

ನವದೆಹಲಿ: ಕಳೆದ ವರ್ಷದಲ್ಲಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) 2 ಲಕ್ಷ ಕೋಟಿ ಡಾಲರ್ (ರು.126 ಲಕ್ಷ ಕೋಟಿ) ತಲುಪಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
1ಲಕ್ಷ ಕೋಟಿ ಡಾಲರ್ ತಲುಪಲು ಭಾರತಕ್ಕೆ 60 ವರ್ಷ ಬೇಕಾಯಿತು. ನಂತರ 2ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನು ಕೇವಲ ಏಳು ವರ್ಷಗಳಲ್ಲಿ ತಲುಪಿದೆ ಎಂದು ಹೇಳಿದೆ. 2013ರಲ್ಲಿ 1,560 ಡಾಲರ್ ಇದ್ದ ಭಾರತೀಯರ ತಲಾ ಆದಾಯ 2014ರಲ್ಲಿ 1,610 ಡಾಲರ್‍ಗೆ (ಸುಮಾರು ರು.1ಲಕ್ಷ) ಹೆಚ್ಚಿದೆ. 2008ರಲ್ಲಿ ಅಮೆರಿಕದಲ್ಲಿ ಸಬ್ ಪ್ರೈಮ್ ಬಿಕ್ಕಟ್ಟು ಸೃಷ್ಟಿಯಾದ ನಂತರ ಉದ್ಭವಿಸಿದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದಲ್ಲಿ ಭಾರತದ ಆರ್ಥಿಕತೆ ದುಪ್ಪಟ್ಟಾಗಿದೆ.