ಹಬ್ಬದ ಋತುವಿಗೆ ಬ್ರಾಂಡ್ ಫ್ಯಾಕ್ಟರಿ ರಿಯಾಯಿತಿ

ಭಾರತದ ರಿಟೇಲ್ ಗ್ರೂಪ್ ಹಾಗೂ ಲೈಪ್ಸ್ಟೈಲ್ ಶಾಪಿಂಗ್ ಕೇಂದ್ರವಾಗಿರುವ 'ಬ್ರಾಂಡ್ ಫ್ಯಾಕ್ಟರಿ' ಬೃಹತ್ ರಿಯಾಯಿತಿ ದರದ ಮಾರಾಟದ ಮೂಲಕ ಹಬ್ಬದ ಋತುವಿಗೆ ಎಲ್ಲಾ ಸಿದ್ಧತೆ ನಡೆಸಿದೆ.
ದೇಶದಲ್ಲಿನ ಎಲ್ಲಾ ಬ್ರಾಂಡ್ ಫ್ಯಾಕ್ಟರಿ ಮಳಿಗೆಗಳಲ್ಲಿ ಆಯ್ದ ಬ್ರಾಂಡ್ಗಳು ಶೇ.50ರ ರಿಯಾಯಿತಿಯಲ್ಲಿ ಲಭ್ಯವಿದೆ. ಅದೇ ರೀತಿ ಆಯ್ದ ಬ್ರಾಂಡ್ಗಳ ಮೇಲೆ ಗ್ರಾಹಕರು 'ಒಂದು ಕೊಂಡರೆ ಇನ್ನೊಂದು ಉಚಿತ' ಕೊಡುಗೆಯನ್ನೂ ಪಡೆಯಬಹುದು. ಈ ಕೊಡುಗೆಯು ಪುರುಷರ ಬ್ರಾಂಡ್ಗಳಾದ ಜಾನ್ ಮಿಲ್ಲರ್ಸ್, ಸ್ಕಲ್ಲರ್ಸ್, ಪಾರ್ಕ್ಸ್, ವಿಲ್ಸ್ ಲೈಫ್ಸ್ಟೈಲ್, ಕಲರ್ಸ್, ಆಪ್ಷನ್ಸ್, ಸೆಲೆಬ್ರಿಟಿ, ಅರ್ಬನಾ, ಡೇನಿಯಲ್ ಹೆಚ್ತರ್, ಇಂಡಿಗೋ, ಲೀ ಕೂಪರ್ ಮತ್ತಿತರ ಬ್ರಾಂಡ್ಗಳಿಗೆ ದೊರೆಯಲಿದೆ. ಬೃಹತ್ ರಿಯಾಯಿತಿ ಮಾರಾಟ ನಿಮ್ಮ ನಗರಕ್ಕೆ ಆಗಮಿಸಿದ್ದು, ಗ್ರಾಹಕರು ತಮ್ಮ ಸಮೀಪದ ಬ್ರಾಂಡ್ ಫ್ಯಾಕ್ಟರಿ ಮಳಿಗೆಯಲ್ಲಿ ಹಬ್ಬದ ಉಲ್ಲಾಸ ಸವಿಯಬಹುದು. ಸ್ಮಾರ್ಟ್ ಆಗಿ ಶಾಪ್ ಮಾಡಿ ಮತ್ತು ಅತ್ಯುತ್ತಮ ಕೊಡುಗೆಗಳೊಂದಿಗೆ ಹಬ್ಬದ ಸಂಭ್ರಮ ಆಚರಿಸಿ.
