

ನವದೆಹಲಿ: ಕುಸಿಯುತ್ತಿರುವ ಚಿನ್ನದ ಬೆಲೆ ಬೇಡಿಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಳ್ಳಸಾಗಣೆದಾರರು ತೆರಿಗೆ ವಂಚಿಸಿ ದೇಶದೊಳಕ್ಕೆ ಚಿನ್ನ ತರಲು ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.
ಅದರಂತೆ ಇದೇ ಮೊದಲ ಬಾರಿಗೆ ಲಂಡನ್ ಕಡೆ ಯಿಂದಲೂ ಭಾರತಕ್ಕೆ ಚಿನ್ನ ಸಾಗಿಸಿ ತರಲಾಗಿದ್ದು, ಲಂಡನ್ ಈಗ ಹೊಸ ಮಾರ್ಗವಾಗಿ ಮಾರ್ಪಟ್ಟಿದೆ. ಲಂಡನ್‍ನ ಹಿಥ್ರೂ ವಿಮಾನ ನಿಲ್ದಾಣ ದಿಂದ ದೆಹಲಿಗೆ ಎರಡು ಕೋಟಿ ಮೌಲ್ಯದ ಏಳು ಕೆಜಿ ಚಿನ್ನ ಸಾಗಣೆ ಮಾಡಿದ ಆರೋಪದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‍ಐ) ಅಧಿಕಾರಿಗಳು ಜೆಟ್ ಏರ್‍ವೇಸ್ ಮತ್ತು ಲಂಡನ್ ಮೂಲದ ವರ್ಜಿನ್ ಅಟ್ಲಾಂಟಿಕ್ ವಿಮಾನಯಾನ ಸಂಸ್ಥೆಯ ಮೂವರು ನೌಕರನ್ನು ಇತ್ತೀಚೆಗೆ ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಚಿನ್ನ ಸಾಗಿಸಲು ನೆರವು ನೀಡಿದ ಆರೋಪದ ಮೇಲೆ ಬರ್ಡ್ ವಲ್ರ್ಡ್‍ವೈಡ್ ಫೆ್ಲೈಟ್ ಸರ್ವಿಸ್ ಇಂಡಿಯಾದ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಚಿನ್ನದ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಚಿನ್ನ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.
ಆದರೆ, ತೆರಿಗೆ ಮಾತ್ರ ಶೇ.10ರಷ್ಟಿದೆ. ಆದ್ದರಿಂದ ಈ ಹಳದಿ ಲೋಹವನ್ನು ಹಿಂದಿನ ಸಾಂಪ್ರದಾಯಿಕ ಮಾರ್ಗಗಳಾದ ದುಬೈ, ಥಾಯ್ಲೆಂಡ್, ಬಾಂಗ್ಲಾದೇಶ, ಚೀನಾ ಹೊರತುಪಡಿಸಿ ಅನ್ಯ ಮಾರ್ಗಗಳ ಮೂಲಕ ಮಾರುಕಟ್ಟೆಗೆ ತರಲಾಗುತ್ತಿದೆ. ಲಂಡನ್ ಮಾರ್ಗವಾಗಿ ಚಿನ್ನ ಸಾಗಣೆ ಇದೇ ಮೊದಲು.