ಮುಂಬೈ: ಮುಂಬೈನಲ್ಲಿ ಆರ್ ಬಿಐನ ತ್ರೈಮಾಸಿಕ ದರ ಪರಿಷ್ಕರಣೆ ಸಭೆ ನಡೆಯಲಿರುವಂತೆಯೇ ಸೋಮವಾರ ಜಿಡಿಪಿ ದರ ಪ್ರಕಟಿಸಲಾಗಿದೆ. ಅದರ ಪ್ರಕಾರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಜಿಡಿಪಿ ದರ ಶೇ.7.4ರಷ್ಟು ದಾಖಲಾಗಿದೆ.
ಈ ಮೂಲಕ ಚೀನಾದ ಜಿಡಿಪಿಯನ್ನು ಹಿಂದಿಕ್ಕಲಾಗಿದೆ. ಉತ್ಪಾದನಾ ಕ್ಷೇತ್ರ, ಗಣಿಗಾರಿಕೆ ಮತ್ತು ಸೇವಾ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಲಾಗಿದೆ.
ಗಮನಾರ್ಹ ಅಂಶವೆಂದರೆ ಇದೇ ಹಣಕಾಸು ವರ್ಷದಲ್ಲಿ ಶೇ.7ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇತ್ತು. ಆದರೆ ಅದು ನಿರೀಕ್ಷೆಗೂ ಮೀರಿ ಶೇ.7.4ರಷ್ಟಾಗಿದೆ. ಇದೇ ಅವಧಿಯಲ್ಲಿ ಚೀನಾದ ಜಿಡಿಪಿ 6.9ರಷ್ಟಾಗಿದೆ. ಬ್ರೆಜಿಲ್‍ನದ್ದು ಶೇ.4.2, ರಷ್ಯಾದ್ದು ಶೇ.4.1ರಷ್ಟು ಸಾಧನೆ ಮಾಡಿದೆ.
ದೇಶದ ಹಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದಿದ್ದರೂ ಕೃಷಿ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ಅಂದರೆ ಶೇ.2.2ರಷ್ಟು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಶೇ.8.4ರಷ್ಟಿತ್ತು.