ಕನಸಿನ ಮನೆಗೆ ಎಕ್ಸ್ಪ್ರೆಸ್ ಲೋನ್
ಡಿ.ಎಚ್.ಎಫ್.ಎಲ್ ದೇಶದ ವಸತಿ ಹಣಕಾಸು ನೆರವು ಸಂಸ್ಥೆಯಾಗಿದ್ದು, ಗ್ರಾಹಕರು ಹಬ್ಬದ ಈ ಸಂದರ್ಭದಲ್ಲಿ ತಮ್ಮ ಕನಸಿನ ಮನೆಯನ್ನು ಖರೀದಿಸಲು ಅನುವಾಗುವಂತೆ 'ಎಕ್ಸ್ಪ್ರೆಸ್ ಲೋನ್' ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ವೇತನದಾರರು ಅಥವಾ ಸ್ವ ಉದ್ಯೋಗಿಗಳು ಕಂಪನಿಯ ನಿಯಮಗಳಿಗೆ ಅನುಗುಣವಾಗಿ ಅಗತ್ಯವಿರುವ ದಾಖಲೆಗಳನ್ನು ಹಾಜರುಪಡಿಸಿ ಮೂರು ಕೆಲಸದ ದಿನಗಳಲ್ಲಿ ಗೃಹಸಾಲ ಮಂಜೂರಾತಿ ಪಡೆಯಬಹುದು. ಮೂಲ ಮಂಜೂರಾತಿ ನಾಲ್ಕು ಅಥಾ ಐದು ದಿನದ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಡಿಎಚ್ಎಫ್ಎಲ್ ಎಕ್ಸೆಪ್ರೆಸ್ ಲೋನ್ ಯೋಜನೆಯಡಿ ದೇಶಾದ್ಯಂತ ಇರುವ ಯಾವುದೇ 456 ಶಾಖೆಗಳಲ್ಲಿ ನ.5ರವರೆಗೂ ಪಡೆಯಬಹುದು. ಈ ಕುರಿತು ಮಾತನಾಡಿದ ಡಿಎಚ್ಎಫ್ಎಲ್ನ ಇವಿಪಿ ಮತ್ತು ಮುಖ್ಯ ವಿತರಣಾಧಿಕಾರಿ ರಾಕೇಶ್ ಮಕ್ಕರ್, ಡಿಎಚ್ಎಫ್ಎಲ್ ಎಕ್ಸ್ಪ್ರೆಸ್ ಲೋನ್ ಯೋಜನೆಯು ಗ್ರಾಹಕರು ತಮ್ಮ ಕನಸಿನ ಮನೆ ಖರೀದಿಸುವ ಗುರಿ ಸಾಧಿಸಲು ನಮ್ಮ ನೆರವಾಗಿದೆ ಎಂದರು.
ಟಾಟಾ ಡೊಕೊಮೊ ಹಬ್ಬದ ಕೊಡುಗೆ
ಟಾಟಾ ಡೊಕೊಮೊ ದೇಶಾದ್ಯಂತ ತನ್ನ ಪೋಸ್ಟ್ಪೇಯ್ಡ್ ಗ್ರಾಹಕರಿಗಾಗಿ 'ಖಚಿತ ಉಡುಗೊರೆಗಳ ಜತೆ ಹಬ್ಬದ ಸಂಭ್ರಮವನ್ನು ಆಚರಿಸಿ' ಎಂಬ ಘೋಷಣೆಯೊಡನೆ ಹಬ್ಬದ ಕೊಡುಗೆಯನ್ನು ಪ್ರಕಟಿಸಿದೆ. ಟಾಟಾ ಡೊಕೊಮೊ, ಹೊಸದಾಗಿ ಪೋಸ್ಟ್ಪೇಯ್ಡ್ ಸಂಪರ್ಕ ಪಡೆದವರಿಗೆ ಧ್ವನಿ ಆಧಾರಿತ ಕರೆ ಸೌಲಭ್ಯ, ದತ್ತಾಂಶ (ಡೇಟಾ) ಸೇವೆಗಳು, ಖಚಿತವಾದ ಉಡುಗೊರೆಗಳ ಭಾರೀ ಕೊಡುಗೆ. ಭಾರತದಾದ್ಯಂತ ಟಾಟಾ ಡೊಕೊಮೊ ಬ್ರಾಂಡ್ ಮಳಿಗೆಗಳಲ್ಲಿ ಈ ಹಬ್ಬದ ಉಡುಗೊರೆ ಲಭ್ಯ. ಈ ವಿಶೇಷ ಕೊಡುಗೆ ಈಗಾಗಲೇ ಪ್ರಾರಂಭವಾಗಿದ್ದು, ನವೆಂಬರ್ 30ರವರೆಗೂ ಮುಂದುವರೆಯಲಿದೆ. ಯೋಜನೆ ಪ್ರಕಟಿಸಿ ಮಾತನಾಡಿದ ಟಾಟಾ ಡೊಕೊಮೊದ ಎಂಬಿಯು ವಿಭಾಗದ ಮುಖ್ಯಸ್ಥ ರೋಹಿತ್ ಟಂಡನ್, ದೇಶದಲ್ಲಿ ಯಾವುದೇ ಹಬ್ಬಗಳ ಆಚರಣೆ ಇರಲಿ ಅದರ ಉತ್ಸಾಹಕ್ಕೆ ನಾವು ಬಹಳ ಬೆಲೆ ಕೊಡುತ್ತೇವೆ. ಜನರ ಸಂಭ್ರಮವನ್ನು ಗೌರವಿಸುತ್ತೇವೆ. ಅಷ್ಟೇ ಅಲ್ಲ, ಸೂಕ್ತ ರೀತಿಯ ಉಡುಗೊರೆಗಳನ್ನು ನೀಡುವ ಮೂಲಕ ಗ್ರಾಹಕರಲ್ಲಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಇಚ್ಛಿಸುತ್ತೇವೆ ಎಂದರು.
ಕತ್ರಿನಾ 'ಲೈನ್' ಬ್ರಾಂಡ್ ರಾಯಭಾರಿ
ಭಾರತದಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆ ನಿರಂತರವಾಗಿ ಬೆಳವಣಿಗೆ ಕಾಣುತ್ತಿರುವುದನ್ನು ಮನಗಂಡಿರುವ 'ಲೈನ್ ಕಾರ್ಪೋರೇಷನ್' ತನ್ನ 'ಲೈನ್' ಬ್ರಾಂಡ್ ಪ್ರಚಾರಕ್ಕಾಗಿ ಬಾಲಿವುಡ್ನ ತಾರೆ ಕತ್ರಿನಾ ಕೈಫ್ ರನ್ನು ರಾಯಭಾರಿಯಾಗಿ ನೇಮಿಸಿದೆ. ಕತ್ರಿನಾ ಕೈಫ್ ಲೈನ್ ಬ್ರಾಂಡ್ಗೆ ಪ್ರಚಾರ ರಾಯಭಾರಿಯಾಗಿರಲಿದ್ದಾರೆ. ಜತೆಗೆ ಟಿವಿ ವಾಣಿಜ್ಯ ಜಾಹೀರಾತುಗಳಲ್ಲೂ ಕಾಣಿಸಿಕೊಂಡು ಲೈನ್ ಬ್ರಾಂಡ್ ಪ್ರಚಾರ ನಡೆಸಲಿದ್ದಾರೆ. ಈವೇಳೆ ಕತ್ರಿನಾ ಕೈಫ್ ಭಾವಚಿತ್ರವಿರುವ ಸ್ಟಿಕರ್ಗಳನ್ನೂ ಉಚಿತ ಬಳಕೆಗೆ ಬಿಡುಗಡೆ ಮಾಡಲಾಗಿದೆ. ದೀಪಾವಳಿ ಹಬ್ಬ ಹತ್ತಿರವಾಗಿರುವ ಈ ಸಂದರ್ಭದಲ್ಲಿ ಕತ್ರಿನಾ ಬ್ರಾಂಡ್ ಪ್ರಚಾರ ಆರಂಭಗೊಳ್ಳುತ್ತಿರುವುದು ಲೈನ್ ಬ್ರಾಂಡ್ಗೆ ಹೆಚ್ಚಿನ ಜನಪ್ರಿಯತೆ ತಂದುಕೊಡಲಿದೆ ಎಂದು ಸಂಸ್ಥೆ ತಿಳಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕತ್ರಿನಾ ಕೈಫ್, ನಾನಂತೂ ನನ್ನ ಅಭಿಮಾನಿಗಳ ಜತೆ ಸಂವಾದ-ಸಂವಹನ ನಡೆಸಲು ಲೈನ್ ಮೂಲಕ ವಿಶೇಷವಾಗಿ ಒಂದು ಖಾತೆ ತೆರೆದಿದ್ದೇನೆ. ಅಲ್ಲದೆ, ಲೈನ್ ಬಿಡುಗಡೆ ಮಾಡಲಿರುವ ಉಚಿತ ಸ್ಟಿಕರ್ಗಳಿಗಾಗಿಯೇ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.
