

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಆಮದು ದರಗಳನ್ನು ಮತ್ತಷ್ಟು ಇಳಿಸಲಾಗಿದೆ. ಹತ್ತು ಗ್ರಾಂ ಚಿನ್ನ ಆಮದು ದರ 382 ಡಾಲರ್‍ಗಳಿಂದ 376 ಡಾಲರ್‍ಗಳಿಗೆ ಇಳಿಸಲಾಗಿದೆ. ಬೆಳ್ಳಿ ಒಂದು ಕೆಜಿ ದರ 516 ಡಾಲರ್‍ಗಳಿಂದ 498 ಡಾಲರ್ ಗಳಿಗೆ ಇಳಿಸಲಾಗಿದೆ.
ಸೀಮಾ ಸುಂಕವನ್ನು ತಪ್ಪಿಸಲು ಆಮದು ಕಂಪನಿಗಳು ಕಡಿಮೆ ದರಪಟ್ಟಿ ಹಾಕಿಸಿಕೊಂಡು ಬರಲಿವೆ. ಅದನ್ನು ತಪ್ಪಿಸಲು ಕೇಂದ್ರ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ (ಸಿಬಿಇಸಿ) ಆಮದು ದರಗಳನ್ನು ನಿಗದಿಗೊಳಿಸಲಿದೆ. ಗುರುವಾರದ ವಹಿವಾಟಿನಲ್ಲಿ ದೇಶೀಯ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ತುಸು ಇಳಿಮುಖ ಕಂಡಿವೆ.
ಕಳೆದ ಜೂನ್‍ನಲ್ಲಿ ದೇಶದ ಚಿನ್ನದ ಆಮದು ಶೇ.37ರಷ್ಟು ಕಡಿಮೆಯಾಗಿದ್ದು 196 ಕೋಟಿ ಡಾಲರ್ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 312 ಕೋಟಿ ಡಾಲರ್ ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಭಾರತ ಪೆಟ್ರೋಲಿಯಂ ಉತ್ಪನ್ನಗಳ ನಂತರ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಉತ್ಪನ್ನ ಚಿನ್ನವಾಗಿದೆ.