ಅಕ್ರಮ ಬಂಡವಾಳ ರಫ್ತು: ಭಾರತ ವಿಶ್ವದ ನಾಲ್ಕನೇ ದೊಡ್ಡ ರಾಷ್ಟ್ರ!

ವಾರ್ಷಿಕವಾಗಿ 51,03 ಬಿಲಿಯನ್ $ ಆರ್ಥಿಕ ಹೊರಹರಿವು ಹೊಂದಿರುವ ಭಾರತ, ಅಕ್ರಮ ಬಂಡವಾಳವನ್ನು ರಫ್ತು ಮಾಡುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ.
ಅಕ್ರಮ ಬಂಡವಾಳ(ಸಾಂಕೇತಿಕ ಚಿತ್ರ)
ಅಕ್ರಮ ಬಂಡವಾಳ(ಸಾಂಕೇತಿಕ ಚಿತ್ರ)
Updated on: 

ವಾಷಿಂಗ್ಟನ್: ವಾರ್ಷಿಕವಾಗಿ 51,03 ಬಿಲಿಯನ್ $ ಆರ್ಥಿಕ ಹೊರಹರಿವು ಹೊಂದಿರುವ ಭಾರತ, ಅಕ್ರಮ ಬಂಡವಾಳವನ್ನು ರಫ್ತು ಮಾಡುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ.
ವಾಷಿಂಗ್ಟನ್ ಮೂಲದ ಸಂಶೋಧನೆ ಹಾಗೂ ಸಲಹಾ ಸಂಸ್ಥೆ ಗ್ಲೋಬಲ್ ಫೈನಾಷಿಯಲ್ ಇಂಟಿಗ್ರಿಟಿ(ಜಿಎಫ್ ಐ) ಬಿಡುಗಡೆ ಮಾಡಿರುವ ವರದಿ ಪ್ರಕಾರ, 2013 ರಲ್ಲಿ ಭಾರತದ ಅಕ್ರಮ ಬಂಡವಾಳದ ಹೊರಹರಿವು 1 .1 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಕಾನೂನುಬಾಹಿರವಾಗಿ ಬಂಡವಾಳದ ರಫ್ತು ಮಾಡುತ್ತಿರುವ ಮೊದಲನೇ ರಾಷ್ಟ್ರ ಚೀನಾ ಆಗಿದ್ದು, ಪ್ರತಿ ವರ್ಷ ಸರಾಸರಿ 139 .23 ಬಿಲಿಯನ್ ಡಾಲರ್( ಒಟ್ಟಾರೆ  1.39 ಟ್ರಿಲಿಯನ್ $) ನಷ್ಟು ಅಕ್ರಮ ಬಂಡವಾಳ ರಫ್ತು ಮಾಡುತ್ತಿದೆ ಎಂದು ವರದಿ ಹೇಳಿದೆ.
104.98 ಬಿಲಿಯನ್ ಡಾಲರ್(ಒಟ್ಟಾರೆ 1 .05 ಟ್ರಿಲಿಯನ್ ಡಾಲರ್) ಅಕ್ರಮ ಬಂಡವಾಳ ರಫ್ತು ಮಾಡುತ್ತಿರುವುದು ರಷ್ಯಾ ಚೀನಾದ ನಂತರದ ಸ್ಥಾನದಲ್ಲಿದ್ದು, ಮೆಕ್ಸಿಕೋ ದಿಂದ  528.44 ಬಿಲಿಯನ್ ಡಾಲರ್(ಒಟ್ಟಾರೆ  52 .84 ಟ್ರಿಲಿಯನ್ ಡಾಲರ್ ) ಅಕ್ರಮ ಬಂಡವಾಳ ರಫ್ತಾಗುತ್ತಿದೆ.
ಭಾರತದ ನಂತರದ ಸ್ಥಾನದಲ್ಲಿ ಮಲೇಷ್ಯಾ ಇದ್ದು, ವಾರ್ಷಿಕವಾಗಿ 41 .85 ಬಿಲಿಯನ್ ಡಾಲರ್ ವಿಶ್ವದಲ್ಲಿ 5 ನೇ ಸ್ಥಾನವನ್ನು ಪಡೆದಿದೆ. ಜಿಎಫ್ಐ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಥಿಕ ತಜ್ಞ ದೇವ್ ಕರ್  ಹಾಗೂ ಕಿರಿಯ ಆರ್ಥಿಕ ತಜ್ಞ ಜೋಸೆಫ್ ಸ್ಪಾಂಜರ್ಸ್, 2004  -2013 ವರೆಗೆ ಅಭಿವೃದ್ಧಿಶೀಲ ಆರ್ಥಿಕತೆ ಇರುವ ರಾಷ್ಟ್ರಗಳಿಂದ ಒಟ್ಟಾರೆ 7 .8 ಟ್ರಿಲಿಯನ್ ಡಾಲರ್ ಮೌಲ್ಯದ ಅಕ್ರಮ ಬಂಡವಾಳ ರಫ್ತಾಗಿದೆ ಎಂದು ಹೇಳಿದ್ದಾರೆ.
ನಿಷೇಧಿತ(ಅಕ್ರಮ) ಆರ್ಥಿಕ ಹರಿವು, ಜಾಗತಿಕ ಜಿಡಿಪಿಯನ್ನು ಸರಾಸರಿ ಶೇ.4 ರಷ್ಟು ಕಡಿಮೆ ಮಾಡುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com