಟಾ ಕೆಮಿಕಲ್ಸ್ ಲಿಮಿಟೆಡ್‌ನ ರಾಷ್ಟ್ರೀಯ ಮಟ್ಟದಲ್ಲಿ ಅಗ್ರಗಣ್ಯ ಬ್ರ್ಯಾಂಡ್ ಆಗಿರುವ ಟಾಟಾ ಐಯೋಡೈಸಡ್ ಉಪ್ಪು, ನೂತನ ಜಾಹೀರಾತು ರಾಯಭಾರಿಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿ ರಮ್ಯಾ ಆಯ್ಕೆಯಾಗಿದ್ದಾರೆ. ಈ ಅಭಿಯಾನ ಪ್ರಮುಖ ಉತ್ಪನ್ನದ ಶುದ್ಧತೆ ಬಗ್ಗೆ ಜಾಗೃತಿ ಮೂಡಿಸುತ್ತದೆ. ಗ್ರಾಹಕರಿಗೆ ಟಾಟಾ ಉಪ್ಪನ್ನು ಪರೀಕ್ಷಿಸಿದ್ದೀರಾ? ಎಂಬ ಪ್ರಶ್ನೇ ಕೇಳುವ ಮೂಲಕ ದಿನನಿತ್ಯದ ಜೀವನದಲ್ಲಿ ಗ್ರಾಹಕರು ಟಾಟಾ ಉಪ್ಪನ್ನು ಬಳಸುವಂತೆ ಉತ್ತೇಜಿಸುವುದಾಗಿದೆ. ಸ್ಯಾಂಡಲ್‌ವುಡ್ ತಾರೆ ರಮ್ಯಾ ಟಾಟಾ ಉಪ್ಪಿನ ಬ್ರ್ಯಾಂಡ್ ಬೆಂಬಲಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತಸ ತಂದಿದೆ. ಚಿಕ್ಕ ವಯಸ್ಸಿನಿಂದ ನಮ್ಮ ಮನೆಯಲ್ಲಿ ಟಾಟಾ ಉಪ್ಪನ್ನುಬಳಕೆ ಮಾಡುತ್ತಿದ್ದೇವೆ. ಟಾಟಾ ಮತ್ತು ಇತರ ಕಂಪನಿಯ ಉಪ್ಪಿನ ರುಚಿಯ ಬಗ್ಗೆ ಪರೀಕ್ಷಿಸಿದ್ದೇನೆ.  ಜನರು ಉಪ್ಪನ್ನು ಕೊಳ್ಳುವಾಗ ಜಾಗೃತರಾಗಬೇಕು ಎಂದರು. ಟಾಟಾ ಕೆಮಿಕಲ್ಸ್‌ನ ಗ್ರಾಹಕ ವ್ಯಾಪಾರ ಉತ್ಪನ್ನದ ಸಿಒಒ ಅಶ್ವಿನಿ ಹಿರನ್ ಪ್ರತಿ ಉಪ್ಪಿನ ಪ್ಯಾಕ್ ತಯಾರಿಸುವ ಹಂತದಲ್ಲಿ ಕುದಿಸಿ ಶುದ್ದ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಇತರ ಉಪ್ಪಿಗೆ ಹೋಲಿಸಿದರೆ ಟಾಟಾ ಉಪ್ಪು ಶುದ್ಧತೆ ಜೊತೆ ಅಷ್ಟೇ ಖಾತರಿ. ಈ ಅಭಿಯಾನದ ಮೂಲಕ ಟಾಟಾ ಉಪ್ಪಿಗೆ ಮತ್ತಷ್ಟು ಶುದ್ದತೆ ನೀಡಲಿದೆ ಎಂದರು.

ಹೊಸ ಚಿನೋ ಸರಣಿ ಬಿಡುಗಡೆ
ವ್ಯಾನ್ ಹುಸೆ ಚಿನೋ ಕಸಿನ್ಸ್ ಹೊಸ ಚಿನೋ ಸರಣಿಯನ್ನು ಬಿಡುಗಡೆಗೊಳಿಸಿದೆ. ಚಿನೋಗಳಲ್ಲಿ ಖಾಕಿ, ಕಂದು, ನೀಲಿ ಮತ್ತು ಫಾರ್ಮಲ್ ಶೈಲಿಯ ಉಡುಪುಗಳಿದ್ದು, ಲಿನೋ ಚೀನೀ ಪೀಚಿನೋ ಮತ್ತು ಏರ್‌ಚಿನೋ ಎಂದು ಇವಕ್ಕೆ ಹೆಸರಿಡಲಾಗಿದೆ. ಜೀನ್ಸ್‌ಗೆ ಸರಿಯಾದ ಹೊಂದಿಕೆಯಲ್ಲಿ ಅದಕ್ಕೂ ಮೀರಿದ ಬಣ್ಣ ಮತ್ತು ಶೈಲಿಯನ್ನು ಈ ಜೀನ್ಸ್ ಹೊಂದಿದೆ. ಲಿನೋ ಬೇಸಿಗೆಕಾಲಕ್ಕೆ ಸೂಕ್ತವಾಗಿ ಹೊಂದುವ ಪ್ಯಾಂಟ್‌ಗಳ ಸಂಗ್ರಹವಾಗಿದೆ. ಲಿನೆನ್‌ನ ಈ ಪ್ಯಾಂಟ್‌ಗಳು ಎಲ್ಲ ಟಾಪ್‌ಗಳಿಗೂ ಒಪ್ಪುವ ರೀತಿಯಲ್ಲಿ ರೂಪುಗೊಂಡಿವೆ. ಪೀಚಿನೋ ಮೃದು, ಕಂಪರ್ಟಬಲ್ ಮತ್ತು ಟ್ರೆಂಡಿ ಆಗಿದೆ. ಅಲ್ಪಾಚಿನೋ ಇಟಾಲಿಯನ್ ಚಿಕ್‌ನಿಂದ ಸ್ಪೂರ್ತಿ ಪಡೆದು ರೂಪಿಸಲಾಗಿದ್ದು ಬೋಲ್ಡ್ ಮತ್ತು ಪ್ಯಾಷನಬಲ್ ಆಗಿದೆ. ಏರ್‌ಚೀನೋ ಮೆತ್ತನೆ ಬಿಳಿ ಅಂಗಿ ಮತ್ತು ಸುಂದರವಾದ ಆಕ್ಸ್‌ಫರ್ಡ್ ಜೋಡಿ ಹೊಂದಿದೆ.
ಹೆಚ್ಚಿನ ಮಾಹಿತಿಗೆ: BANGALORE- Nischal- nischal@mediamoments.in 0973 8007 727.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com