ಬಿಳೇಕಳ್ಳಿಯಲ್ಲಿ ಫರ್ನೀಚರ್ ವರ್ಲ್ಡ್
ಫರ್ನೀಚರ್ ವರ್ಲ್ಡ್' ನಗರದಲ್ಲಿ ತನ್ನ 4 ನೂತನ ಮಳಿಗೆಯನ್ನು ಇತ್ತೀಚಿಗೆ ಅನಾವರಣಗೊಳಿಸಿತು. ನಟಿ ಸಂಜನಾ ನಗರದ ಬನ್ನೇರುಘಟ್ಟ ರಸ್ತೆಯ ಬಿಳೇಕಳ್ಳಿಯಲ್ಲಿ ಪ್ರಾರಂಭವಾದ ಫರ್ನೀಚರ್ ವರ್ಲ್ಡ್ ಮಳಿಗೆಯನ್ನು ಉದ್ಘಾಟಿಸಿದರು.
ಉಳಿದ 3 ಮಳಿಗೆಗಳು ಜೆ.ಪಿ.ನಗರ, ರಾಜಾಜಿನಗರ ಮತ್ತು ಡಿಕನ್ಸನ್ ರಸ್ತೆಯಲ್ಲಿ ಪ್ರಾರಂಭಿಸಿದೆ. ಫರ್ನೀಚರ್ ವರ್ಲ್ಡ್ನಲ್ಲಿ ಮನೆಗೆ ಮತ್ತು ಬೆಡ್ರೂಂಗೆ ಹೊಂದುವಂತೆ ಅನೇಕ ಬ್ರ್ಯಾಂಡ್ಗಳು, ವಿಶ್ವ ದರ್ಜೆಯ ಸಂಗ್ರಹಗಳು ಹಾಗೂ ಅತ್ಯಾಧುನಿಕ ತಯಾರಿಕಾ ಸೌಲಭ್ಯ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡಿದ ಫರ್ನೀಚರ್ ವರ್ಲ್ಡ್ ನಿರ್ದೇಶಕ ಸುನೀಲ್ 'ನಾವು ಬೆಂಗಳೂರು ಮಾರುಕಟ್ಟೆ ಪ್ರವೇಶಿಸಿದ್ದು, ಎಲೆಕ್ಟ್ರಾನಿಕ್ಸ್ನ ಪ್ರವರ್ತಕರಾದ ಪೈ ಇಂಟರ್ನ್ಯಾಷನಲ್ ಜತೆಗೆ ಕೈಜೋಡಿಸಿ ಫರ್ನೀಚರ್ ವರ್ಲ್ಡ್ ಮಳಿಗೆಗಳನ್ನು ಒಂದೇ ದಿನದಲ್ಲಿ ತೆರೆದಿದ್ದೇವೆ' ಎಂದು ಹೇಳಿದರು.
