ಲೇಕ್ಲ್ಯಾಂಡ್ ಬ್ರಾಂಡ್ ಅಡುಗೆ ಮನೆ ಉಪಕರಣ

ವೆಸ್ಟ್ಸೈಡ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಲೇಕ್ಲ್ಯಾಂಡ್ ಬ್ರಾಂಡ್ ಮೂಲಕ ನೂತನ ಅಡುಗೆ ಮನೆ ಉಪಕರಣಗಳನ್ನು ಪರಿಚಯಿಸಿದೆ. ಅಡುಗೆ ಮನೆ ಉಪಕರಣ ಹಾಗೂ ಗೃಹ ಬಳಕೆ ಸಾಮಗ್ರಿಗಳು ವೆಸ್ಟ್ಸೈಡ್ ಮಳಿಗೆಗಳಲ್ಲಿ ಲಭ್ಯ. ವಿಶೇಷ ವಿನ್ಯಾಸ ಹಾಗೂ ಸ್ಪರ್ಧಾತ್ಮಕ ದರಗಳೇ ಈ ಬ್ರಾಂಡ್ನ ಧನಾತ್ಮಕ ಅಂಶವಾಗಿದೆ. ಇದರಲ್ಲಿ ಆಹಾರ ಬೇಯಿಸುವ ಸಾಮಗ್ರಿ, ಓವನ್, ಆಹಾರ ಸಂಗ್ರಹ ಮಾಡುವ ಸಾಮಗ್ರಿ, ತರಕಾರಿ ಕತ್ತರಿಸುವ ಉಪಕರಣ ಹಾಗೂ ಧಾನ್ಯಗಳನ್ನು ಶುದ್ಧೀಕರಿಸಲು ಕೂಡ ಉಪಕರಣ ಇಲ್ಲಿ ಲಭ್ಯವಿರುತ್ತದೆ. ಬೆಂಗಳೂರಿನ ಫೋರ್ಂ ಮಾಲ್ನಲ್ಲಿ ಈ ಮಳಿಗೆಯನ್ನು ತೆರೆಯಲಾಗಿದೆ.
ಏರ್ ಸೆಲ್ನಿಂದ ಅರ್ಧ
ಪೈಸೆಗೆ ದೇಶಾದ್ಯಂತ ಕರೆ
ಗ್ರಾಹಕರನ್ನು ತನ್ನತ್ತ ಸೆಳೆಯಲು ಏರ್ ಸೆಲ್ ಸಂಸ್ಥೆ ಉತ್ತಮ ಕೊಡುಗೆ ನೀಡಲು ಮುಂದಾಗಿದೆ. 79ರ ರೀಚಾರ್ಜ್ನೊಂದಿಗೆ ದೇಶಾದ್ಯಂತ ಅರ್ಧ ಪೈಸೆಗೆ ಕರೆಗಳು, 80ರೂಗಳ ಟಾಕ್ ಟೈಮ್, ಉಚಿತ ಎಸ್ಎಂಎಸ್ನೊಂದಿಗೆ 2 ತಿಂಗಳ ಕಾಲ ಉಚಿತ ಫೇಸ್ ಬುಕ್ ಹಾಗೂ 3 ತಿಂಗಳ ಕಾಲ 1ಜಿಬಿ ವರೆಗೂ 3ಜಿ ಡೇಟಾ ಸೇರಿದಂತೆ ಒಂದೇ ಹಂತದಲ್ಲಿ ಎಲ್ಲಾ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದೆ.ವಿಶೇಷವಾಗಿ ಯುವ ಜನತೆ ಹಾಗೂ ಯುವ ವೃತ್ತಿಪರರನ್ನು ದೃಷ್ಟಿಯಲ್ಲಿಟ್ಟುಕೊಡು ಈ ಯೋಜನೆ ರೂಪಿಸಲಾಗಿದೆ.
