

ನವದೆಹಲಿ: ವಿದೇಶಿ ಹೂಡಿಕೆದಾರರನ್ನು ಸಂತೃಪ್ತಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಪರ್ಯಾಯ ತೆರಿಗೆ ಅಥವಾ ಮ್ಯಾಟ್ ಜಾರಿ ಶಿಫಾರಸು ಕುರಿತ ಎ ಪಿ ಷಾ ಸಮಿತಿ ವರದಿಯನ್ನು ಒಪ್ಪಿಕೊಂಡಿದೆ.
ಮಂಗಳವಾರ ಸಂಜೆ ಈ ವಿಷಯ ತಿಳಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಪ್ರಮುಖವಾಗಿ ಪೂರ್ವ ಆರ್ಥಿಕ ವರ್ಷದ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ಮನ್ನಾ ಶಿಫಾರಸು ಒಳಗೊಂಡ ಷಾ ಸಮಿತಿ ವರದಿ ಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ವರದಿ ಅನುಷ್ಠಾನಕ್ಕೆ ಅಂಗೀಕಾರ ಪಡೆಯಲಾಗುವುದು ಎಂದರು.