'ಘರ್ ಕಬ್ ಅಹೋಗೆ' ಆಂದೋಲನ
ಎಕ್ಸ್ಪ್ರೆಸ್ ಮನಿ, ಜಾಗತಿಕವಾಗಿ ಹಣದ ವರ್ಗಾವಣೆ ಸೇವೆಯಲ್ಲಿ ತೊಡಗಿರುವ ಪ್ರಮುಖ ಸಂಸ್ಥೆಯಾಗಿದ್ದು,'ಘರ್ ಕಬ್ ಅಹೋಗೆ' ಆಂದೋಲನದಲ್ಲಿ ವಿಜಯಿಯಾದ ಕರ್ನಾಟಕದ ಅದೃಷ್ಟಶಾಲಿಗಳ ಹೆಸರನ್ನು ಪ್ರಕಟಿಸಿದೆ. ಈ ಮೂಲಕ ವಿಜಯಿಗಳಲ್ಲಿ ಒಬ್ಬರಾದ ದುಬೈನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಮಹಬೂಬ್ ಪಾಷಾ, ಕರ್ನಾಟಕದಲ್ಲಿರುವ ತನ್ನ ಹುಟ್ಟೂರು ತುಮಕೂರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶ ಪಡೆದರು. ಮಹಬೂಬ್ ಪಾಷ ಕಳೆದ ಎರಡೂವರೆ ವರ್ಷದಿಂದ ಕುಟುಂಬ ಸದಸ್ಯರಿಂದ ದೂರವಿದ್ದು, ಅವರ ಪೋಷಕರು ಎಕ್ಸ್ಪ್ರೆಸ್ ಮನಿ ಪೋಸ್ಟ್ ಕಾರ್ಡ್ ಮೇಲೆ ಹೃದಯಸ್ಪರ್ಶಿ ಸಂದೇಶವನ್ನು ಕಳುಹಿಸಿದ್ದರು. ಇದು, ಅವರಿಗೆ ಹುಟ್ಟೂರಿಗೆ ಉಚಿತವಾಗಿ ಪ್ರಯಾಣಿಸುವ ಟಿಕೆಟ್ ಗೆಲ್ಲಲು ನೆರವಾಯಿತು. ಈ ಕುರಿತು ಮಾತನಾಡಿದ ಮಹಬೂಬ್ ಪಾಷಾ ಅವರು, 'ನಾನು ಹುಟ್ಟೂರಿಗೆ ಪ್ರಯಾಣಿಸಲು, ನನ್ನ ಕುಟುಂಬ ಸದಸ್ಯರನ್ನು ನೋಡಲು ಹಾತೊರೆದಿದ್ದೇನೆ. ಇಂಥದೊಂದು ವಿಭಿನ್ನ ಕಾರ್ಯಕ್ರಮ ರೂಪಿಸಿದ ಎಕ್ಸ್ಪ್ರೆಸ್ ಮನಿಗೆ ನಾನು ಅಭಾರಿಯಾಗಿದ್ದೇನೆ. ಇದು, ಭಾರತದಲ್ಲಿ ಕುಟುಂಬ ಸದಸ್ಯರ ಜತೆಗೆ ಕೆಲವೊಂದು ಸಮಯ ಕಳೆಯಲು ಅವಕಾಶ ನೀಡಲಿದೆ' ಎಂದರು.
ಸ್ಯಾಮ್ಸಂಗ್ ಆಕರ್ಷಕ ಬ್ರಾಂಡ್
'ಭಾರತದ ಅತ್ಯಂತ ಆಕರ್ಷಕ ಬ್ರಾಂಡ್ಗಳು 2013' ಎನ್ನುವ ಭಾರತದ ಪ್ರಮುಖ ಬ್ರಾಂಡ್ ಒಳನೋಟಗಳ ಕಂಪನಿ ಟಿಆರ್ಎಯ (ಟ್ರಸ್ಟ್ ರಿಸರ್ಚ್ ಅಡ್ವೈಸರಿ) ಇತ್ತೀಚಿನ ವರದಿ ಹೊರಬಿದ್ದಿದೆ. ಬೆಂಗಳೂರು ಮತ್ತು ಚೆನೈಗಳೆರಡೂ ಭಾರತದ ಮುಂದಾಳುವಾದ ಸ್ಯಾಮ್ಸಂಗ್ ಮೊಬೈಲ್ನ್ನು ಆಯಾ ನಗರಗಳ ಅತ್ಯಂತ ಆಕರ್ಷಕ ಬ್ರಾಂಡ್ ಎಂದು ತೀರ್ಪು