ಸಿಎಂಆರ್ ವಿವಿ-
ಐಬಿಎಂ ಒಪ್ಪಂದ
ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಿಎಂಆರ್ ವಿಶ್ವವಿದ್ಯಾಲಯವು ಪ್ರತಿಷ್ಠಿತ ಐಬಿಎಂ ಸಂಸ್ಥೆಯ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಮೊಬಿಲಿಟಿ, ಸೋಶಿಯಲ್ ಮೀಡಿಯಾ, ಕ್ಲೌಡ್ ಮತ್ತು ಬಿಗ್ ಡಾಟಾ ತಂತ್ರಜ್ಞಾನಕ್ಕೆ ಸಂಬಂಧಿಸಿ ಸಿಎಂಆರ್ ವಿವಿಯ ವಿದ್ಯಾರ್ಥಿಗಳಿಗೆ ಐಬಿಎಂ ತಂತ್ರಜ್ಞರು ತರಬೇತಿ ನೀಡಲಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್, ಬಿಸಿನೆಸ್ ಅನಾಲೆಟಿಕ್ಸ್ ಹಾಗೂ ಆಡಳಿತ ನಿರ್ವಹಣೆ ಕುರಿತಂತೆಯೂ ತರಬೇತಿ ನೀಡಲಾಗುತ್ತದೆ. 2014-15ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯು ಜುಲೈನಲ್ಲಿ ನಡೆಯಲಿದೆ.
ವಿ-ಗಾರ್ಡ್ ಲಾಭ ಹೆಚ್ಚಳ
ದೇಶದ ಪ್ರಮುಖ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಸಂಸ್ಥೆಯಾದ ವಿ-ಗಾರ್ಡ್ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಕಳೆದ ಮಾರ್ಚ್ 2012-13ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಶೇ.12 ರಷ್ಟು ಹೆಚ್ಚು ಲಾಭಗಳಿಸಿದ್ದು, 378.72 ಕೋಟಿಯಿಂದ 422.44 ಕೋಟಿಗೆ ಏರಿಕೆಯಾಗಿದೆ. ತೆರಿಗೆ ನಂತರದ ಲಾಭ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 8.94 ಕೋಟಿಯಿಂದ 20.48 ಕೋಟಿ ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 1360.21 ಕೋಟಿಯಷ್ಟಿದ್ದ ನಿವ್ವಳ ಆದಾಯ ಇದೀಗ 1517.56 ಕೋಟಿಯಷ್ಟಾಗಿದೆ. ನಾಲ್ಕನೇ ತ್ರೈಮಾಸಿಕ ಅವಧಿಯ ತೆರಿಗೆ ನಂತರ ಲಾಭ 62.92 ರಿಂದ 70.13 ಕೋಟಿಯಷ್ಟಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಟಾಟಾ ದೂರುಸಂಪರ್ಕ
ಸಂಸ್ಥೆಯಿಂದ ಕೊಡುಗೆ
ಟಾಟಾ ದೂರುಸಂಪರ್ಕ ಸಂಸ್ಥೆ ಗ್ರಾಹಕರನ್ನು ಸೆಳೆಯಲು ತನ್ನ ಉತ್ಪನ್ನಗಳ ಮೇಲೆ ಕೊಡುಗೆ ನೀಡಲು ಮುಂದಾಗಿದೆ. ಈಗಿರುವ ಮತ್ತು ನೂತನ ಫೋಟಾನ್ ಮ್ಯಾಕ್ಸ್ ವೈಫೈ, ಫೋಟಾನ್ ಮ್ಯಾಕ್ಸ್ ಮತ್ತು ಫೋಟಾನ್ ಪ್ಲಸ್ನ ಪೋಸ್ಟ್ ಪೇಡ್ ಗ್ರಾಹಕರಿಗೆ ಅಪರಿಮಿತ ಯೋಜನೆ ಘೋಷಿಸಿದೆ. 650 ರಿಂದ 1250ರವರೆಗೆ ಕ್ರಮವಾಗಿ 3ಜಿಬಿ ಇಂದ 30ಜಿಬಿ ವರೆಗೆ ಡಾಟಾ ಬಳಕೆಗೆ ಅವಕಾಶ ಕಲ್ಪಿಸಿದೆ.ಫೋಟಾನ್ 3ಜಿ ಬಯಸುವವರು 21 ಎಂಬಿಪಿಎಸ್ ವೇಗದಲ್ಲಿ ಡಾಟಾ ಪಡೆಯಬಹುದಾಗಿದೆ.
