ಬೆಂಗಳೂರು: ಜಾಗತಿಕ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್, ಇಸ್ರೇಲ್ ನ ಸಾಫ್ಟ್ವೇರ್ ಸಂಸ್ಥೆ ಕ್ಲೌಡಿನ್ ನಲ್ಲಿ 4 ಮಿಲಿಯನ್ ಡಾಲರ್ (27 ಕೋಟಿ ರೂ) ಹೂಡಿರುವುದಾಗಿ ತಿಳಿಸಿದೆ.
ಮಲ್ಟಿ-ಕ್ಲೌಡ್ ಎಂಬ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಲೌಡಿನ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವುದಾಗಿ ಇನ್ಫೋಸಿಸ್ ಮುಂಬೈನ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.
ಬೆಂಗಳೂರು ಮೂಲದ ಈ ಸಂಸ್ಥೆ ಐದು ವರ್ಷದ ಇಸ್ರೇಲಿ ಸಂಸ್ಥೆಯ ಶೇಕಡಾ ಎಷ್ಟು ಷೇರುಗಳ ತನ್ನ ಪಾಲಾಗಿದೆ ಎಂಬುದನ್ನು ಬಿಟ್ಟುಕೊಟ್ಟಿಲ್ಲ. ಈ ಇಸ್ರೇಲಿ ಸಂಸ್ಥೆ ಅಮೆರಿಕಾದಲ್ಲಿ ಕೂಡ ತನ್ನ ಉಪಸ್ಥಿಯನ್ನು ವಿಸ್ತರಿಸಿಕೊಂಡಿದೆ.
"ಈ ಒಪ್ಪಂದ ಆಗಸ್ಟ್ 15 ಕ್ಕೆ ಸಂಪೂರ್ಣಗೊಳ್ಳಲಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ವಿಪ್ರೋ ಇಂಟರ್ಪ್ರೈಸೆಸ್ ಇಸ್ರೇಲಿ ಮೂಲದ ಏರೋಸ್ಪೇಸ್ ಸಂಸ್ಥೆ ಎಚ್ ಆರ್ ಗಿವೋನ್ ನನ್ನು ಕೊಂಡುಕೊಳ್ಳುತ್ತಿರವುದಾಗಿ ಆಗಸ್ಟ್ 1 ರಂದು ಘೋಷಣೆಯಾದ ಬೆನ್ನಲ್ಲೇ ಈ ಒಪ್ಪಂದವೂ ಹೊರಬಿದ್ದಿದೆ.