ನೀಡಿವೆ. ಆದರೆ ಇವುಗಳಲ್ಲಿ ಯಾವ ನಗರವೂ ಬೇರೆ ಯಾವುದೇ ಕ್ರಮಾಂಕಕ್ಕೆ ರಾಷ್ಟ್ರೀಯ ಪ್ರವೃತ್ತಿಯನ್ನು ಅನುಸರಿಸಿಲ್ಲ. ಬೆಂಗಳೂರಿನ 2ನೇ ಅತ್ಯಂತ ಆಕರ್ಷಕ ಬ್ರಾಂಡ್ ಎಲ್ಜಿ, ಇದು ಮೊದಲ ಸ್ಥಾನದಲ್ಲಿರುವವರ ಆಕರ್ಷಣೆಯ ಶೇ.11ರಷ್ಟು ಹಿಂದಿದೆ. ಹಾಗೂ ಇದರ ನಂತರ ಬರುವ ಪೂಮಾ ಶೇ.2ರಷ್ಟು ಅಂತರ ಹೊಂದಿದೆ. ಪಾ ಅಖಿಲ ಭಾರತದಲ್ಲಿ 12ನೇ ಸ್ಥಾನಕ್ಕೆ ಹೋಲಿಸಿದ್ದಲ್ಲಿ ನಗರದಲ್ಲಿ 9ನೇ ಸ್ಥಾನದಲ್ಲಿದೆ.
ಆಕ್ಸಿಲರಿ ವಿದ್ಯುತ್ ಪರಿಕರ ಬಿಡುಗಡೆ
ಗ್ರೀವ್ಸ್ ಆಕ್ಸಿಲರಿ ಪವರ್ ಬ್ಯುಸಿನೆಸ್, ಭಾರತದ ಪ್ರಮುಖ ಎಂಜಿನಿಯರಿಂಗ್ ಕಂಪನಿ ಗ್ರೀವ್ಸ್ ಕಾಟನ್ ಲಿಮಿಟೆಡ್ನ ಅಂಗಸಂಸ್ಥೆಯಾಗಿದ್ದು, ಸಮಕಾಲೀನ ಆಕ್ಸಿಲರಿ ವಿದ್ಯುತ್ ಪರಿಕರಗಳನ್ನು ಬಿಡುಗಡೆ ಮಾಡಿದೆ. ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಪೂರಕವಾದ ಇಂಧನ ಕ್ಷಮತೆಯ, ಆಕರ್ಷಕವಾಗಿ ವಿನ್ಯಾಸಗೊಳಿಸಿದ ಆಕ್ಸಿಲರಿ ಪರಿಕರಗಳು ಇವಾಗಿವೆ. ಬೆಂಗಳೂರಿನ ಶೆರಟಾನ್ನಲ್ಲಿ ನೂತನ ಉತ್ಪನ್ನಗಳನ್ನು ಗ್ರೀವ್ಸ್ ಕಾಟನ್ ಲಿಮಿಟೆಡ್ನ ಅಧ್ಯಕ್ಷ ಕರಣ್ ಥಾಪರ್ ಬಿಡುಗಡೆ ಮಾಡಿದರು. ಸವಾಲಿನ ಸಂದರ್ಭದಲ್ಲೂ ಅನಿಯಮಿತವಾದ ವಿದ್ಯುತ್ ಪೂರೈಕೆಗೆ ಪೂರಕವಾಗಿ ವಿನ್ಯಾಸಗೊಳಿಸಿದ ಮೂರು ಹೊಸ ಉತ್ಪನ್ನಗಳಾದ 20 ಕೆವಿಎ, 160-250 ಕೆವಿಎ ಮತ್ತು 500ಕೆವಿಎ ಸಿಪಿಸಿಬಿ 2 ಉತ್ಪನ್ನಗಳನ್ನು ಜೆನ್ಸೆಟ್ ಹಾಗೂ ಎಂಜಿನ್ ವಲಯದಲ್ಲಿ ಕ್ರಮವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
'ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ'