ಸೆಂಟ್ರಮ್ ಗ್ಲೋಬಲ್ ವೀಸಾ ಸಂಸ್ಥೆ ಆರಂಭ
ಸೆಂಟ್ರಮ್ ಡೈರೆಕ್ಟ್ ಸಂಸ್ಥೆ ನೂತನವಾಗಿ ಸೆಂಟ್ರಮ್ ಗ್ಲೋಬಲ್ ವೀಸಾ ಸಂಸ್ಥೆ ಎಂಬ ಅಂಗ ಸಂಸ್ಥೆ ಆರಂಭಿಸಿದೆ. ದೇಶ ವಿದೇಶಕ್ಕೆ ಪ್ರಯಾಣಿಸಲು ಇಚ್ಛಿಸುವವರಿಗೆ ವೀಸಾ ಹಾಗೂ ಪ್ರಯಾಣದ ಇನ್ನಿತರ ಅಗತ್ಯ ಸೌಲಭ್ಯವನ್ನು ಒಂದೇ ಸೂರಿನಡಿ ಒದಗಿಸುವ ಸಂಸ್ಥೆ ಇದಾಗಿದೆ. ಸ್ಪೈಸ್ ಜೆಟ್ ಸಂಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಸೆಂಟ್ರಮ್ ಸಂಸ್ಥೆ 180 ದೇಶಗಳಿಗೆ ವೀಸಾ ಅರ್ಜಿಯನ್ನು ಒದಗಿಸುತ್ತದೆ. ವೀಸಾ ಸೇವೆ ಅಷ್ಟೇ ಅಲ್ಲದೇ ರಜೆ ಪ್ರವಾಸ ಮತ್ತು ಇನ್ಶೂರೆನ್ಸ್ ಸೇವೆಯನ್ನು ನೀಡುತ್ತದೆ.
ಸನ್ ಡೈರೆಕ್ಟ್ನಿಂದ 24/7 ಹಾಟ್ ಲೈನ್
ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸಲು ಡಿಟಿಎಚ್ ಸೇವಾ ಸಂಸ್ಥೆಯಾದ ಸನ್ ಡೈರೆಕ್ಟ್ 24/7 ಹಾಟ್ ಲೈನ್ ನಂಬರ್ 076010-12345 ಪರಿಚಯಿಸಿದೆ. ನೂತನ ಸಂಪರ್ಕ ಹಾಗೂ ಬಳಕೆ ಕುರಿತು ಮಾಹಿತಿ ಪಡೆದುಕೊಳ್ಳಲು ಇದು ಅನುಕೂಲವಾಗಲಿದೆ. ಗ್ರಾಹಕರು ದೂರು ನೀಡಿದ 48 ಗಂಟೆಗಳಲ್ಲಿ ಸಮಸ್ಯೆಗೆ ಸ್ಪಂದಿಸಿ ಉತ್ತಮ ಸೇವೆ ನೀಡುವ ಸಲುವಾಗಿ 200 ಕ್ಕೂ ಹೆಚ್ಚಿನ ಸನ್ ಶೈನ್ ಸೇವಾ ಕೇಂದ್ರ ಆರಂಭಿಸಿದೆ.
ವೈಲ್ಡ್ ಸ್ಟೋನ್ ಡಿಯೋಡ್ರೆಂಟ್
ಥಂಡರ್ ಮಾದರಿ ಬಿಡುಗಡೆ
ಭಾರತೀಯ ಹವಮಾನಕ್ಕೆ ಸರಿಹೊಂದುವಂತೆ ವೈಲ್ಡ್ ಸ್ಟೋನ್ ಡಿಯೋಡ್ರೆಂಟ್ ಥಂಡರ್ ಮಾದರಿಯನ್ನು ಪರಿಚಯಿಸಿದೆ. ಅತ್ಯಂತ ದೀರ್ಘ ಕಾಲದವರೆಗೂ ಸುವಾಸನೆಯನೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದು ಗ್ರೇನಿಯಂ, ವೆಟಿವರ್, ಸೇಡರ್ವುಡ್ ಹಾಗೂ ಇನ್ನಿತರ ಮಿಶ್ರಣವನ್ನು ಪರಿಚಯಿಸಿದೆ. 150ಎಂಎಲ್ನ ಈ ಡಿಯೋಡ್ರೆಂಟ್ ಬೆಲೆ 195 ಲಭ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


