ಆನ್ಲೈನ್ ಆಹಾರ ಕೋಟಿಗಳ ಶಕೆ

ನವದೆಹಲಿ: ಸಿಗೋದು ಎರಡು ದಿನ ರಜೆ, ಚೆಂದ ಹೊರಗೆ ಸುತ್ತಾಡೋಣ ಅಂದ್ರೆ ಟ್ರಾಫಿಕ್ಕಿನ ಕಿರಿಕಿರಿ, ಒಳ್ಳೆ ಹೋಟೆಲ್ಗೆ ಹೋಗಿ ಊಟ ಮಾಡ್ಲಿಕ್ಕೂ ಆಗ್ತಿಲ್ಲ ಎಂದು ಕೊರಗುವವರ ಸಂಖ್ಯೆ ಬೆಂಗಳೂರು, ನವದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ಸಿಕ್ಕಾಪಟ್ಟೆ ಕಡಿಮೆಯಾಗಿದೆ!
ಯಾಕಂದ್ರೆ, ಇಲ್ಲಿ ಆನ್ಲೈನ್ ಫುಡ್ ಡಿಲೆವರಿ ಮಾರ್ಕೆಟ್ ಸದ್ದು ಹೆಚ್ಚಾಗಿಯೇ ಕೇಳುತ್ತಿದೆ. ಹೌದು, ಹೀಗಂಥ ಇಂಟರ್ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಎಂಎಐ) ಹೇಳಿದೆ. ಇದರ ಪ್ರಕಾರ, ಭಾರತದಲ್ಲಿ 2014ರ ವೇಳೆಗೆ ಆನ್ಲೈನ್ ಫುಡ್ ಡಿಲೆವರಿ ಮಾರ್ಕೆಟ್ ರು.350 ಕೋಟಿಗೆ ಮುಟ್ಟಿದೆ. ಅಂದರೆ, ಅದೊಂದೇ ವರ್ಷ ಈ ಮಾರುಕಟ್ಟೆಯಲ್ಲಿ ಶೇ.40 ರಷ್ಟು ಹೆಚ್ಚಳ ಕಂಡು ಬಂದಿದೆ. ಅಲ್ಲದೆ, ಇತರೆ ಎಲ್ಲ ಆನ್ಲೈನ್ ಸೇವೆಗಳನ್ನು ಒಟ್ಟುಗೂಡಿಸಿದರೆ 2014ರಲ್ಲಿ ರು.2025 ಕೋಟಿ ವಹಿವಾಟು ನಡೆದಿದೆ. ಇತರೆ ಸೇವೆಗಳಿಗೆ ಹೋಲಿಕೆ ಮಾಡಿದರೆ ಆಹಾರೋದ್ಯಮದಲ್ಲಿ ಶೇ.17 ಹೆಚ್ಚಳ ಕಂಡು ಬಂದಿದೆ. ಇದರಿಂದಾಗಿಯೇ ಝೋಮಾಟೋ, ಫುಡ್ ಫಾಂಡ, ಜಸ್ಟ್ ಈಟ್, ಟೇಸ್ಟಿಖಾನಾ, ಟ್ರಾವೆಲ್ ಖಾನಾ, ಡೋಮಿನೋ ಫಿಜ್ಜಾ, ಫುಡ್ ಮಿಂಗೋ, ಫಾಸೋ, ಬರ್ಗರ್ ನಂತ ಆ್ಯಪ್ಗಳಲ್ಲಿ ವ್ಯವಹಾರ ಕೂಡ ಹೆಚ್ಚಿದೆ.
2010 ರಿಂದ 2014ರ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಇತರೆ ಆನ್ಲೈನ್ ಸೇವೆಗಳು ಶೇ.73 ರಷ್ಟು ಹೆಚ್ಚಳ ಕಂಡಿವೆ. ಅಂದರೆ ಇದರ ವಹಿವಾಟು ರು.2015 ಕೋಟಿಗೆ ಬಂದು ತಲುಪಿದೆ. ಇದರಲ್ಲಿ ಆನ್ಲೈನ್ ಟಿಕೆಟ್, ಆನ್ಲೈನ್ ಪ್ರಯಾಣ, ಆನ್ಲೈನ್ ಫುಡ್ ಆ್ಯಂಡ್ ಗ್ರೋಸರಿ ಡಿಲೆವರಿಯೂ ಸೇರಿವೆ ಎಂದು ಈ ವರದಿ ತಿಳಿಸಿದೆ. ವಿಶೇಷವೆಂದರೆ ಆನ್ಲೈನ್ ಕಮ್ಯೂಟಿಂಗ್ (ಕ್ಯಾಬ್ಗಳು)ಗಳ ಸೇವೆಯಲ್ಲಿ ಸಿಕ್ಕಾಪಟ್ಟೆ ಪ್ರಗತಿಯಾಗಿದೆ. ಒಟ್ಟಾರೆ ಆನ್ಲೈನ್ ವ್ಯವಹಾರ ದಲ್ಲಿ ಇದರ ಪಾಲು ಶೇ.30ರಷ್ಟು. ಅಂದರೆ ಇದರಲ್ಲಿ ರು.600 ಕೋಟಿ ವಹಿವಾಟು ನಡೆದಿದೆ. ಇದು ಆ್ಯಪ್ಗಳ ಮೂಲಕ ಆಗುತ್ತಿರುವ ಸೇವೆ ಎಂಬುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