ಲಿಬರ್ಟಿ ವಿಡಿಯೋಕಾನ್ ಜನರಲ್ ಇನ್ಶ್ಯೂರೆನ್ಸ್ ಕಂಪನಿ ಲಿಮಿಟೆಡ್., ತನ್ನ ಅಂಗಭಾಗವಾದ ಲಿಬರ್ಟಿ ಮ್ಯೂಚುಯಲ್ ಇನ್ಶ್ಯೂರೆನ್ಸ್ ಗ್ರೂಪ್ ವತಿಯಿಂದ ಹೊಸ ಯೋಜನೆ 'ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ' ಅನ್ನು ಘೋಷಿಸಿದೆ. ಈ ಪ್ರಾಡಕ್ಟ್ ಪ್ರಮುಖವಾಗಿ ಕಾರ್ಪೋರೇಟ್ ಸಂಸ್ಥೆಗಳು, ಅಸೋಸಿಯೇಷನ್, ಇನ್ಸ್ಟಿಟ್ಯೂಷನ್ಸ್, ಗ್ರೂಪ್ಗಳನ್ನೊಳಗೊಂಡ ಸಂಸ್ಥೆಗಳು ಇದರ ಲಾಭ ಪಡೆಯಬಹುದಾಗಿದೆ. ಈ ಯೋಜನೆ ಕುರಿತು ಮಾತನಾಡಿದ ಲಿಬರ್ಟಿ ವೀಡಿಯೋಕಾನ್ ಸಿಇಓ ರೂಪಂ ಅಸ್ತಾನ, ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ, ಪ್ರಮುಖವಾಗಿ ಸಮೂಹ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಸುರಕ್ಷತೆಯ ಕೆಲಸವನ್ನು ಮಾಡಲಿದೆ. ಉದ್ಯೋಗಿಗಳ ಆದಾಯದ ಮೇರೆಗೆ ಪಾಲಿಸಿಗಳ ಕಂತುಗಳನ್ನು ರೂಪಿಸಲಾಗಿದೆ. ಸಮೂಹ ಸಂಸ್ಥೆಗಳಿಗೆ ಇದು ಉತ್ತಮವಾ ಆಯ್ಕೆಯಾಗಿದೆ ಎಂದರು.
ಕ್ಯಿಂಡಾಲ್ ಸಹಭಾಗಿತ್ವಕ್ಕೆ ಸಹಿ
ಪಾನೀಯ ಉದ್ಯಮ ಕ್ಷೇತ್ರದ ಅಗ್ರಗಣ್ಯ ಸಂಸ್ಥೆಗಳಲ್ಲೊಂದಾದ ಸ್ಕಾಟ್ಲ್ಯಾಂಡ್ನ ಜಾನ್ ಫರ್ಗುಸ್ ಆಂಡ್ ಕಂಪನಿ ಲಿಮಿಟೆಡ್ ಜತೆ ಭಾರತದ ಕ್ಯಿಂಡಾಲ್ ಸಂಸ್ಥೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ. ವಿಸ್ಕಿ ಉತ್ಪಾದನಾ ಕ್ಷೇತ್ರದಲ್ಲಿ 15 ಲಕ್ಷ ಹೊಸ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವನ್ನು ಈ ಸಹಭಾಗಿತ್ವ ಹೊಂದಿದೆ.
ಜತೆಗೆ ವಾರ್ಷಿಕ 3.6 ಮಿಲಿಯನ್ ಡಾಲರ್ ರಫ್ತು ಗುರಿ ಹೊಂದಲಾಗಿದೆ. ಸ್ಕಾಟ್ಲ್ಯಾಂಡ್ ವಿದೇಶಾಂಗ ವ್ಯವಹಾರಗಳ ಸಚಿವ ಹ್ಯೂಮ್ಜಾ ಯೂಸುಫ್ ತಮ್ಮ ಭಾರತ ಪ್ರವಾಸ ಸಂದರ್ಭದಲ್ಲಿ ಈ ಮಹತ್ವದ ಪಾಲುದಾರಿಕೆಯನ್ನು ಪ್ರಕಟಿಸಿದ್ದು, ಉಭಯ ದೇಶಗಳ ವ್ಯಾಪಾರ ವೃದ್ಧಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


