ಮಾರುಕಟ್ಟೆಗೆ ಬಲ ತಂದ ಅರ್ಥಿಕ ಸಮೀಕ್ಷೆ; ಸೆನ್ಸೆಕ್ಸ್ 232 ಅಂಕಗಳ ಏರಿಕೆ

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಉತ್ತೇಜನಕಾರಿ ವಾತಾವರಣ ನಿರ್ಮಾಣಗೊಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 232 ಅಂಕಗಳ ಏರಿಕೆ ಕಂಡಿದೆ.
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
Updated on: 

ಮುಂಬೈ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಉತ್ತೇಜನಕಾರಿ ವಾತಾವರಣ ನಿರ್ಮಾಣಗೊಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 232 ಅಂಕಗಳ ಏರಿಕೆ ಕಂಡಿದೆ.

ಅರುಣ್ ಜೇಟ್ಲಿ ಅವರು ಇಂದು ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ ಜಿಡಿಪಿ ದರ ಶೇ.7-7.5ರಷ್ಟು ಬೆಳವಣಿಗೆಯಾಗಿದೆ. ಅಂತೆಯೇ ಭವಿಷ್ಯದಲ್ಲಿ ಶೇ.8ರಿಂದ 10ರವರೆಗೆ ಬೆಳೆಯುವ  ಸಾಧ್ಯತೆ ಇದೆ. ಇದು ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಾತವಾರಣ ನಿರ್ಮಾಣ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 232.43 ಅಂಕಗಳಷ್ಟು ಏರಿಕೆ ಕಾಣುವ ಮೂಲಕ  ಶೇ. 1.01 ಏರಿಕೆಯೊಂದಿಗೆ 23,208.43 ಅಂಕಗಳಿಗೇರಿಕೆಯಾಗಿದೆ.

ಇನ್ನು ನಿಫ್ಟಿ ಕೂಡ 69.05ರಷ್ಟುಅಂಕಗಳನ್ನು ಏರಿಕೆ ಕಾಣುವ ಮೂಲಕ ಶೇ.0.99 7,039.65 ಅಂಕಗಳಿಗೆ ಏರಿಕೆಯಾಗಿದೆ. ಪ್ರಮುಖವಾಗಿ ಬ್ಯಾಕಿಂಗ್ ಕ್ಷೇತ್ರಗಳು ಹೆಚ್ಚು ಲಾಭ ಗಳಿಸಿದೆ. ನಿನ್ನೆ ಕೇಂದ್ರ  ರೈಲ್ವೇ ಸಚಿವ ಸುರೇಶ್ ಪ್ರಭು ಅವರು 2016-17ನೇ ಸಾಲಿನ ರೈಲ್ವೇ ಬಜೆಟ್ ಮಂಡಿಸಿದ ಬಳಿಕ ಷೇರುಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೆನ್ಸೆಕ್ಸ್ 79 ಅಂಕಗಳ ಕುಸಿತಕಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com